Bigg Boss: ವಿಜಯ್ ಟಿವಿಯಲ್ಲಿ ಹಲವು ರಿಯಾಲಿಟಿ ಶೋಗಳಿದ್ದರೂ ಬಿಗ್ ಬಾಸ್ ಗೆ ತಮ್ಮದೇ ಆದ ಅಭಿಮಾನಿ ಬಳಗವಿದೆ. ವಾರದಲ್ಲಿ ಐದು ದಿನ ಬಿಗ್ ಬಾಸ್ ಅನ್ನು ಮಿಸ್ ಮಾಡದೇ ನೋಡುವ ಅಭಿಮಾನಿಗಳು ಶನಿವಾರ ಮತ್ತು ಭಾನುವಾರವನ್ನಂತೂ ಯಾವತ್ತೂ ಮಿಸ್‌ ಮಾಡಲ್ಲ. ಹೀಗಾಗಿ ವೀಕೆಂಡ್‌ ಎಪಿಸೋಡ್‌ಗಳಿಗೆ ಟಿಆರ್‌ಪಿ ಹೆಚ್ಚಿರುತ್ತೆ.. 
 
ಕಳೆದ ಏಳು ಸೀಸನ್‌ಗಳಿಂದ ಬಿಗ್ ಬಾಬ್‌ನ್ನು ಕಮಲ ಹಾಸನ್ ನಡೆಸಿಕೊಡುತ್ತಿದ್ದರು.. ಆದರೆ ಕಾರಣಾಂತರಗಳಿಂದ ಅವರು ಎಂಟನೇ ಸೀಸನ್‌ನಲ್ಲಿ ಬಿಗ್ ಬಾಸ್ ಶೋನಿಂದ ಹೊರನಡೆದರು.. ಪ್ರಸ್ತುತ ಅವರ ಸ್ಥಾನದಲ್ಲಿ ವಿಜಯ್ ಸೇತುಪತಿ ಹೋಸ್ಟ್ ಮಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಪಿರಿಯಡ್ಸ್‌ ವೇಳೆ ಅದನ್ನ ಕಂಟ್ರೋಲ್‌ ಮಾಡೋಕೆ ಆಗಲಿಲ್ಲ..! ಬಿಗ್‌ ಬಾಸ್‌ ಮನೆಯಿಂದ ಹೊರ ಬರುತ್ತಲೇ ಶಾಕಿಂಗ್‌ ಹೇಳಿಕೆ ನೀಡಿದ ಸ್ಪರ್ಧಿ


ಕಮಲ್ ಹಾಸನ್ ಅವರನ್ನು ಯಾವುದೇ ರೀತಿಯಲ್ಲಿ ಕಾಪಿ ಮಾಡದ ರೀತಿಯಲ್ಲಿ ವಿಜಯ್ ಸೇತುಪತಿ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವುದು ವಿಶೇಷ. ಅವರದೇ ಶೈಲಿಯಲ್ಲಿ ಸ್ಪರ್ಧಿಗಳೊಂದಿಗೆ ಮಾತುಕತೆ ನಡೆಸುತ್ತಾರೆ.. ಅವರು ಸ್ಪರ್ಧಿಗಳಿಗೆ ಕೇಳುವ ಪ್ರಶ್ನೆಗಳು ಅಭಿಮಾನಿಗಳು ಕೇಳಲು ಬಯಸುವ ಪ್ರಶ್ನೆಗಳಾಗಿರುವುದರಿಂದ, ವಿಜಯ್ ಸೇತುಪತಿ ಹೋಸ್ಟ್‌ಗೆ ಅಪಾರ ಫ್ಯಾನ್ಸ್‌ ಬಳಗವೇ ಸೃಷ್ಟಿಯಾಗಿದೆ.. ಅಲ್ಲದೇ ಕೆಲವೊಂದು ಟೀಕೆಗಳನ್ನು ಮೀರಿ ವಿಜಯ್ ಸೇತುಪತಿ ಬಿಗ್ ಬಾಸ್ ಮೂಲಕ ತಾನೊಬ್ಬ ಶ್ರೇಷ್ಠ ಹೋಸ್ಟ್ ಎಂಬುದನ್ನು ಸಾಬೀತುಪಡಿಸುತ್ತಲೇ ಇದ್ದಾರೆ.


ಆರಂಭದಲ್ಲಿ ಕಮಲ್ ಹಾಸನ್ ಅವರಂತೆ ವಿಜಯ್ ಸೇತುಪತಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರಾ? ಎಂದು ಬಿಗ್ ಬಾಸ್ ಅಭಿಮಾನಿಗಳು ಅನುಮಾನಿಸಿದ್ದರಂತೆ.. ಆದರೆ ಅವರು ಈಗ ಅತ್ಯುತ್ತಮ ಹೋಸ್ಟ್ ಎಂದು ಅವರಿಂದ ಪ್ರಶಂಸೆ ಪಡೆಯುತ್ತಿದ್ದಾರೆ. ಬಿಗ್ ಬಾಸ್ ಶೋ ಇದೀಗ 75 ದಿನಗಳನ್ನು ದಾಟಿದ್ದು, ಅಂತಿಮ ಹಂತ ತಲುಪಿದೆ. ನಟ ರಂಜಿತ್ ಕಳೆದ ವಾರ ಬಿಗ್ ಬಾಸ್ ಮನೆಯಿಂದ ನಿರ್ಗಮಿಸಿದ್ದಾರೆ, ಮುಂದಿನ ವಾರಗಳಲ್ಲಿ ಯಾರು ಹೊರಡುತ್ತಾರೆ? ಎಂಬ ನಿರೀಕ್ಷೆಯೂ ಹುಟ್ಟಿಕೊಂಡಿದೆ.


ಇದನ್ನೂ ಓದಿ-Max 1st Day Box Office Collection: ಮ್ಯಾಕ್ಸ್‌ ಸಿನಿಮಾ ಮೊದಲ ದಿನವೇ ದಾಖಲೆಯ ಕಲೆಕ್ಷನ್‌... ಗ


ಅಂತೆಯೇ ಈ ಬಾರಿಯ ಬಿಗ್ ಬಾಸ್ ಟೈಟಲ್ ವಿನ್ನರ್ ಯಾರಾಗಬಹುದು ಎಂದು ಕೆಲ ಅಭಿಮಾನಿಗಳು ಊಹಿಸಲು ಶುರು ಮಾಡಿದ್ದಾರೆ. ಇದೆಲ್ಲವನ್ನೂ ಬದಿಗಿಟ್ಟು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಮಾತನಾಡುವ ವಿಷಯಗಳು ಕಾಮಿಡಿಯಾಗಿ ಮೂಡಿಬರುತ್ತಿವೆ. ಇತ್ತೀಚೆಗೆ ಅಂಶಿತಾ ಮತ್ತು ರಿಯಾನ್ ಸಂಭಾಷಣೆ ಗಮನ ಸೆಳೆದಿದೆ.


 ಅಂಶಿತಾ ತನ್ನ ಹೊಟ್ಟೆಯನ್ನು ತೋರಿಸಿ ರಿಯಾನ್‌ಗೆ ಏನಾದರೂ ತಿನ್ನಲು ಬೇಕೇ ಎಂದು ಕೇಳುತ್ತಾಳೆ, ಅವನು ವ್ಯಂಗ್ಯವಾಗಿ ನಿನ್ನ ಹೊಟ್ಟೆಯಲ್ಲಿ ಏನು ಮಗು ಇದೆಯೇ ಎಂದು ಕೇಳುತ್ತಾನೆ. ಅಂಶಿತಾ ಕೂಡ ಹೌದು ನಾಲ್ಕು ತಿಂಗಳ ಮಗು ಎಂದು ಹೇಳುತ್ತಾರೆ. ಇದು ಕಾಮಿಡಿ ಎಂದು ಹೇಳಲಾಗಿದ್ದರೂ, ಈ ಸಂಬಂಧ ವಿಡಿಯೋ ಬಿಡುಗಡೆಯಾಗಿದೆ..  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.