Bhagya Is Struggling To Arrange Amount: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ತಾಂಡವ್‌ ಮನೆಯ ಖರ್ಚಿಗೆ  ಒಂದು ಪೈಸೆ ದುಡ್ಡು ಕೊಡುತ್ತಿಲ್ಲ. ಈತ ಭಾಗ್ಯಾಗೆ ಮನೆಯ ಖರ್ಚಿನಲ್ಲಿ ಅರ್ಧ ನೀನೇ ನೋಡಿಕೊಳ್ಳಬೇಕು ಎಂದು ಕಂಡಿಷನ್‌ ಹಾಕಿದ್ದಾನೆ. ಆತನ ಕಂಡೀಷನ್‌ ಒಪ್ಪಿಕೊಂಡಿರುವ ಭಾಗ್ಯಾ ಹಣ ಹೊಂದಿಸಲು ಆಗದೆ ಕಷ್ಟ ಪಡುತ್ತಿದ್ಧಾಳೆ. ಈಕೆ ಅತ್ತೆ ಮಾವನಿಗೆ ತಿಳಿಯದಂತೆ ಹೋಟೆಲ್‌ವೊಂದರಲ್ಲಿ ಕಾಫಿ ಮಾಡುವ ಕೆಲಸ ಹುಡುಕಿಕೊಂಡಿದ್ದಾಳೆ.


COMMERCIAL BREAK
SCROLL TO CONTINUE READING

ಭಾಗ್ಯಾ ಮನೆ ಇಎಂಐ ಕಟ್ಟಬೇಕು, ಮಕ್ಕಳನ್ನು ಬೆಳೆಸಬೇಕು, ಮನೆ ರೇಷನ್‌, ಲೈಟ್‌ ಬಿಲ್‌ ಎಲ್ಲದಕ್ಕೂ ಹಣ ಹೊಂದಿಸಬೇಕು ಎಂದು ಕಷ್ಟಪಡುತ್ತಿರುತ್ತಾಳೆ. ಇಂತಹ ಸಮಯದಲ್ಲೇ ಶ್ರೇಷ್ಠಾ ಮನೆಗೆ ಬಂದು ಲಕ್ಷ್ಮಿ ಮದುವೆ ಸಮಯದಲ್ಲಿ ತಾನು ಕೊಟ್ಟಿದ್ದ 2 ಲಕ್ಷ ರೂ. ಹಣವನ್ನು ವಾಪಸ್‌ ಕೊಡುವಂತೆ ಕೇಳಿದ್ದಾಳೆ. ಆದರಿಂದ ಭಾಗ್ಯಾಗೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂಬುದನ್ನು ತಿಳಿಯುತ್ತಿಲ್ಲ. ಇತ್ತ ಸೊಸೆಯ ಕಷ್ಟ ಅರ್ಥ ಮಾಡಿಕೊಂಡ ಧರ್ಮರಾಜ್‌ ಪೆನ್ಶನ್‌ ಹಣದಿಂದ ಸಾಲ ತೀರಿಸೋಣ ಎಂದು ಬಂದರೆ ಅಕೌಂಟ್‌ ಬ್ಲಾಕ್‌ ಆಗಿದೆ. ಸಮಸ್ಯೆ ಬಗ್ಗೆ ಮ್ಯಾನೇಜರ್‌ ಎಷ್ಟೇ ವಿವರಿಸುತ್ತಿದ್ದರೂ ಕುಸುಮಾಗೆ ಮಾತ್ರ ಅರ್ಥವಾಗುತ್ತಿರುವುದಿಲ್ಲ.


ಇದನ್ನೂ ಓದಿ: Avneet Kaur: "ಬಂಟಿ ನಿಮ್ಮ ಸೋಪು ಸ್ಲೋನಾ" ಅಂತ ಡೈಲಾಗ್‌ ಹೊಡೆದ ಲೈಫ್‌ಬಾಯ್‌ ಬೆಡಗಿ ಈಗ ಹೇಗಿದ್ದಾರೆ ಗೊತ್ತೇ??


ಕುಸುಮಾ ‌ಮ್ಯಾನೇಜರ್‌ ಹತ್ತಿರ ನಮ್ಮ ಹಣವನ್ನು ನಾವು ಕೇಳುತ್ತಿದ್ದೇವೆ, ಇವತ್ತು ದುಡ್ಡು ಇಲ್ಲದೆ ನಾನು ಹೊರಗೆ ಹೋಗುವುದೇ ಇಲ್ಲ. ನಮಗೆ ಬಹಳ ಕಷ್ಟ ಇದೆ. ಅಂತದ್ದರಲ್ಲಿ ನೀವು ಈ ರೀತಿ ಹೇಳಿದರೆ ಹೇಗೆ ಎಂದು ಪ್ರಶ್ನೆ ಮಾಡುತ್ತಾಳೆ. ಕೊನೆಗೆ ಧರ್ಮರಾಜ್‌, ಕುಸುಮಾಳನ್ನು ಸಮಾಧಾನ ಮಾಡಿಕೊಂಡು ಬಂದರೆ, ಇನ್ನೊಂದೆಡೆ  ಭಾಗ್ಯಾ ಕೂಡಾ ಹೋಟೆಲ್‌ನಲ್ಲಿ ಸಿಕ್ಕಿದ್ದ ಕೆಲಸ ಕಳೆದುಕೊಳ್ಳುತ್ತಾಳೆ. ಭಾಗ್ಯಾ ಹೋಟೆಲ್‌ ಕೆಲಸಕ್ಕೆ ಸ್ವಲ್ಪ ತಡವಾಗಿ ಹೋದ ಕಾರಣ ಓನರ್‌ ಮಗಳು ಭಾಗ್ಯಾಗೆ ಜೋರು ಮಾಡಿ ಕೈ ಹಿಡಿದು ಹೋಟೆಲ ಹೊರಗೆ ದಬ್ಬುತ್ತಾಳೆ. ಆಗ ಭಾಗ್ಯಾ ಎಷ್ಟೇ ಮನವಿ ಮಾಡಿಕೊಂಡರು ಆಕೆಯ ಮನಸ್ಸು ಕರಗುವುದಿಲ್ಲ.


ಮನೆಗೆ ಭಾಗ್ಯಾ ಬೇಸರದಲ್ಲಿ ಹೋದಾಗ, ಅದೇ ಸಮಯದಲ್ಲೇ ಕುಸುಮಾ ಕೂಡಾ ಮನೆಗೆ ಬಂದು, ಮನೆ ತುಂಬಾ ಲೈಟ್‌ ಉರಿಯುವುದನ್ನು ನೋಡಿ ಏಕೆ ಹೀಗೆ ಲೈಟ್‌ ಉರಿಸುತ್ತಿದ್ದೀರಿ. ನಿಮ್ಮಿಷ್ಟ ಬಂದ ಹಾಗೆ ಮಾಡಿ, ನಾವು ಕೋಟ್ಯಾಧೀಶ್ವರರು ಎಷ್ಟ ಕರೆಂಟ್‌ ಬಿಲ್‌ ಬಂದರೂ ಕಟ್ಟಬಹುದು. ಭಾಗ್ಯಾ ನಿನಗೆ ಮಕ್ಕಳನ್ನು ಶಿಸ್ತಿನಿಂದ ಬೆಳೆಸಲು ಗೊತ್ತಿಲ್ಲ ಎಂದು ಕೂಗಾಡುತ್ತಾಳೆ. ಅತ್ತೆ ಈ ರೀತಿ ಆಡುತ್ತಿರುವುದನ್ನು ನೋಡಿ ಭಾಗ್ಯಾ ಹೀಗೆಕೆ ಮಾಡುತ್ತಿದ್ದಾರೆಂದು ಅಂದುಕೊಳ್ಳುತ್ತಾಳೆ.


ಇದನ್ನೂ ಓದಿ: Anupama Gowda: "ನಿರ್ದೇಶಕರೊಬ್ಬರು ಕಥೆ ಹೇಳಬೇಕು ಎಂದಾಗ..": ಕಾಸ್ಟಿಂಗ್‌ ಕೌಚ್‌ನ ಸತ್ಯ ಬಿಚ್ಚಿಟ್ಟ ಕಿರುತೆರೆ ನಟಿ!


ಭಾಗ್ಯಾ, ಧರ್ಮರಾಜ್‌ ಹಾಗೂ ಕುಸುಮಾ ಒಂದು ಕಡೆ ಕಷ್ಟ ಪಡುತ್ತಿದ್ದರೆ, ಮತ್ತೊಂದು ಕಡೆಗೆ ಶ್ರೇಷ್ಠ ಹಾಗೂ ತಾಂಡವ್‌ ಖುಷಿಯಿಂದ ಒಬ್ಬರ ಕೈ ಇನ್ನೊಬ್ಬರು ಹಿಡಿದುಕೊಂಡು ಓಡಾಡುತ್ತಿದ್ದಾರೆ. ತಾಂಡವ್‌ ಶೇಷ್ಠ ಬಳಿ ʻಭಾಗ್ಯಾ ಕಷ್ಟ ಪಡುತ್ತಿರುವುದನ್ನು ನೋಡುತ್ತಿದ್ದರೆ ನನಗೆ ಬಹಳ ಖುಷಿಯಾಗುತ್ತಿದೆ. ಶ್ರೇಷ್ಠಾ, ನೀನು ಇದೇ ರೀತಿ ಭಾಗ್ಯಾಗೆ ಕಷ್ಟ ಕೊಡುತ್ತಿರು. ಹಣ ಹೊಂದಿಸಲಾಗದೆ ಅವಳು ನನ್ನ ಬಳಿ ಬಂದು ಡಿವೋರ್ಸ್‌ ಪೇಪರ್‌ಗೆ ಸಹಿ ಹಾಕಬೇಕುʼ ಎಂದು ಹೇಳುತ್ತಾನೆ. ಅದೇ ಸಂದರ್ಭದಲ್ಲಿ ಶ್ರೇಷ್ಠ ಮನಸ್ಸಿನಲ್ಲೇ ನೀನು ನನಗೆ ಸಿಗುವಂತಿದ್ದರೆ ಭಾಗ್ಯಾಗೆ ಇನ್ನಷ್ಟು ಹಿಂಸೆ ಕೊಡುತ್ತೇನೆ ಎಂದು ಮಾತಾಡಿಕೊಳ್ಳುತ್ತಾಳೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.