ಬೆಂಗಳೂರು: ಚಂದನವನದಲ್ಲಿ ಲವ್‌ ಸ್ಟೋರಿಗಳಿಗೆ ಕೊರತೆ ಏನಿಲ್ಲ.ಆದ್ರೆ ಈ ಬಾರಿ ಡಿಫರೆಂಟ್‌ ಲವ್‌ ಸ್ಟೋರಿಯೊಂದನ್ನು ಹೇಳೋದಕ್ಕೆ 'ಬೈಟ್ ಟು ಲವ್' ಟೀಂ ಸಜ್ಜಾಗಿದೆ.'ಬಜಾರ್' ಹೀರೋ ಧನ್ವೀರ್, 'ಭರ್ಜರಿ' ಚಿತ್ರದ ಶ್ರೀಲೀಲಾ ಸ್ಯಾಂಡಲ್‌ವುಡ್‌ ಸಿನಿ ಪ್ರಿಯರಿಗೆ ಪ್ರೀತಿಯ ಕಥೆ ಹೇಳಲು ರೆಡಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಚಿತ್ರ ಮಂದಿರಗಳಲ್ಲಿ 100 ಪರ್ಸೆಂಟ್‌ ಆಕ್ಯುಪೆನ್ಸಿಗೆ ಅವಕಾಶ ಸಿಕ್ಕಿದ್ದೇ ಸಿಕ್ಕಿದ್ದು ಸಾಲು ಸಾಲು ಕನ್ನಡ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಹೀಗೆ 'ಬಜಾರ್' ಸಿನಿಮಾದ ಹೀರೋ ಧನ್ವೀರ್ ಹಾಗೂ 'ಭರ್ಜರಿ' ಚಿತ್ರದ ಶ್ರೀಲೀಲಾ ಸದ್ಯಕ್ಕೆ 'ಬೈಟ್ ಟು ಲವ್' ಕಥೆ ಹೇಳಲು ಸಜ್ಜಾಗಿದ್ದಾರೆ.


ಇದನ್ನೂ ಓದಿ- R Ashok : 'ಹಿಜಾಬ್ ಮತ್ತು ಕೇಸರಿ ಎರಡೂ ಕಾಲೇಜು ಕ್ಯಾಂಪಸ್ ನಲ್ಲಿ ಬರಬಾರದು' 


ಬಹುಬೇಗ ಎಂಟ್ರಿ..!


ಹರಿ ಸಂತೋಶ್ ನಿರ್ದೇಶನದ, 'ಬೈಟ್ ಟು ಲವ್' ಬಹುಬೇಗನೇ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಫೆಬ್ರವರಿ 24ಕ್ಕೆ ಬಿಡುಗಡೆಯಾಗಬೇಕಿದ್ದ ಸಿನಿಮಾ ಅಂದುಕೊಂಡಿದ್ದಕ್ಕಿಂತ 1 ವಾರ ಮೊದಲೇ ಸಿನಿಮಾ ಮಂದಿರಗಳಿಗೆ ಲಗ್ಗೆ ಇಡುತ್ತಿದೆ. ಹೀಗಾಗಿ ಇಡೀ ಚಿತ್ರತಂಡ ಭರ್ಜರಿ ಪ್ರಚಾರ ಕೈಗೊಳ್ಳುತ್ತಿದೆ.


ಬೆಣ್ಣೆ ನಗರಿಯಲ್ಲಿ ಪ್ರಚಾರ..!


ಅಷ್ಟಕ್ಕೂ 'ಬೈಟ್ ಟು ಲವ್' ಚಿತ್ರತಂಡ ಸಿನಿಮಾಗೆ ಭರ್ಜರಿ ಪ್ರಚಾರ ನೀಡುತ್ತಿದೆ. ಚಿತ್ರತಂಡ ಈಗಾಗಲೇ ದಾವಣಗೆರೆ ಕಡೆ ಪ್ರಯಾಣವನ್ನ ಬೆಳೆಸಿದೆ. ಪ್ರಚಾರಕ್ಕೆ ಅಂತಾ ದಾವಣೆಗೆರೆಗೆ ಹೋದ ಧನ್ವೀರ್ ಹಾಗೂ ಶ್ರೀ ಲೀಲಾ ಇಬ್ಬರೂ ಬೆಣ್ಣೆ ದೋಸೆ ಹಾಕಿದ್ದಾರೆ. ಇದು ಫ್ಯಾನ್ಸ್‌ಗಳನ್ನ ಮತ್ತಷ್ಟು ರೋಮಾಂಚನಗೊಳಿಸಿದೆ.


ಮಲೆನಾಡ ಹುಡುಗಿ..!


ಇಲ್ಲಿ 'ಬೈ ಟು ಲವ್' ಟೀಂ ದಾವಣಗೆರೆಗೆ ಪ್ರಯಾಣ ಬೆಳೆಸಿದ್ದರ ಹಿಂದೆ ಒಂದು ಕಾರಣವಿದೆ. ಸಿನಿಮಾದಲ್ಲಿ ಧನ್ವೀರ್ ದಾವಣಗೆರೆ ಹುಡುಗನಾಗಿದ್ರೆ, ಶ್ರೀಲೀಲಾ ಮಲೆನಾಡ ಹುಡುಗಿ ಅಂತೆ. ಈ ಕಾರಣಕ್ಕೆ ದಾವಣೆಗೆರೆಯಿಂದಲೇ ಚಿತ್ರತಂಡದ ಪ್ರಚಾರ ಕಾರ್ಯ ಶುರುವಾಗಿದೆ. 'ಬೈ ಟು ಲವ್' ಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಕೇಳುಗರನ್ನ ರಂಜಿಸುತ್ತಿವೆ.


ಇದನ್ನೂ ಓದಿ- ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಹಿಜಾಬ್ ವಿವಾದ, ಶೀಘ್ರ ವಿಚಾರಣೆ ನಡೆಸುವಂತೆ ಕಪಿಲ್ ಸಿಬಲ್ ಆಗ್ರಹ


ಒಟ್ಟಾರೆ ಯುವ ಪ್ರೇಕ್ಷಕರನ್ನ ಈಗಾಗಲೇ ತನ್ನತ್ತ ಸೆಳೆಯುತ್ತಿರುವ  'ಬೈ ಟು ಲವ್' ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರ ಮಂದಿರಗಳಿಗೆ ಲಗ್ಗೆ ಇಡಲಿದೆ. ಈ ಮೂಲಕ ಮತ್ತೊಂದು ಚಂದದ ಲವ್‌ ಸ್ಟೋರಿ ಚಂದನವನದ ಪಟ್ಟಿಗೆ ಸೇರಲಿದ್ದು, ಚಿತ್ರ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತುರರಾಗಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.