Big B On Twitter Blue Tick: ಶುಕ್ರವಾರ ಒಂದು ದೊಡ್ಡ ಹೆಜ್ಜೆಯನ್ನಿಟ್ಟಿರುವ, ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್, ಹಣ ಪಾವತಿಸದ ಹಲವು ಸೇಲಿಬ್ರಿಟಿಗಳ ಟ್ವಿಟ್ಟರ್ ಖಾತೆಯಿಂದ ನೀಲಿ ಟಿಕ್ ಅನ್ನು ತೆಗೆದುಹಾಕೀಡೆ. ಈ ಕುರಿತು ಘೋಷಣೆ ಮಾಡಿರುವ  ಪರಿಶೀಲಿಸಿದ ಖಾತೆಗಳಿಂದ ಉಚಿತ ಬ್ಲೂ ಟಿಕ್‌ಗಳನ್ನು ತೆಗೆದುಹಾಕಲಾಗಿದೆ ಎಂದು ಟ್ವಿಟರ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದರೊಂದಿಗೆ ಟ್ವಿಟರ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದ ಬಾಲಿವುಡ್‌ನ ಸೂಪರ್ ಸ್ಟಾರ್  ಅಮಿತಾಬ್ ಬಚ್ಚನ್ ಅವರ ಬ್ಲೂ ಟಿಕ್ ಅನ್ನು ಟ್ವಿಟರ್ ಕಸಿದುಕೊಂಡಿದೆ. ಇದೇ ವೇಳೆ ಬ್ಲೂ ಟಿಕ್ ತೆಗೆದಿರುವ ಬಗ್ಗೆ ಬಿಗ್ ಬಿ ತುಂಬಾ ಸ್ವಾರಸ್ಯಕರ ಪ್ರತಿಕ್ರಿಯೆ ನೀಡಿದ್ದಾರೆ. 

COMMERCIAL BREAK
SCROLL TO CONTINUE READING

ಬ್ಲ್ಯೂ ಟಿಕ್ ಗಾಗಿ ಕೈಜೋಡಿಸಿದ ಅಮಿತಾಭ್ 
ಈ ಕುರಿತು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಟ್ವೀಟ್ ಮಾಡಿ ಬರೆದಿರುವ ಅಮಿತಾಭ್ 'ಟಿ4623 ಎ ಟ್ವಿಟ್ಟರ್ ಅಣ್ಣ! ಕೇಳ್ತಾ ಇದೀಯಾ? ಇದೀಗ ನಾನು  ಹಣವನ್ನು ಕಟ್ಟಿದ್ದಾಗಿದೆ... ಹೀಗಾಗಿ ನನ್ನ ಹೆಸರಿನ ಮುಂದೆ ಇರುತ್ತಲ್ಲ ಆ ನೀಲ ಕಮಲ, ಅದಾದರೂ ವಾಪಸ್ ಕೊಡು, ಜನರಿಗೆ ನಾನು ಅಮಿತಾಭ್ ಬಚ್ಚನ್ ಅಂತ ಗೊತ್ತಾಗಲಿ. ಕೈಮುಗಿದಿದ್ದಾಗಿದೆ, ಇನ್ನೇನು ನಿಮ್ಮ ಕಾಲಿಗೂ ಬೀಳಬೇಕೆ?' ಎಂದು ಬಾರದಿದ್ದಾರೆ. 

ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಈ ಟ್ವೀಟ್ ಗೆ ಅಭಿಮಾನಿಗಳಿಂದ ಸ್ವಾರಸ್ಯಕರ ಕಾಮೆಂಟ್ ಗಳೂ ಕೂಡ ಇದೀಗ ಬರಲಾರಂಭಿಸಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಓರ್ವ ಅಭಿಮಾನಿ 'ಇನ್ಮುಂದೆ ನೀವೂ ಕೂಡ ಲೈನ್ ನಲ್ಲಿ ನಿಲ್ಲಬೇಕಾಗಲಿದೆ, ನಿರೀಕ್ಷೆ ಮಾಡಬೇಕಾಗಲಿದೆ, ಮೊದಲು ಹಾಗಿರಲಿಲ್ಲ ನೀವೆಲ್ಲಿ ನಿಲ್ಲುತ್ತಿದ್ದರೋ, ಲೈನ್ ಅಲ್ಲಿಂದಲೆ ಆರಂಭವಾಗುತ್ತಿತ್ತು' ಎಂದಿದ್ದಾರೆ. 


ಇದನ್ನೂ ಓದಿ-Girls Behaviour On Google: ವಿವಾಹಕ್ಕೂ ಮುನ್ನ ಗೂಗಲ್ ನಲ್ಲಿ ಹುಡ್ಗೀರು ಸರ್ಚ್ ಮಾಡುವುದು ಏನು ಗೊತ್ತಾ?


ಅಮಿತಾಭ್ ಹೊರತುಪಡಿಸಿ ಹಲವು ಸೇಲಿಬ್ರಿಟಿಗಳು ಬ್ಲೂ ಟಿಕ್ ಕಳೆದುಕೊಂಡಿದ್ದಾರೆ
ಎಲೋನ್ ಮಾಸ್ಕ್ ಮಾಲೀಕತ್ವದ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟ್ಟರ್ ನಲ್ಲಿ ತನ್ನ ಖಾತೆಯ ಬ್ಲೂ ಟಿಕ್ ಕಳೆದುಕೊಂಡವರಲ್ಲಿ ಶಾರುಖ್ ಖಾನ್, ಅಮಿತಾಭ್ ಬಚ್ಚನ್,  ಅಲಿಯಾ ಭಟ್ ಗಳಂತಹ ಹಲವು ಬಾಲೀವುಡ್ ಸೇಲಿಬ್ರಿಟಿಗಳ ಹೆಸರುಗಳು ಶಾಮೀಲಾಗಿವೆ. ಎಲಾನ್ ಮಾಸ್ಕ್ ಈ ಮೊದಲೇ ಹಣ ಪಾವತಿಸದವರ ಖಾತೆಯಿಂದ ಬ್ಲೂ ಟಿಕ್ ಅನ್ನು ತೆಗೆದುಹಾಕಲಾಗುವುದಾಗಿ ಘೋಷಿಸಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. 


ಇದನ್ನೂ ಓದಿ-Vastu Tips: ಮೊಬೈಲ್ ವಾಲ್ ಪೇಪರ್ ನಲ್ಲಡಗಿದೆ ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ!

ಈಗ ಬ್ಲೂ ಟಿಕ್ ಪಡೆಯಲು ಎಷ್ಟು ಹಣ ಪಾವತಿಸಬೇಕು?
ಟ್ವಿಟ್ಟರ್ ನಲ್ಲಿ ನೀಡಲಾಗುವ ಬ್ಲೂ ಟಿಕ್ ಶುಲ್ಕ ವಿಭಿನ್ನ ಮಾರುಕಟ್ಟೆಯಲ್ಲಿ ಭಿನ್ನ ಭಿನ್ನವಾಗಿದೆ. ಭಾರತದಲ್ಲಿ, ಐಫೋನ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಮೂಲಕ ಚಂದಾದಾರಿಕೆಗೆ ತಿಂಗಳಿಗೆ 900 ರೂ.ಶುಲ್ಕ ಪಾವತಿಸಬೇಕು. ಟ್ವಿಟರ್ ವೆಬ್‌ಸೈಟ್‌ನಲ್ಲಿ ವೆಚ್ಚವು ತಿಂಗಳಿಗೆ 650 ರೂ.ಗೆ ಇಳಿಯುತ್ತದೆ. ಬಳಕೆದಾರರು. ಅದರ ವಾರ್ಷಿಕ ಸದಸ್ಯತ್ವವನ್ನು ಸಹ ಪಡೆದುಕೊಳ್ಳಬಹುದು ಮತ್ತು ಅದು ಸ್ವಲ್ಪ ಅಗ್ಗವಾಗಿದೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.