`ಬಡವ್ರ ಮಕ್ಕಳು ಬೆಳಿಬೇಕು ಕಣ್ರಯ್ಯ` ಚಿತ್ರದ ಚಿತ್ರೀಕರಣ ಮುಕ್ತಾಯ
Badavara Makkalu Belibeku Kanrayya: ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ರವೀಂದ್ರ ಸೊರಗಾವಿ, ಅನುರಾಧ ಭಟ್, ಕೈಲಾಶ್ ಕೇರ್ ಹಾಡುಗಳಿಗೆ ದನಿ ನೀಡಿದ್ದಾರೆ. ಹಿನ್ನೆಲೆ ಸಂಗೀತ ವಿನು ಮನಸು ಅವರದು.
Badavara Makkalu Belibeku Kanrayya: ಶ್ರೀ ರಾಮಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಿ .ಎಸ್ ವೆಂಕಟೇಶರವರ ನಿರ್ಮಾಣದ, ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ "ಬಡವ್ರ ಮಕ್ಕಳು ಬೆಳಿಬೇಕು ಕಣ್ರಯ್ಯ" ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ. ನವಂಬರ್ 10 ರಂದು ಟ್ರೇಲರ್ ಬಿಡುಗಡೆಯಾಗುತ್ತಿದೆ.
ಮಂಜು ಕವಿ ಅವರು ಸಾಹಿತ್ಯ, ಸಂಭಾಷಣೆ ಬರೆದು ಸಂಗೀತ ಸಂಯೋಜನೆಯೊಂದಿಗೆ ನಿರ್ದೇಶನವನ್ನೂ ಮಾಡಿದ್ದು, ಎಸ್ ಜೆ ಸಂಜಯ್, ಗಿರೀಶ್ ಸಾಕಿ, ಸಂಗೀತ ಶೆಟ್ಟಿ ನಿರ್ದೇಶನ ತಂಡದಲ್ಲಿದ್ದಾರೆ. ರೇಣು ಕುಮಾರ್ ಛಾಯಾಗ್ರಹಣ, ಕರಣ್ ಕುಮಾರ್ ಹಾಗೂ ವೆಂಕಿ ಯುಡಿಐ ಸಂಕಲನವಿರುವ ಈ ಚಿತ್ರಕ್ಕೆ ನಂದ ಮಾಸ್ಟರ್ ಹಾಗೂ ಮೈಸೂರು ರಾಜು ಅವರ ನೃತ್ಯ ನಿರ್ದೇಶನವಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ರವೀಂದ್ರ ಸೊರಗಾವಿ, ಅನುರಾಧ ಭಟ್, ಕೈಲಾಶ್ ಕೇರ್ ಹಾಡುಗಳಿಗೆ ದನಿ ನೀಡಿದ್ದಾರೆ. ಹಿನ್ನೆಲೆ ಸಂಗೀತ ವಿನು ಮನಸು ಅವರದು.
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಸುಚೇಂದ್ರ ಪ್ರಸಾದ್ ಹಾಗೂ ಸಂಗೀತ ಕಾಣಿಸಿಕೊಂಡಿದ್ದಾರೆ. ಅವರ ಮಕ್ಕಳ ಪಾತ್ರದಲ್ಲಿ ರಾಜವರ್ಧನ್, ಲಾವಣ್ಯ, ವೈಭವಿ ಅಭಿನಯಿಸಿದ್ದಾರೆ. ಚಂದ್ರಪ್ರಭ, ವಿನೋದ್ ಗೊಬ್ಬರಗಾಲ, ಟೆನ್ನಿಸ್ ಕೃಷ್ಣ ರೇಖಾ ದಾಸ್, ಮೂಗು ಸುರೇಶ್, ವಿನೋದ್, ಜಗದೀಶ್ ಕೊಪ್ಪ, ಚೈತ್ರ ಕೊಟ್ಟೂರು, ಶಿವಾರೆಡ್ಡಿ, ಮುಖೇಶ್, ಮಂಜು ಪಾವಗಡ, ಸಿಲ್ಲಿ ಲಲ್ಲಿ ಚಿದಾನಂದ್, ಶ್ರೀನಿವಾಸ್ ಗೌಡ ಯಶೋಧ ನಾಗರಾಜ್, ಸುರೇಶ್ ಉದ್ಬೂರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಬಡ ಕುಟುಂಬದಲ್ಲಿ ಹುಟ್ಟಿದ ಮಕ್ಕಳ ಪರಿಸ್ಥಿತಿ, ಮಕ್ಕಳಿಗಾಗಿ ತಂದೆ ತಾಯಿ ಪಡುವ ಕಷ್ಟ, ಬಡತನವನ್ನು ಹೇಗೆ ನಿಭಾಯಿಸಬೇಕು, ಬಡತನದ ಕುಟುಂಬಕ್ಕೆ ಸಮಾಜ ಯಾವ ರೀತಿ ಬೆಲೆ ಕೊಡುತ್ತದೆ ಎಂಬ ವಿಷಯಗಳನ್ನು ಈ ಚಿತ್ರದಲ್ಲಿ ನಿರ್ದೇಶಕ ಮಂಜು ಕವಿ ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ಚಿತ್ರ ಪ್ರೇಕ್ಷಕರ ಗಮನ ಸೆಳೆಯುವಂತೆ ಮೂಡಿಬಂದಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ: ಖ್ಯಾತ ರೀಲ್ಸ್ ಸ್ಟಾರ್ ಆಶ್ಲೀಲ ಖಾಸಗಿ ವಿಡಿಯೊ ಲೀಕ್..! ಲೈವ್‌ನಲ್ಲೇ ಕಣ್ಣೀರಿಟ್ಟ ನಟಿ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.