ಯುಐ ಚಿತ್ರ ಪ್ಯಾನ್ ಇಂಡಿಯ ಲೆವೆಲ್ ನಲ್ಲಿ  ಟ್ರೆಂಡ್ ಸೆಟ್ ಮಾಡೊಕೆ ಹೋರಟಿರೋ ಸಿನಿಮಾ. ಈ ಚಿತ್ರದ ಮೂಲಕ ಮತ್ತೆ ಉಪ್ಪಿಯನ್ನು ಕಣ್ತುಂಬಿಕೊಳ್ಳಲು ಉಪ್ಪಿ ಅಭಿಮಾನಿಗಳು ಕಾತರದಿಂದ‌ ಕಾಯ್ತಿದ್ದಾರೆ. ಇಷ್ಟು ದಿನ ಕನ್ನಡ ಸಿನಿಮಾಗಳ ಮೂಲಕ ರೆವಲ್ಯೂಶನ್‌ ಕ್ರಿಯೇಟ್ ಮಾಡಿರೋ ಉಪ್ಪಿ,ಈಗ ಯು ಐ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಮ್ಮ ಐಡಿಯಾಲಜಿಯನ್ನು ವರ್ಕ್ ಔಟ್ ಮಾಡೋಕೆ ಸಜ್ಜಾಗಿದ್ದಾರೆ. 


COMMERCIAL BREAK
SCROLL TO CONTINUE READING

ಪೋಸ್ಟರ್ ಮೂಲಕವೇ ಅಭಿಮಾನಿಗಳ ಕಣ್ ಅರಳಿಸಿರೋ ಉಪ್ಪಿ ಸಿನಿಮಾ ಯಾವಾಗ ಬರುತ್ತೆ ಅಂತ ಕಾಯೋತರ ಮಾಡಿದ್ದಾರೆ. ಅದರೆ ಉಪ್ಪಿ ತಮ್ಮ ಯುಐ ಸಿನಿಮಾದ ಗುಟ್ಟನ್ನು ಇದುವರೆಗೂ ಬಿಟ್ಟು ಕೊಟ್ಟಿಲ್ಲ. ಅಲ್ಲದೆ ಸಿನಿಮಾದ ಟೀಸರ್ ಟ್ರೈಲರ್  ಯಾವಾಗ ಬರುತ್ತೆ, ಕುದ್ರೆ ಏರಿ ಉಪ್ಪಿ ಥಿಯೇಟರ್ ಅಂಗಳಕ್ಕೆ ಬರೋದ್ಯಾವಾಗ ಅನ್ನೋ ಬಗ್ಗೆ ಉಪ್ಪಿ ಸೈಲೆನ್ಸ್ ಪ್ಲೀಸ್ ಅಂತಿದ್ದಾರೆ‌.


ಇದನ್ನೂ ಓದಿ- ಭ್ರಷ್ಟಾಚಾರ ಮುಕ್ತ ದೇಶ ಮಾಡುತ್ತೇನೆ ಎನ್ನುತ್ತಾರೆ ಅಷ್ಟೇ.. ಯಾರೂ ಮಾಡಲ್ಲ..!


ಯೆಸ್, ಉಪ್ಪಿ ಅಭಿನಯದ ಬುದ್ದಿವಂತ-2, ಕಬ್ಜ, ಯುಐ ಹೀಗೆ ಸಾಲು ಸಾಲು ಚಿತ್ರಗಳು ರಿಲೀಸ್ ಗೆ ಸಜ್ಜಾಗಿವೆ. ಆದರೆ ಈ ಚಿತ್ರಗಳಲ್ಲಿ ಯಾವ ಚಿತ್ರ ಮೊದಲು ಬರುತ್ತೆ ಅನ್ನೋದು ಮಾತ್ರ ಇನ್ನೂ ಸಸ್ಪೆನ್ಸ್. ಜೊತೆಗೆ ಉಪ್ಪಿ ನಿರ್ದೇಶನದ ಯುಐ ಬರೋದ್ಯಾವಗ ಅನ್ನೋ ಕಾತರ ಉಪ್ಪಿ ಅಭಿಮಾನಿಗಳ ಅಂಗಳದಲ್ಲಿದೆ. ಅದ್ರೆ ಉಪ್ಪಿ ಇದಕ್ಕೆ ಕ್ಲಾರಿಟಿ ಕೊಟ್ಟಿಲ್ಲ.. ಅದ್ರೂ ಈ ಮೂರು ಚಿತ್ರಗಳಲ್ಲಿ ಮೊದಲು ಕಬ್ಜ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ.


ಮುಂದಿನ ವರ್ಷ ಫೆಬ್ರವರಿಯಲ್ಲಿ ಅರ್ ಚಂದ್ರು ನಿರ್ದೇಶನದ ಬಹುನಿರೀಕ್ಷಿತ 'ಕಬ್ಜ' ಚಿತ್ರಮಂದಿರಕ್ಕೆ ಎಂಟ್ರಿ ಕೊಡೊದು ಪಕ್ಕಾ ಆಗಿದ್ದು, ಕಬ್ಜ ನಂತರ ಉಪ್ಪಿ ನಿರ್ದೇಶನದ  ಮೊದಲ ಪ್ಯಾನ್ ಇಂಡಿಯಾ ಯುಐ ಬರೋದು ಕನ್ಪರ್ಮ್ ಆಗಿದೆ.


ಇದನ್ನೂ ಓದಿ- ಗೂಗಲ್ ನಲ್ಲಿ ಇಂಡಿಯಾದ ಬೆಸ್ಟ್ ಡೈರೆಕ್ಟರ್ ಯಾರು ಅಂದ್ರೆ ಬರೋ ಉತ್ತರ ರಿಯಲ್ ಸ್ಟಾರ್ ಉಪೇಂದ್ರ..!


ಹೌದು.. ಟೀಸರ್ ಮೂಲಕವೇ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬೆಂಕಿ ಬಿರುಗಾಳಿ ಎಬ್ಬಿಸಿರೋ ಕಬ್ಜ ಫೆಬ್ರವರಿ ಎರಡನೇ ವಾರದಲ್ಲಿ ರಿಲೀಸ್ ಆಗೋ ಸಾಧ್ಯತೆ ಇದೆ. ಕಬ್ಜ ಬಂದ ಮೂರು ತಿಂಗಳ ಗ್ಯಾಪ್ ನಲ್ಲಿ ಅಂದ್ರೆ ಮೇ ತಿಂಗಳಿನಲ್ಲಿ ಇಡೀ ಇಂಡಿಯಾ ಕಾಯ್ತಿರೋ ಯುಐ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿ ಉಪ್ಪಿಯ ಹೊಸ ಆಲೋಚನೆಯನ್ನ ಪ್ಯಾನ್ ಇಂಡಿಯಾ ಪ್ರೇಕ್ಷಕರಿಗೆ ಅರ್ಪಿಸಲು ಚಿತ್ರ ತಂಡ ಪ್ಲಾನ್ ಮಾಡಿಕೊಂಡಿದೆ. ಇದಕ್ಕಾಗಿ ನಿರಂತರವಾಗಿ ಶೂಟಿಂಗ್ ಮಾಡ್ತಿರುವ ಚಿತ್ರತಂಡ ಸದ್ದಿಲ್ಲದೆ ಸ್ಟಾರ್ ನಟನಟಿಯರನ್ನ ಚಿತ್ರಕ್ಕೆ ಕರೆತಂದು ಕೋಟಿ ಕೋಟಿ ವೆಚ್ಚದ ಸೆಟ್ ನಲ್ಲಿ ಚಿತ್ರದ ಶೂಟಿಂಗ್ ಮಾಡ್ತಿದ್ದಾರೆ. ಜನವರಿ ವೇಳೆಗೆ ಚಿತ್ರದ ಶೂಟಿಂಗ್ ಮುಗ್ಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರು ಮಾಡಲು ಪ್ಲಾನ್ ಮಾಡಿರುವ ಉಪ್ಪಿ ಮೇ ವೇಳೆಗೆ ಯುಐ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬರೋದರಲ್ಲಿ ಡೌಟ್ ಇಲ್ಲ ಅಂತಿವೆ ಉಪ್ಪಿಯ ಆಪ್ತ ಮೂಲಗಳು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.