ಬೆಂಗಳೂರು: ಕೋವಿಡ್ ಹಿನ್ನೆಲೆ ಸಂಕಷ್ಟಕ್ಕೊಳಗಾಗಿರುವ ಏಕಪರದೆ ಚಿತ್ರಮಂದಿಗಳ ಮಾಲೀಕರು, ನೌಕರರಿಗ ಸರ್ಕಾರ ಬಿಗ್ ರಿಲೀಫ್ ನೀಡಿದೆ. ಏಕಪರದೆ ಚಿತ್ರಮಂದಿರಗಳಿಗೆ 2021-22ನೇ ಸಾಲಿನ ಆಸ್ತಿ ತೆರಿಗೆ ಪಾವತಿಗೆ ವಿನಾಯತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.


COMMERCIAL BREAK
SCROLL TO CONTINUE READING

ರಾಜ್ಯದಲ್ಲಿ ಕೊರೊನಾ(CoronaVirus) ಮಹಾಮಾರಿಯಿಂದ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಕಳೆದೊಂದು ವರ್ಷದಿಂದ ಚಿತ್ರಮಂದಿಗಳನ್ನು ಮುಚ್ಚಲಾಗಿದೆ. ಇದನ್ನೇ ಜೀವನಾಧಾರವಾಸಿಕೊಂಡಿದ್ದ ಥಿಯೇಟರ್ ಮಾಲೀಕರು ಮತ್ತು ನೌಕರರು ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ದೇಶದ ಅನೇಕ ರಾಜ್ಯಗಳಲ್ಲಿ ಈಗಾಗಲೇ ಚಿತ್ರಮಂದಿಗಳ ಆಸ್ತಿ ತೆರಿಗೆ ಪಾವತಿ ಮನ್ನಾ ಮಾಡಲಾಗಿದೆ. ಕೊರೊನಾ 3ನೇ ಅಲೆ(CoronaVirus) ಅಪ್ಪಳಿಸುವ ಭೀತಿಯಿರುವುದರಿಂದ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ಸಾಧ್ಯತೆಯಿಲ್ಲ. ಹೀಗಾಗಿ ಬಹುತೇಕ ಚಿತ್ರಮಂದಿರಗಳು ಶಾಶ್ವತವಾಗಿ ಮುಚ್ಚುವ ಸ್ಥಿತಿಯಲ್ಲಿವೆ. ಪ್ರಸ್ತುತ ರಾಜ್ಯದಲ್ಲಿ 630 ಏಕಪರದೆ ಚಿತ್ರಮಂದಿಗಳಿದ್ದು, ಸರ್ಕಾರವು ಈ ಚಿತ್ರಮಂದಿರಗಳ ಆಸ್ತಿ ತೆರಿಗೆ ಮನ್ನಾ ಮಾಡಿ ನೆರವಿಗೆ ಧಾವಿಸಬೇಕೆಂದು ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್‌ ಸರ್ಕಾರಕ್ಕೆ ಮನವಿ ಮಾಡಿದ್ದರು.


ಇದನ್ನೂ ಓದಿ: BM Krishne Gowda : ಮತ್ತೊಬ್ಬ ಸ್ಯಾಂಡಲ್ ವುಡ್ ಹಿರಿಯ ನಟನನ್ನ ಬಲಿ ಪಡೆದ ಕೊರೋನಾ! 


ಈ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಚಿತ್ರಮಂದಿರಗಳಿಗೆ 2021-22ನೇ ಸಾಲಿನ ಆಸ್ತಿ ತೆರಿಗೆ ಪಾವತಿಗೆ ವಿನಾಯತಿ ನೀಡಿ ಆದೇಶ ಹೊರಡಿಸಿದೆ. ಚಿತ್ರಮಂದಿರಗಳ ಕಷ್ಟಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ(BS Yediyurappa) ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಅವರಿಗೆ ಕರ್ನಾಟಕ ಚಿತ್ರ ಪ್ರದರ್ಶಕರ ಸಂಘವು ಕೃತಜ್ಞತೆ ಸಲ್ಲಿಸಿದೆ.


ಕೊರೊನಾ ಸಾಂಕ್ರಾಮಿಕದಿಂದ ಕಳೆದೊಂದು ವರ್ಷದಿಂದ ಚಿತ್ರಮಂದಿರ(Cinema Theatre)ಗಳಿಗೆ ಬೀಗ ಹಾಕಲಾಗಿದೆ. ಇದೀಗ ಅನ್ ಲಾಕ್ ಪ್ರಕ್ರಿಯೆ ಶುರುವಾಗಿರುವುದರಿಂದ ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇದೆ. ಆದರೆ ಕೋವಿಡ್ 3ನೇ ಅಲೆಯ ಮುನ್ಸೂಚನೆಯಿಂದಾಗಿ ಒಂದೆರಡು ತಿಂಗಳಷ್ಟೇ ಥಿಯೇಟರ್ ಓಪನ್ ಆಗಬಹುದು. ಚಿತ್ರಮಂದಿರಗಳು ತರೆದರೂ ಸಹ ಸರ್ಕಾರದ ಮಾರ್ಗಸೂಚಿಗಳನ್ವಯ ಶೇ.50ರಷ್ಟು ಆಸನ ಸಾಮರ್ಥ್ಯಕ್ಕೆ ಒಪ್ಪಿಗೆ ಸಿಗಬಹುದು. ಚಿತ್ರಮಂದಿರಗಳ ಆಸ್ತಿ ತೆರಿಗೆ ಮನ್ನಾ ಮಾಡುವುದರಿಂದ ರಾಜ್ಯದ ಬೊಕ್ಕಸಕ್ಕೆ ಸುಮಾರು 9 ಕೋಟಿ ರೂ. ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ.


ಇದನ್ನೂ ಓದಿ: Rocking Star Yash: ಐಷಾರಾಮಿ ಬಂಗಲೆಗೆ ಎಂಟ್ರಿ ಕೊಟ್ಟ 'ರಾಕಿ ಭಾಯ್' ದಂಪತಿ


ಸರ್ಕಾರ ನೀಡಿರುವ ಆಸ್ತಿ ತೆರಿಗೆ ಮನ್ನಾ ಆದೇಶದಿಂದ ಚಿತ್ರರಂಗದ ಮಾಲೀಕರು ಮತ್ತು ನೌಕರರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಕೋವಿಡ್-19(COVID-19) ಸಂಕಷ್ಟದಿಂದ ಬೆಂಗಳೂರು, ಮೈಸೂರು ಸೇರಿದಂತೆ ಈಗಾಗಲೇ ಹಲವು ಚಿತ್ರಮಂದಿರಗಳು ಸಂಪೂರ್ಣವಾಗಿ ಬಂದ್ ಆಗಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.