ನವದೆಹಲಿ: ಬಾಲಿವುಡ್ ಮಹಾನಾಯಕ ಅಮಿತಾಭ್ ಬಚ್ಚನ್ ಖ್ಯಾತ ಸಾಮಾಜಿಕ ಮಾಧ್ಯಮ ಟ್ವಿಟ್ಟರ್ ಮೇಲೆ ಭಾರಿ ಸಕ್ರೀಯರಾಗಿರುತ್ತಾರೆ. ಅವರು ಮಾಡುವ ಟ್ವೀಟ್ ಗಳಿಗೆ ಅವರ ಅಭಿಮಾನಿಗಳೂ ಕೂಡ ವ್ಯಾಪಕ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಸದ್ಯ ಬಿಗ್ ಬಿ ಮಾಡಿರುವ ಒಂದು ಟ್ವೀಟ್ ಭಾರಿ ವೈರಲ್ ಆಗುತ್ತಿದೆ. ಈ ಟ್ವೀಟ್ ನಲ್ಲಿ ಬಿಗ್ ಬಿ ಜನ್ಮ ಹಾಗೂ ಮೃತ್ಯುವಿನ ಕುರಿತು ಮಾತನಾಡಿದ್ದಾರೆ. ಈ ಕುರಿತು ಬರೆದುಕೊಂಡಿರುವ ಅಮಿತಾಭ್ ಯಾವುದೇ ಮೂಹುರ್ತ ಇಲ್ಲದೆ ನಾವು ಜನಿಸುತ್ತೇವೆ ಮತ್ತು ಯಾವುದೇ ಮುಹೂರ್ತ ಇಲ್ಲದೆ ನಾವು ಮರಣಹೊಂದುತ್ತೇವೆ. ಇದು ನಮ್ಮೆಲ್ಲರಿಗೂ ತಿಳಿದ ವಿಷಯವೇ. ಹೀಗಿದ್ದರೂ ಕೂಡ ಜೀವನ ಇರುವವರೆಗೂ ನಾವು ಮುಹೂರ್ತದ ಹಿಂದೆ ಯಾಕೆ ಓಡುತ್ತೇವೆ? ಯಾರಾದರೂ ಉತ್ತರಿಸುವಿರಾ? ಎಂದು ಅಮಿತಾಭ್ ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

ಅಭಿಮಾನಿಗಳ ಪ್ರತಿಕ್ರಿಯೆ ಹೇಗಿತ್ತು?
ಈ ಕುರಿತು ಪ್ರತಿಕ್ರಿಯೆ ನೀಡಿರುವ ಓರ್ವ ಬಳಕೆದಾರರು, "ಗೌರವಾನ್ವಿತರೇ ನಾವು ಯಾವುದೇ ಮುಹೂರ್ತ ಇಲ್ಲದೆ ಜನಿಸುತ್ತೇವೆ ಮತ್ತು ಯಾವುದೇ ಮುಹೂರ್ತ ಇಲ್ಲದೆ ಸವನ್ನಪ್ಪುತ್ತೇವೆ ಎಂದು ನೀವು ಹೇಗೆ ಹೇಳಲು ಸಾಧ್ಯ? ಪ್ರತಿಯೊಂದು ಆತ್ಮ ವಿಧಿ ನಿರ್ಧರಿಸಿರುವ ಮುಹೂರ್ತದಲ್ಲಿಯೇ ಜನ್ಮ ಪಡೆಯುತ್ತದೆ ಮತ್ತು ನಿರ್ಧಾರಿತ ಮುಹೂರ್ತಕ್ಕೆ ಇಹಲೋಕ ತ್ಯಜಿಸುತ್ತದೆ. ಆದರೆ, ವಿಧಿ ನಿರ್ಧರಿಸಿರುವ ಈ ಮುಹೂರ್ತದ ಬಗ್ಗೆ ನಮಗೆ ತಿಳಿದಿರುವುದಿಲ್ಲ ಇದು ಬೇರೆ ವಿಷಯವಾಗಿದೆ" ಎಂದಿದ್ದಾರೆ.



ಅಮಿತಾಭ್ ಕೇಳಿರುವ ಪ್ರಶ್ನೆಗೆ ಉತ್ತರ ನೀಡಿರುವ ಮತ್ತೋರ್ವ ಬಳಕೆದಾರ, "ನಿಮ್ಮ ಪ್ರಶ್ನೆಗೆ ನಾನು ಉತ್ತರಿಸಬಲ್ಲೆ, ಜನ್ಮ ಮತ್ತು ಮರಣ ನಮ್ಮ ಕೈಯಲ್ಲಿ ಇರುವುದಿಲ್ಲ. ಆದರೆ, ಶುಭ ಮುಹೂರ್ತದಲ್ಲಿ ಕೆಲಸ ಆರಂಭಿಸುವುದು ನಮ್ಮ ಕೈಯಲ್ಲಿ ಇದೆ. ಏಕೆಂದರೆ ಆ ವೇಳೆಯಲ್ಲಿ ನಾವು ಅಸ್ತಿತ್ವದಲ್ಲಿ ಇರುತ್ತೇವೆ " ಎಂದಿದ್ದಾರೆ.


ಅತ್ತ ಇನ್ನೊಂದೆಡೆ ಮತ್ತೋರ್ವ ಬಳಕೆದಾರರು, "ನೀವು ಅಭಿಷೇಕ್ ಹಾಗೂ ಐಶ್ವರ್ಯಾ ಅವರ ವಿವಾಹವನ್ನು ಮುಹೂರ್ತ ಹಾಗೂ ಸಂಪೂರ್ಣ ವಿಧಿ-ವಿಧಾನಗಳಿಂದ ಯಾಕೆ ಮಾಡಿದ್ದೀರಿ? ನೋಡದೆಯೂ ಮಾಡಿಸಬಹುದಿತ್ತು. ಧರ್ಮಶಾಸ್ತ್ರದ ಪ್ರಕಾರ ಜನ್ಮ ಮತ್ತು ಮರಣ ನಮ್ಮ ಕೈಯಲ್ಲಿ ಇಲ್ಲ, ಆದರೆ, ಮುಹೂರ್ತದ ಮಹತ್ವ ವಿವರಿಸಲಾಗಿದೆ" ಎಂದಿದ್ದಾರೆ.



ಮತ್ತೋರ್ವ ಬಳಕೆದಾರರು "ನೀವು ಚಿತ್ರ ನಿರ್ಮಿಸುವಾಗ ಮತ್ತು ಬಿಡುಗಡೆ ಮಾಡುವಾಗ ಮುಹೂರ್ತ ಯಾಕೆ ನೋಡುತ್ತೀರಿ?" ಎಂದು ಪ್ರಶ್ನಿಸಿದ್ದಾನೆ.



ಮತ್ತೋರ್ವ ಬಳಕೆದಾರ "ಜೀವನದ ಎಲ್ಲ ಶುಭ ಕಾರ್ಯಗಳನ್ನು ಶುಭ ಮುಹೂರ್ತದಲ್ಲಿಯೇ ನೆರವೇರಿಸಬೇಕು" ಎಂದಿದ್ದಾರೆ.


ಇನ್ನೋರ್ವ ಬಳಕೆದಾರ "ಜನ್ಮ ಮತ್ತು ಮೃತ್ಯು ನಮ್ಮ ಕೈಯಲ್ಲಿ ಇರುವುದಿಲ್ಲ ಆದರೆ, ಕರ್ಮ ನಮ್ಮ ಕೈಯಲ್ಲಿ ಇರುತ್ತದೆ. ಹೀಗಾಗಿ ಕರ್ಮ ಮಾಡುವ ಶುಭ ಮುಹೂರ್ತ ಎಲ್ಲಾ ಸಮಯದಲ್ಲಿಯೂ ಇರುತ್ತದೆ" ಎಂದಿದ್ದಾರೆ.


ಕಳೆದ ಶನಿವಾರ ಅಮಿತಾಭ್ ಬಚ್ಚನ್ ಭೋಪಾಲ್ ಗೆ ಭೇಟಿ ನೀಡಿದ್ದರು. ಈ ವೇಳೆ ಅವರು ತಮ್ಮ ಅತ್ತೆ ಇಂದಿರಾ ಭಾದುರಿ ಅವರ 90ನೇ ಜನ್ಮದಿನವನ್ನು ಆಚರಿಸಿದ್ದರು. ಇಂದೋರ್ ನಲ್ಲಿ ಕೆಲ ಗಂಟೆಗಳನ್ನು ಕಳೆದ ಕುಟುಂಬ ಸದಸ್ಯರು ಬಳಿಕ ಮುಂಬೈಗೆ ಮರಳಿದ್ದರು. ಅಮಿತಾಭ್ ಜೊತೆ ಅವರ ಪತ್ನಿ ಜಯಾ ಬಚ್ಚನ್, ಪುತ್ರ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯ ರೈ ಬಚ್ಚನ್ ಹಾಗೂ ಅವರ ಮೊಮ್ಮಗಳು ಆರಾಧ್ಯಾ ಕೂಡ ತೆರಳಿದ್ದರು. ಈ ವೇಳೆ ಭೂಪಾಲ್ ನಲ್ಲಿ ಅಮಿತಾಭ್ ಅವರಿಗೆ ಭವ್ಯ ಸ್ವಾಗತ ನೀಡಲಾಗಿದೆ.