Bhagya Got Wedding Card In Temple: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಮನೆಯಲ್ಲಿ ದೊಡ್ಡ  ರಾದ್ಧಾಂತ ಶುರುವಾದ ಮೇಲೆ, ಮನೆ ಎರಡು ಭಾಗವಾಗಿ ಮನೆಮಂದಿ ಬೇರೆ ಬೇರೆಯಾದ ನಂತರ ತಾಂಡವ್ ಹಾಗೂ ಶ್ರೇಷ್ಠಾಗೆ ಅನುಕೂಲವಾಗಿದೆ. ಮೊದಲು ಇವರಿಬ್ಬರು ಎಂಗೇಜ್ಮೆಂಟ್ ಮಾಡಿಕೊಂಡರು. ಇದೀಗ ಮದುವೆಯಾಗುವುದಕ್ಕೆ ಹೊರಟಿದ್ದಾರೆ. ಆದರಿಂದ ತಾಂಡವ್‌ ಹಾಗೂ ಶ್ರೇಷ್ಠ ಲಗ್ನ ಪತ್ರಿಕೆಯನ್ನು ಪೂಜೆ ಮಾಡಿಸಲು ದೇವಸ್ಥಾನಕ್ಕೆ ಬಂದಿದ್ದಾರೆ. 


COMMERCIAL BREAK
SCROLL TO CONTINUE READING

ಇತ್ತ ಕೆಲಸ ಸಿಕ್ಕಿದ ಖುಷಿಯಲ್ಲಿ ಭಾಗ್ಯಾ ಕೂಡ ದೇವರ ದರ್ಶನ್‌ ಪಡೆಯಲು  ದೇವಸ್ಥಾನಕ್ಕೆ ಬಂದಿದ್ದಾಳೆ. ಭಾಗ್ಯಾ ದೇವರಿಗೆ ನಮಸ್ಕಾರ ಮಾಡಿ, ಅರಳಿಕಟ್ಟೆಯನ್ನು ಸುತ್ತು ಹಾಕುತ್ತಿದ್ದಳು. ಇದೇ ಸಂದರ್ಭದಲ್ಲಿ ಭಾಗ್ಯಾ ಶ್ರೇಷ್ಠಾಳ ಲಗ್ನ ಪತ್ರಿಕೆಯನ್ನು ಅರ್ಚಕರಿಂದ ತೆಗೆದುಕೊಂಡು ಹೋಗಿದ್ದಾಳೆ ಎನ್ನಲಾಗಿದೆ. ಅದು ಭಾಗ್ಯಾನಾ ಅಥವಾ ಬೇರೆ ಯಾರು ಅಂತ ಸ್ಪಷ್ಟತೆ ಸಿಕ್ಕಿಲ್ಲ. ಆದರೆ ಶ್ರೇಷ್ಠಾ ಅರ್ಚಕರು ಹೇಳಿದ್ದಕ್ಕೆ, ಅದು ಭಾಗ್ಯಾ ಎಂದೇ ನಂಬಿದ್ದಾಳೆ. 


ಇದನ್ನೂ ಓದಿ: Bhagyalakshmi Serial: ಅಂತು ಇಂತು ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ಭಾಗ್ಯಗೆ ಕೆಲಸ ಸಿಕ್ತು: ಗಂಡ ಹಾಕಿರುವ ಸವಾಲ್‌ ಗೆಲ್ಲುತ್ತಾಳಾ??


ಅದೇ ವೇಳೆ ಶೇಷ್ಠ ಭಾಗ್ಯಾ ಧರಿಸಿದ್ದ ಸೀರೆ ಕಲರ್‌ ನೋಡಿ ಹೋಯ್ ಮೆರುನ್ ಕಲರ್ ಸೀರೆ ಉಟ್ಟವರೆ, ಸಾಕು ಪ್ರದಕ್ಷಿಣೆ ಹಾಕಿದ್ದು ಬನ್ನಿ ಎಂದಿದ್ದಾಳೆ.  ಆಗ ಭಾಗ್ಯಾ ತಿರುಗಿ ನೋಡಿದಾಗ ಕಣ್ಣಿಗೆ ಶ್ರೇಷ್ಠಾ ಮತ್ತು ತಾಂಡವ್ ಬಿದ್ದಿದ್ದಾರೆ. ಇವರಿಬ್ಬರನ್ನು ನೋಡಿ ಶಾಕ್‌ ಆದ ಭಾಗ್ಯಾ, ಏನು ನೀವಿಬ್ಬರು ದೇವಸ್ಥಾನದಲ್ಲಿ. ಅದರಲ್ಲೂ ಶ್ರೇಷ್ಠಾ ಅವರ ಜೊತೆಗೆ ಎನ್ನುತ್ತಾಳೆ. ಅವಾಗ ಇವರಿಬ್ಬರು ಭಯ ಪಡುತ್ತಾರೆ.


ಹೆಂಡತಿಯ ಮಾತಿಗೆ ಭಯ ಪಟ್ಟು ತಡಬಡಾಯಿಸಿದಾಗ, ಶ್ರೇಷ್ಠಾ ನನ್ನ ಕಾರು ಕೆಟ್ಟು ಹೋಯ್ತು ಅದಕ್ಕೆ ತಾಂಡವ್ ಸರ್ ಜೊತೆಗೆ ಡ್ರಾಪ್ ತೆಗೆದುಕೊಂಡೆ ಎಂದು ಸುಳ್ಳು ಹೇಳಿದ್ದಾಳೆ. ಅದೇ ಸಮಯದಲ್ಲಿ ತಕ್ಷಣ ಮಾತುಮರೆಸುವುದಕ್ಕೆ  2 ಲಕ್ಷ ಹಣದ ಬಗ್ಗೆ ನೆನಪಿಸಿದ್ದಾಳೆ. ಭಾಗ್ಯಾ ಅದಕ್ಕೆ ಉತ್ತರ ನೀಡಿ ಮುಂದೆ ಹೋಗುತ್ತಾಳೆ. ಇದನ್ನು ನೋಡಿ ಶ್ರೇಷ್ಠಾ ಖುಷಿಯಾದರೆ, ತಾಂಡವ್‌  ಟೆನ್ಷನ್‌ನಲ್ಲಿ ದುಡ್ಡಿನ ಮನೆ ಹಾಳಾಗ. ಅವಳ ಬ್ಯಾಗ್‌ನಲ್ಲಿ ಇನ್ವಿಟೇಷನ್ ಇದೆ. ಅದರ ಮೇಲೆ ನಮ್ಮಿಬ್ಬರ ಫೋಟೋ ಬೇರೆ ಅಂಟಿಸಿದ್ದೀಯ ಎಂದು ಬೈಯುತ್ತಾನೆ.


ಇದನ್ನೂ ಓದಿ: Kaustubha Mani: ಬಾಲಿಯಲ್ಲಿ ಹನಿಮೂನ್‌ ಎಂಜಾಯ್‌ ಮಾಡುತ್ತಿರುವ ʻನನ್ನರಸಿ ರಾಧೆʼ ಸೀರಿಯಲ್‌ ಸುಂದರಿ!!


ನಂತರ ತಾಂಡವ್‌ ಹೇಗಾದರೂ ಮಾಡಿ ಆ ಲಗ್ನ ಪತ್ರಿಕೆ ತೆಗೆದುಕೊಳ್ಳಬೇಕೆಂದು ಡ್ರಾಪ್ ಮಾಡುವ ನೆಪದಲ್ಲಿ ಭಾಗ್ಯಾಳನ್ನು ಮಾತನಾಡಿಸಿದ್ದಾ‌ನೆ. ಗಂಡನ ನಾಟಕದ ಬಗ್ಗೆ ತಿಳಿದ ಭಾಗ್ಯಾ ತಾಂಡವ್ ಮಾತಿಗೆ ಓಕೆ ಎಂದು ಹೇಳುತ್ತಾಳೆ. ಬಳಿಕ ತಾಂಡವ್  ಹೆಂಡತಿಯ ಬ್ಯಾಗ್ ತೆಗೆದುಕೊಂಡು ಕಾರ್ಡ್ ಹುಡುಕುತ್ತಾನೆ. ಆದರೆ ಆತನಿಗೆ ತಕ್ಷಣಕ್ಕೆ ಸಿಗಲಿಲ್ಲ. ಇದನ್ನು ಗಮನಿಸಿದ ಭಾಗ್ಯಾ ಪ್ರಶ್ನೆ ಮಾಡಿದಾಗ, ತಾಂಡವ್ ಶಾಕ್ ಆಗಿದ್ದಾನೆ. ಹಾಗಿದ್ರೆ ಲಗ್ನ ಪತ್ರಿಕೆ ಸೇರಿದ್ದು ಯಾರ ಕೈಗೆ? ಇದನ್ನು ಮುಂಬರುವ ಸಂಚಿಕೆಯಲ್ಲಿ ನೋಡಿ ತಿಳಿಯಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.