ಬಿಗ್‌ಬಾಸ್ ಮನೆಯಾಯ್ತು ರಣರಂಗ!! ತ್ರಿವಿಕ್ರಮ್ ಚೈತ್ರ ಕುಂದಾಪುರ ಜಗಳ.. ರಜತ್ ತಲೆ ಬೋಳಿಸಿದ ಉಗ್ರಂ ಮಂಜು..!
BBK 11: ಬಿಗ್‌ಬಾಸ್ ಸೀಸನ್ 11 ಅನಿರೀಕ್ಷಿತ ತಿರುವುಗಳಿಂದ ಸಾಗುತ್ತಿದೆ. ಶೋಭಾ ಶೆಟ್ಟಿ ಈ ವಾರ ಮನೆಯಿಂದ ಹೊರ ಹೋಗುವ ನಿರ್ಧಾರ ಮಾಡಿ, ಮನೆಯಿಂದ ಹೊರಬಂದಿದ್ದು, ಜನರಿಗೆ ಶಾಕ್ ಕೊಟ್ಟಿದೆ. ವೈಲ್ಡ್ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿಯವರ ಈ ನಿರ್ಧಾರ ಬಿಗ್ ಬಾಸ್ ಅನ್ನು ಮತ್ತಷ್ಟು ಕುತೂಹಲವಾಗಿಸಿದೆ.
BBK 11: ಬಿಗ್‌ಬಾಸ್ ಸೀಸನ್ 11 ಅನಿರೀಕ್ಷಿತ ತಿರುವುಗಳಿಂದ ಸಾಗುತ್ತಿದೆ. ಶೋಭಾ ಶೆಟ್ಟಿ ಈ ವಾರ ಮನೆಯಿಂದ ಹೊರ ಹೋಗುವ ನಿರ್ಧಾರ ಮಾಡಿ, ಮನೆಯಿಂದ ಹೊರಬಂದಿದ್ದು, ಜನರಿಗೆ ಶಾಕ್ ಕೊಟ್ಟಿದೆ. ವೈಲ್ಡ್ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿಯವರ ಈ ನಿರ್ಧಾರ ಬಿಗ್ ಬಾಸ್ ಅನ್ನು ಮತ್ತಷ್ಟು ಕುತೂಹಲವಾಗಿಸಿದೆ.
ಎಲಿಮಿನೇಷನ್ ಬಿಸಿಯಿಂದ ಚೇತರಿಸಿಕೊಂಡಿರುವ ಬಿಗ್‌ಬಾಸ್ ಮನೆಯ ಸ್ಪರ್ಧಿಗಳು, ಈ ವಾರವನ್ನು ಹೊಸ ಟಾಸ್ಕ್‌ನೊಂದಿಗೆ ಆರಂಭಿಸಿದ್ದಾರೆ. ಇನ್ನೂ, ಮನೆಯಲ್ಲಿರುವ ಸ್ಪರ್ಧಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ವಿರೋಧಿ ಗುಂಪಿನ ಸ್ಪರ್ಧಿಗಳು ನೀಡಿದ ಟಾಸ್ಕ್ ಅನ್ನು ಎದುರಾಳಿ ಗುಂಪಿನ ತಂಡದ ಆಟಾಗರರು ನಿಬಾಯಿಸಬೇಕಿದೆ.
ಈ ಟಾಸ್ಕ್‌ನ ಮೂಲಕ ಬಿಗ್‌ಬಾಸ್ ಮನೆ ರಣರಣಗವಾಗುವಂತೆ ಗೋಚರಿಸುತ್ತಿದೆ, Eಕೆಂದರೆ ಇದೀಗ ಕಲರ್ಸ್ ವಾಹಿನಿ ರಿಲೀಸ್ ಮಾಡಿರುವ ಪ್ರೋಮೋದಲ್ಲಿ ಗೌತಮಿ ಜಾದಲ್ ಅವರಿಗೆ ಹಾಗಲಕಾಯಿ ತಿನ್ನುವ ಚಾಲೆಂಜ್ ನೀಡಲಾಗಿದ್ದು, ಹಾಗಲಕಾಯಿಯನ್ನು ಸೇವಿಸುತ್ತಿದ್ದಂತೆ ಗೌತಮಿ ಅವರು ಚೀರಾಡಲು ಆರಂಭಿಸಿದ್ದಾರೆ.
ಇನ್ನೂ, ಮೊತ್ತೊಂದೆಡೆ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ರಜತ್ ಹಾಗೂ ಉಗ್ರಂ ಮಂಜು ಅವರ ಮಧ್ಯೆ ಕಾಳಗ ಮುಗಿಯದೆ ಮುಂದುವರೆದಿದೆ, ಈ ಟಾಸ್ಕ್‌ನಲ್ಲಿ ಬೇಕಂತಲೇ ಉಗ್ರಂ ಮಂಜು ಅವರು ರಜತ್ ಅವರನ್ನು ಟಾರ್ಗೆಟ್ ಮಾಡಿ ತಲೆ ಬೋಳಿಸಿಕೊಳ್ಳುವಂತೆ ಮಾಡಿದ್ದಾರೆ. ಬಿಗ್ ಬಾಸ್ ಪ್ರತಿ ಸೀಸನ್‌ನಲ್ಲಿ ಇಂತಹದ್ದೊಂದು ಘಟನೆ ನಡೆಯುತ್ತಿದೆ.
ಕಳೆದ ಸೀಸನ್‌ಗಳಲ್ಲಿಯೂ ಕೂಡ, ಸೀರಿಯಲ್ ನಟ ಚಂದನ್ ಅವರು ತಮ್ಮ ತಲೆ ಬೋಳಿಸಿಕೊಂಡಿದ್ದರು. ಇನ್ನೂ ಕಳೆದ ಸೀಸನ್‌ನಲ್ಲಿಯೂ ಕೂಡ ತುಕಾಲಿ ಸಂತೋಷ್ ಅವರು ತಮ್ಮ ತಲೆ ಬೋಳಿಸಿಕೊಂಡಿದ್ದರು. ಇದೀಗ ರಜತ್ ಅವರ ಸರದಿ.
ಸುಮ್ಮನೆ ಇದ್ದ ರಜತ್ ಅನ್ನು ಮಂಜು ಕೆದಕಿದ್ದಾರೆ, ಟಾಸ್ಕ್ ಹೆಸರಿನಲ್ಲಿ ಅವರ ತಲೆ ಬೋಳಿಸಿಕೊಳ್ಳುವಂತೆ ಮಾಡಿದ್ದಾರೆ. ಖಂಡಿತಾ ರಜತ್ ಅವರು ಮಂಜು ಅವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾರೆ, ಈ ನಟೆಗೆ ತಕ್ಕ ಉತ್ತರ ಕೊಡುತ್ತಾರೆ ಎಂದು ಇದೀಗ ಪ್ರೇಕ್ಷಕರು ಕಾಮೆಂಟ್ ಮಾಡುತ್ತಿದ್ದು, ಇನ್ನೂ ಮುಂದೆ ಬಿಗ್ ಬಾಸ್‌ನಲ್ಲಿ ಅಸಲಿ ಆಟ ಶುರು ಎಂಬುದು ಗೊತ್ತಾಗುತ್ತಿದೆ.
ಮತ್ತೊಂದೆಡೆ ತ್ರಿವಿಕ್ರಮ್ ಹಾಗೂ ಚೈತ್ರ ಕುಂದಾಪುರ ಅವರ ನಡುವೆ ಬೆಂಕಿ ಹೊತ್ತಿಕೊಂಡಿದ್ದು, ರಿಲೀಸ್ ಆಗಿರುವ ಪ್ರೋಮೋ ನೋಡಿ ಪ್ರೇಕ್ಷಕರು ಇಂದಿನ ಎಪಿಸೋಡ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.