ಬೆಂಗಳೂರು: ಅಂಬರೀಶ್ ರವರು ಚಿತ್ರರಂಗಕ್ಕೆ ಸಲ್ಲಿಸಿರು ಸೇವೆಯನ್ನು ಗುರುತಿಸಿ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯನ್ನ ಅಂಬರೀಶ್ ರಸ್ತೆ ಎಂದು ಬದಲಿಸಿ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಭಾ.ಮ. ಹರೀಶ್ ಟ್ವೀಟರ್​ ಮೂಲಕ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ ಮನವಿ ಮಾಡಿದ್ದಾರೆ.



COMMERCIAL BREAK
SCROLL TO CONTINUE READING

ಅಂಬರೀಶ್ ರವರು ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯನ್ನ ಅಂಬರೀಶ್ ರಸ್ತೆ ಎಂದು ಬದಲಿಸಿ ಎಂದು ಕೇಳಿಕೊಂಡಿದ್ದಾರೆ. ಈ ಸಂಬಂಧ ಫಿಲ್ಮ್ ಚೇಂಬರ್ ಮೂಲಕ ಶೀಘ್ರದಲ್ಲೇ ಸಿಎಂಗೆ ಮನವಿ ಸಲ್ಲಿಕೆ ಮಾಡಲಾಗುತ್ತದೆ. ಸಭೆ ನಂತರ ಎಲ್ಲಾ ಸದಸ್ಯರ ಒಮ್ಮತದ ಒಪ್ಪಿಗೆ ಮೇರೆಗೆ ನಿರ್ಧಾರ ಮಾಡಲಾಗುತ್ತದೆ ಎಂದು ಭಾ.ಮಾ ಹರೀಶ್​ ಹೇಳಿದ್ದಾರೆ.


ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅಂಬರೀಷ್ ಸಲ್ಲಿಸಿರುವ ಸೇವೆ ಅಪಾರ. ಹಾಗಾಗಿ ಆನಂದ್​ರಾವ್ ವೃತ್ತದಿಂದ ಚಾಲುಕ್ಯ ವೃತ್ತದ ವರೆಗಿನ ರಸ್ತೆಗೆ ಅಂಬರೀಷ್ ರಸ್ತೆ ಎಂದು ಹೆಸರಿಡಬೇಕು. ಇದು ಬರೀ ವಾಣಿಜ್ಯ ಮಂಡಳಿಯ ಅಭಿಪ್ರಾಯವಲ್ಲ, ಅಭಿಮಾನಿಗಳು ಮತ್ತು ಚಿತ್ರೋದ್ಯಮದ ಒತ್ತಾಯ ಎಂದು ಭಾ.ಮಾ ಹರೀಶ್ ತಿಳಿಸಿದ್ದಾರೆ.