Snehit Gowda: ಬಿಗ್ ಬಾಸ್ ಸೀಸನ್ 10ರಲ್ಲಿ 64 ದಿನಗಳ ಜರ್ನಿ ಮುಗಿಸಿರುವ ಸ್ನೇಹಿತ್ ಇದೀಗ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 9ನೇ ವಾರ ದೊಡ್ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಸ್ನೇಹಿತ್ ಗೌಡಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ?


“ಅಪ್ಪಾ ಅಮ್ಮಾ.. ನಿಮಗೊಂದು ಮಾತು ಹೇಳಬೇಕು. ನಿಮ್ಮನ್ನು ಇದುವರೆಗೂ ತಲೆ ತಗ್ಗಿಸುವಂತಹ ಕೆಲಸ ಮಾಡಿಲ್ಲ. ಮಾಡಿದ್ದರೂ ಅದು ತಿಳಿಯದೇ ನಡೆದ ಘಟನೆ, ಹೀಗಾಗಿ ನಿಮ್ಮಿಬ್ಬರಲ್ಲಿ ನಾನು ಕ್ಷಮೆ ಕೇಳುತ್ತೇನೆ. ಬೇರೆ ಯಾರಿಗೂ Sorry ಕೇಳಲ್ಲ… ನಿಮ್ಮಿಬ್ರಿಗೆ ಮಾತ್ರ” ಎಂದು ತಂದೆ ತಾಯಿಯನ್ನು ಅಪ್ಪಿಹಿಡಿದುಕೊಂಡು ಹೇಳಿದ್ದಾರೆ.


ಈ ಮಾತುಗಳನ್ನು ಕೇಳಿದ ಅವರ ಪೋಷಕರು ಭಾವುಕರಾಗಿ, “ನೀನು ನಮಗಾಗಿ ಎಷ್ಟೆಲ್ಲಾ ಮಾಡಿದ್ದೀಯಾ.. ನಿನೇನು ತಪ್ಪು ಮಾಡಿಲ್ಲ. ಹಾಗನ್ನಬೇಡ” ಎನ್ನುತ್ತಾ ತಬ್ಬಿಹಿಡಿದುಕೊಂಡು ಕಣ್ಣೀರು ಹಾಕಿದ್ದಾರೆ.


ಇನ್ನು ಇದಕ್ಕೂ ಮುನ್ನ ಜಿಯೋ ಸಿನಿಮಾ ಆಪ್’ನಲ್ಲಿ ಸಂದರ್ಶನ ನೀಡಿದ್ದ ಸ್ನೇಹಿತ್, “64 ದಿನಗಳ ಕಾಲ ಬಿಗ್‌ ಬಾಸ್ ಮನೆಯಲ್ಲಿದ್ದು ಈಗ ಹೊರಗೆ ಬಂದಿದ್ದೀನಿ. ಆದರೆ ಒಂದೇ ಒಂದು ಕ್ಷಣದಲ್ಲೂ ನನಗೆ ಪಶ್ಚಾತ್ತಾವಿಲ್ಲ” ಎಂದಿದ್ದಾರೆ.


ಇದನ್ನೂ ಓದಿ: BBK 10: ಫೇರ್ ಆಗಲು ಹೋಗಿದ್ದೇ ಬ್ಯಾಕ್‌ಫೈರ್ ಆಯ್ತು! 64 ದಿನಗಳ ಸುಧೀರ್ಘ ಪ್ರಯಣದ ಬಗ್ಗೆ ಸ್ನೇಹಿತ್‌ ಮಾತು


“ಆದರೆ ನನಗೆ ಕ್ಯಾಪ್ಟನ್ ಆಗಿ ದುಪ್ಪಟ್ಟು ಅಧಿಕಾರ ಬಂದಾಗ ಒಂದಿಷ್ಟು ತಪ್ಪುಗಳನ್ನು ಮಾಡಿದ್ದೆ. ಆ ತಪ್ಪುಗಳಿಂದ ಕೆಲವರು ತೊಂದರೆಯನ್ನೂ ಅನುಭವಿಸಿದ್ದಾರೆ. ಆ ಪಶ್ಚಾತಾಪ ನನ್ನನ್ನು ಕೊನೆಯವರೆಗೂ ಕಾಡುತ್ತದೆ. ಅದೊಂದು ಬಿಟ್ಟರೆ, ನನ್ನ ಫ್ರೆಂಡ್ಸ್ ಜೊತೆ ಹೇಗಿರ್ತೀನೋ ಹಾಗೇ ಇದ್ದೆ” ಎಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ