Gautham Birthday In Amruthadhaare Serial: ಜೀ ಕನ್ನಡದಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರವಾಹಿಯಲ್ಲಿ ಭೂಮಿಕಾ ತನ್ನ ಗಂಡ ಗೌತಮ್ ಗಾಗಿ ಸರ್ಪ್ರೈಸ್ ಬರ್ತ್‌ಡೇ ಪಾರ್ಟಿ ಅನ್ನು ಅರೇಂಜ್ ಮಾಡಿದ್ದಾಳೆ. ಅಷ್ಟು ,ಮಾತ್ರವಲ್ಲದೇ ಗೌತಮ್ ಗೋಸ್ಕರ ಭೂಮಿಕಾ ತಾನೇ ಕೇಕ್ ತಯಾರಿಸಿ ರೂಮ್ಗೆ ತಂದು ಅಲ್ಲಿಯೇ ಕಟ್ ಮಾಡಿಸಿದ್ದಾಳೆ. ಹೆಂಡತಿ ಮಾಡಿದ ಪೂರ್ತಿ ಕೇಕ್‌ ಅನ್ನು ಗೌತಮ್ ಒಬ್ಬನೇ ತಿಂದು, ತನ್ನ ಹುಟ್ಟುಹಬ್ಬದ ದಿನ ಫುಲ್ ಖುಷಿಯಾಗಿದ್ದಾನೆ.


COMMERCIAL BREAK
SCROLL TO CONTINUE READING

ಇನ್ನೊಂದು ಕಡೆ ಜಯದೇವ ಪತ್ನಿ ಮಲ್ಲಿ ಗೌತಮ್‌ಗೆ ಇಷ್ಟವೆಂದು ಹೆಸರು ಬೇಳೆ ಪಾಯಸ ಮಾಡಿ ಕೊಟ್ಟಿದ್ದಾಳೆ. ಆ ಪಾಯಸವನ್ನು ಗೌತಮ್ ಹಾಗೂ ಭೂಮಿಕಾ ಇಬ್ಬರೂ ಹಂಚಿಕೊಂಡು ಸವಿದು ಸಂತೋಷ ಪಡುತ್ತಾರೆ. ಅದೇ ಸಂದರ್ಭದಲ್ಲಿ ಅಪರ್ಣಾ ಗೌತಮ್ ನನ್ನು ಆದಷ್ಟು ಬೇಗ ಮಗು ಕೊಡು ಎಂದು ಕೇಳಿ ಮುಜುಗರವಾಗುವಂತೆ ಮಾಡಿದ್ದಾಳೆ. ಶಕುಂತಲಾ ಕೂಡ ಗೌತಮ್ ಬರ್ತಡೇ ಪಾರ್ಟಿಗೆ ತನ್ನ ಸ್ನೇಹಿತರನ್ನು ಆಗಮಿಸಿದ್ದಾರೆ. ಇನ್ನು ಭೂಮಿಕಾ ತಾಯಿ ಮಂದಾಕಿನಿ  ಅಳಿಯ ಗೌತಮ್ ಹುಟ್ಟುಹಬ್ಬಕ್ಕೆ ಬರಲು ಉಡುಗೊರೆ ಕೊಡುವ ಬಗ್ಗೆ ಪ್ಲಾನ್ ಮಾಡಿದ್ದಾಳೆ.


ಇದನ್ನೂ ಓದಿ: Manvitha Kamath: ಟಗರು ಪುಟ್ಟಿಯ ಮದುವೆ ಲವ್‌ ಮ್ಯಾರೇಜಾ? ಅರೇಂಜಾ? ಕೆರಿಯರ್‌ ಬಗ್ಗೆ ಈ ನಟಿ ಹೇಳಿದ್ದೇನು!


ಮಂದಾಕಿನಿ ಚೀಟಿ ದುಡ್ಡನ್ನು ತೆಗೆದುಕೊಳ್ಳಲು ಮುಂದಾಗಿದ್ದಾಳೆ. ಆದರೆ, ಅನಿವಾರ್ಯವಾಗಿ ಹಣ ಕೈಗೆ ಸೇರದಿದ್ದರೂ, ಗೌತಮ್ ಹುಟ್ಟು ಹಬ್ಬಕ್ಕೆ ಭಾರಿ ಗಿಫ್ಟ್ ನೀಡಿದ್ದಾಳೆ. ಈಕೆ ತನ್ನ ಅಳಿಯನಿಗೆ ಎಲ್ಲರ ಮುಂದೆ ಚಿನ್ನದ ಸರವನ್ನು ಕೊರಳಿಗೆ ಹಾಕಿದ್ದಾಳೆ. ಪಾರ್ಟಿಗೆ ಬಂದವರೆಲ್ಲಾ ಕೂಡ ಉಡುಗೊರೆ ಕೊಟ್ಟು ವಿಶ್ ಮಾಡಿದ್ದಾರೆ. ಅದೇ ವೇಳೆ ಭೂಮಿಕಾ ಗೌತಮ್ ಗೆ ಇನ್ನಷ್ಟು ರುಚಿ ರುಚಿಯಾದ ಊಟ ಸಿಗಲಿಯೆಂದು ಶುಭಕೋರಿದ್ದಾಳೆ.ಇದನ್ನು ಕೇಳಿ ಆನಂದ್ ಗೌತಮ್ ನನ್ನು ರೇಗಿಸಿದ್ದಾನೆ. ಬಳಿಕ ಭೂಮಿಕಾ ಉಡುಗೊರೆ ಕೊಟ್ಟು, ಒಬ್ಬರೇ ಇರುವಾಗ ತೆಗೆಯಿರಿ ಎಂದಿದ್ದಾಳೆ. ಗೌತಮ್ ಕೇಕ್ ಕಟ್ ಮಾಡಿದ ನಂತರ ಪಾರ್ಟಿ ಶುರುವಾಗುತ್ತದೆ. 


ಎಲ್ಲರ ಜೊತೆಗೆ ತನ್ನ ಹಳೆಯ ದಿನಗಳ ಬಗ್ಗೆ ಹೇಳುತ್ತಾ ಮಂದಾಕಿನಿ ಮಾಮೂಲಿಯಂತೆಯೇ ಮಾತನಾಡುತ್ತಿರುತ್ತಾಳೆ. ಶಕುಂತಲಾ ಸ್ನೇಹಿತೆ ಜಾನಕಿ ಮಂದಾಕಿನಿಗೆ ಆ ಸರವನ್ನು ಎಲ್ಲಿ ಖರೀದಿಸಿದ್ದು  ಎಂದು ಪ್ರಶ್ನೆ ಮಾಡುತ್ತಾಳೆ. ಅವಾಗ ಮಂದಾಕಿನಿ ಬಾಯಿಗೆ ಬಂದ ಅಂಗಡಿ ಹೆಸರನ್ನು ಹೇಳುತ್ತಾಳೆ. ಅದಕೆ ಜಾನಕಿ ಆ ಅಂಗಡಿಗೆ ನಾನೂ ಹೋಗಿದ್ದೆ ಆದರೆ, ನನಗೆ ಆ ಡಿಸೈನ್ ಕಾಣಿಸಲೇ ಇಲ್ಲ ಎಂದು ಹೇಳುತ್ತಾಳೆ. ನಿಜವೇನೆಂದರೆ ಮಂದಾಕಿನಿ ರೋಲ್ಡ್ ಗೋಲ್ಡ್ ಸರವನ್ನು ನೀಡಿರುತ್ತಾಳೆ. 


ಇದನ್ನೂ ಓದಿ: Sonali Bendre: "ಆ ಹಾಡು ಹಿಟ್ ಆಗದೆಯಿದ್ದರೇ ಚಿತ್ರರಂಗವನ್ನೇ ಬಿಟ್ಟು ಬಿಡಬೇಕೆಂದು ನಿರ್ಧರಿಸಿದ್ದೆ": ಬಿ-ಟೌನ್‌ ನಟಿ ಹೀಗಂದಿದ್ಯೇಕೆ?


ಮಂದಾಕಿನಿಯು ಭೂಮಿಕಾಗೆ ರೋಲ್ಡ್ ಗೋಲ್ಡ್ ಸರವನ್ನು ನೀಡುವ ಸತ್ಯವನ್ನು ತಿಳಿಸುತ್ತಾಳೆ. ಆಗ ಭೂಮಿಕಾ ಕೊಡದೇ ಇದ್ದರೂ ನಡೆಯುತ್ತಿತ್ತು. ಗೊತ್ತಾಗಿ ಸುಮ್ನೆ ಅವಮಾನ ಆದರೆ ಎಂದು ಹೇಳುತ್ತಾನೆ. ತದನಂತರ ಜಾನಕಿ ಮಂದಾಕಿನಿ ಹೆಸರು ಹೇಳಿದ ಅಂಗಡಿಗೆ ಕಾಲ್‌ ಮಾಡಿ ವಿಚಾರಸಿದಾಗ ಆ ಶಾಪ್‌ನಲ್ಲಿ ಅಂತಹ ಡಿಸೈನ್‌ ಇಲ್ಲವೆಂಬ ವಿಚಾರ ಗೊತ್ತಾಗುತ್ತದೆ. ಈ ವಿಷಯವನ್ನು ಶಕುಂತಲಾಗೆ ತಿಳಿಸುತ್ತಾಳೆ. ಆಗ ಮತ್ತೊಬ್ಬರು ನಾನು ಅವಾಗಲೇ ಅಂದುಕೊಂಡು ಅದು ಗೋಲ್ಡ್‌ ಅಲ್ಲ ಅಂತ. ಆಗ ಜಾನಕಿ ತುಂಬಾ ಚೀಪ್‌ ಅಲ್ವಾ ಎಂದಿದ್ದನ್ನು ಗೌತಮ್‌ ಹೇಳಿಸಿಕೊಂಡು ಸ್ಟಾಪ್‌ ಇಟ್‌ ಎಂದು ಹೇಳುತ್ತಾನೆ. ಮುಂದೇನಾಗುತ್ತದೆ ಎಂಬುದನ್ನು ಮುಂಬರುವ ಸಂಚಿಕೆಯಲ್ಲಿ ಕಾದು ನೋಡಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.