Miesha-Ieshaan Intimate Scenes Video - ಬಿಗ್ ಬಾಸ್ 15 (Bigg Boss 15 ವೀಕ್ಷಕರು ಅಕ್ಟೋಬರ್ 9 ರಂದು ಮೊದಲ 'ವೀಕೆಂಡ್ ಕಾ ವಾರ್' ಎಪಿಸೋಡ್ ಅನ್ನು ವಿಕ್ಷೀಸಿದ್ದಾರೆ. ಈ ಸಂಚಿಕೆಯು ಹಲವು ಏರಿಳಿತಗಳಿಂದ ತುಂಬಿತ್ತು. ಈ ಸಂಚಿಕೆಯಲ್ಲಿ ಸಲ್ಮಾನ್ ಖಾನ್ (Salman Khan) ತಮ್ಮ ಅಭಿಮಾನಿಗಳನ್ನು ತುಂಬಾ ರಂಜಿಸಿದ್ದಾರೆ. ಅವರು ಸ್ಪರ್ಧಿಗಳಿಗೆ ಸಾಕಷ್ಟು ಛೀಮಾರಿ ಕೂಡ ಹಾಕಿದ್ದಾರೆ. ಅವರು ತಮ್ಮ ಹಾಸ್ಯದ ಮೂಲಕ ಜನರನ್ನು ನಗಿಸಿದ್ದಾರೆ. ಏತನ್ಮಧ್ಯೆ, ಸಲ್ಮಾನ್ ಖಾನ್ ನಿರೂಪಣೆಯ ಈ ಷೋ ಸೂಪರ್ ಫಾಸ್ಟ್ ವೇಗದಲ್ಲಿ ನಡೆಯುತ್ತಿದೆ ಎಂದು ಹೇಳಲಾಗುತಿದೆ. ಇಶಾನ್ ಸೆಹ್ಗಲ್ ಮತ್ತು ಮೀಶಾ ಅಯ್ಯರ್ ಅವರ ಅತಿ ವೇಗದ ಪ್ರೀತಿಯನ್ನು ನೋಡಿದ ನಂತರ ಇಬ್ಬರು ಕೇವಲ ಒಂದೇ ವಾರದೊಳಗೆ ಪರಸ್ಪರ ಹತ್ತಿರಕ್ಕೆ ಬಂದಿದ್ದಾರೆ ಎಂದೇ ಹೇಳಬಹುದು.


COMMERCIAL BREAK
SCROLL TO CONTINUE READING

ಕ್ಯಾಮೆರಾ ಕಣ್ಣುಗಳ ಮುಂದೆಯೇ ಬಹಿರಂಗ ರಾಸಲೀಲೆ (Miesha-Ieshaan Romance Video)
ಬಿಗ್ ಬಾಸ್ 15
ರ ಮೊದಲ ವಾರದಲ್ಲಿ, ಬಿಗ್ ಬಸ್ ಸದಸ್ಯರ ನಡುವೆ ಪ್ರೇಕ್ಷಕರು ಅಧಾದವಾದ ಸ್ನೇಹವನ್ನು ಕಂಡಿದ್ದಾರೆ ಮತ್ತು 'ವೀಕೆಂಡ್ ಕಾ ವಾರ್' ಮೊದಲ ಸಂಚಿಕೆ ಪ್ರಸಾರವಾಗುವ ವೇಳೆಗೆ ಸದಸ್ಯರ ನಡುವಿನ ಶ್ನೇಹ ಪ್ರೀತಿಗೆ ತಿರುಗಿದೆ. ಬಿಡುಗಡೆಯಾಗಿರುವ ಹೊಸ ಪ್ರೋಮೋನಲ್ಲಿ , ಮನೆಯ ಈ ಇಬ್ಬರು ಸದಸ್ಯರು ತುಂಬಾ ಸಹಜವಾಗಿ ರೋಮಯಾನ್ಸ್ ನಲ್ಲಿ  ತೊಡಗಿರುವುದು ಕಂಡುಬಂದಿದೆ. ಕಾರ್ಯಕ್ರಮದ ಇತ್ತೀಚಿನ ಪ್ರೋಮೋದಲ್ಲಿ, ಇಶಾನ್ ಸೆಹ್ಗಲ್ ಮತ್ತು ಮೀಶಾ ಅಯ್ಯರ್ ಒಬ್ಬರಿಗೊಬ್ಬರು ಮುತ್ತಿಡುತ್ತಿರುವಾಗ ಕ್ಯಾಮರಾ ಜೂಮ್ ಆಗುತ್ತಿದೆ. ಅವರು ಒಟ್ಟಿಗೆ ತಬ್ಬಿಕೊಂಡು ಹಾಸಿಗೆಯ ಮೇಲೆ ಮಲಗಿರುವುದು ಕಂಡುಬರುತ್ತದೆ. ಇಬ್ಬರ ಅನೇಕ ಸ್ನೇಹಶೀಲ ಕ್ಷಣಗಳನ್ನು ಈ ಪ್ರೋಮೋದಲ್ಲಿ ನೀವು ಕಾಣಬಹುದು. ಈಗ ಕುಟುಂಬದ ಸದಸ್ಯರು ಕೂಡ ಈ ಹೊಸ ಜೋಡಿಯ ಬಗ್ಗೆ ಮಾತನಾಡುತ್ತಿದ್ದಾರೆ.


ಇದನ್ನೂ ಓದಿ-Mystery Boy ಜೊತೆಗೆ ಈಜುಕೊಳದಲ್ಲಿ ಮಸ್ತಿಗಿಳಿದ Nora Fatehi, Video Viral


Ieshaan Sehgaal-Miesha Iyer ರೋಮಾನ್ಸ್ ವಿಡಿಯೋ ವೈರಲ್
ಬಿಗ್ ಬಾಸ್ 15 ರ 'ವೀಕೆಂಡ್ ಕಾ  ವಾರ್' ಸಂಚಿಕೆಯಲ್ಲಿ, ಇಶಾನ್ ಸೆಹಗಲ್ ಮತ್ತು ಮೀಶಾ ಅಯ್ಯರ್ ಒಟ್ಟಿಗೆ ಕುಳಿತು ಪರಸ್ಪರ ಕೈ ಹಿಡಿದಿದ್ದಾರೆ. ಅವರು ಕೇವಲ 8 ದಿನಗಳಲ್ಲಿ ತಾವು ಇಷ್ಟೊಂದು ಹತ್ತಿರಕ್ಕೆ ಬಂದಿರುವುದಾಗಿ  ಒಪ್ಪಿಕೊಂಡಿದ್ದಾರೆ. ಇಶಾನ್ ಈ ರೀತಿ ಹೇಳುವಾಗ ಮೀಶಾ ಆತನನ್ನು ತಡೆಯಲು ಯತ್ನಿಸಿದ್ದಾಳೆ, ಆದರೆ ಮುಂದುವರೆದು ಮಾತನಾಡಿರುವ ಇಶಾನ್, 'ನಾನು ನಿಜವಾಗಿಯೂ ನಿನ್ನ ಜೊತೆ ಆಳವಾದ ಸಂಬಂಧವನ್ನು ಹೊಂದಿದ್ದೇವೆ ಮತ್ತು 8 ದಿನಗಳ ಹಿಂದೆ ನಾವು ಪರಸ್ಪರ ಭೇಟಿಯಾಗಿದ್ದೇವೆ ಎಂಬುದು ನಬ್ನಗೆ ಅನಿಸುತ್ತಿಲ್ಲ. ನಾನು ನಿನ್ನನ್ನು ನಿಜವಾಗಿಯೂ ಇಷ್ಟಪಡುತ್ತೇನೆ.' ಎಂದು ಹೇಳಿದ್ದಾನೆ. ಈ ವೇಳೆ ತನಗೆ ಸ್ವಲ್ಪ ಸಮಯ ಕೊಡು ಎಂದು ಮೈಶಾ ಇಶಾನ್‌ಗೆ ಹೇಳಿದ್ದಾಳೆ. ಇದಕ್ಕೆ ಉತ್ತರಿಸಿರುವ ಇಶಾನ್ 'ನಾನು ನಿನ್ನೊಂದಿಗೆ ಇರಲು ಬಯಸುತ್ತೇನೆ' ಎಂದು ಹೇಳಿದ್ದಾನೆ.


Cruise Drugs Party: Sanitary Pad ನಲ್ಲಿ Drugs ಬಚ್ಚಿಟ್ಟಿದ್ದ ಮುನ್ಮುನ್ ಧಮೇಚಾ, Viral Video!


ಇಬ್ಬರ ಕುರಿತು ತಮಾಷೆ ಮಾಡಿದ್ದ ಸಲ್ಮಾನ್ (Salman Khan)
ಬಳಿಕ ಮಾತನಾಡಿರುವ ಮೀಶಾ 'ನೀನು ನನ್ನವಳು ಎಂದು ನೀವೇ ಹೇಳಿದ್ದೀರಿ. ಹೀಗಿರುವಾಗ ನಾನುಮಾತನಾಡುವುದು ಉಚಿತವಲ್ಲ' ಎಂದಿದ್ದಾರೆ ಈ ವೇಳೆ ಇಬ್ಬರು ಪರಸ್ಪರ ಮುತ್ತು ವಿನಿಮಯ ಕೂಡ ಮಾಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರ ಹಲವು ಇಂಟಿಮೆಟ್ ದೃಶ್ಯಗಳಿವೆ. ಇಬ್ಬರು ಪರಸ್ಪರರಲ್ಲಿ ಲೀನರಾಗಿವುದು ಕಂಡು ಬಂದಿದೆ. ಅಷ್ಟೇ ಯಾಕೆ ಇಬ್ಬರು ಒಂದೇ ಬೆಡ್ ಬಳಸುತ್ತಿದ್ದಾರೆ. ಇವರಿಬ್ಬರ ಪ್ರೇಮ ಪ್ರಕರಣ ತುಂಬಾ ವೇಗವಾಗಿ ಸಾಗುತ್ತಿದೆ ಎಂದು ಮನೆಯ ಇತರ ಸದಸ್ಯರು ಕೂಡ ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟೇ ಯಾಕೆ ಸಲ್ಮಾನ್ ಖಾನ್ ಕೂಡ ಇದನ್ನು ಫಾಸ್ಟೆಸ್ಟ್ ರೋಮಾನ್ಸ್ ಎಂದು ಬಣ್ಣಿಸಿದ್ದಾರೆ. ಭಾನುವಾರದ ಸಂಚಿಕೆಯಲ್ಲಿಯೂ ಕೂಡ ಇಷಾನ್, ಮೀಶಾ ಬೆಂಬಲಕ್ಕೆ ನಿಲ್ಲುವುದು ಕಂಡುಬಂದಿದೆ. ಆಗ ಸಲ್ಮಾನ್ ಖಾನ್ ಇಶಾನ್ ಅವರನ್ನು ಮೀಶಾ ವಕೀಲ ಎಂದು ತಮಾಷೆ ಮಾಡಿದ್ದಾರೆ. 


ಇದನ್ನೂ ಓದಿ-Yash Viral Video: Mumbaiನಲ್ಲಿ ಬೀದಿಗಿಳಿದ KGFನ 'Rocky Bhai' Yash, ಅಭಿಮಾನಿಗಳ ರಿಯಾಕ್ಷನ್ ಹೇಗಿತ್ತು ಗೊತ್ತಾ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ