ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್  ಅಮಿತಾಬ್ ಬಚ್ಚನ್  ಭಾನುವಾರ ಇಲ್ಲಿ ನಡೆದ 2018ರ ಸ್ಟಾರ್ ಸ್ಕ್ರೀನ್ ಅವಾರ್ಡ್ಸ್ ನಲ್ಲಿ ಹಿರಿಯ ನಟ ದಿವಂಗತ  ವಿನೋದ ಖನ್ನಾರವರಿಗೆ ನುಡಿ ನಮನಗಳನ್ನು ಸಲ್ಲಿಸಿದರು.


COMMERCIAL BREAK
SCROLL TO CONTINUE READING


ಪ್ರಶಸ್ತಿ ಪ್ರಧಾನದ ಕೆಲವು ಫೋಟೋಗಳನ್ನು ತಮ್ಮ ಬ್ಲಾಗ್ ವೊಂದರಲ್ಲಿ ಹಂಚಿಕೊಂಡು ಖನ್ನಾರವರನ್ನು ಸ್ಮರಿಸಿರುವ  ಬಚ್ಚನ್ ಇಷ್ಟು ಬೇಗ ನಮ್ಮನ್ನು ಆ ಗೆಳೆಯ ಬಿಟ್ಟುಹೋದದ್ದು  ನಿಜಕ್ಕೂ ನೋವಿನ ಮತ್ತು ದುಃಖಕರ ಸಂಗತಿ ಈ ಸಂಧರ್ಭದಲ್ಲಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಮ್ಮ ಸಹ ನಟನ ಕುರಿತು ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ. ವಿನೋದ ಖನ್ನಾ ತಮ್ಮ 70ನೇಯ ವಯಸ್ಸಿನಲ್ಲಿ ಅನಾರೋಗ್ಯದ ಹಿನ್ನಲೆಯಲ್ಲಿ ಮೃತಪಟ್ಟಿದ್ದರು


ಇಬ್ಬರು ನಟರು  ಹಿಂದೆ ಮುಖಾದ್ದರ್ ಕಾ ಸಿಕಂದರ್ ,ಪರ್ವಾರೀಶ್ ,ಖೂನ್ ಪಾಸಿನಾ ಮತ್ತು ಅಮರ್ ಅಕ್ಬರ್ ಅಂತೋಣಿ,ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದರು.