Elvish Yadav new car : ರೇವ್ ಪಾರ್ಟಿಯಲ್ಲಿ ಡ್ರಗ್‌ ಮತ್ತು ಹಾವಿನ ವಿಷ ಬಳಕೆ ಪ್ರಕರಣದಲ್ಲಿ ಬಂಧಿಯಾಗಿದ್ದ ಬಿಗ್​ಬಾಸ್​​ ವಿಜೇತ ಎಲ್ವಿಶ್​​ ಯಾದವ್​ ಇತ್ತೀಚೆಗೆ ಸಾಕಷ್ಟು ವಿವಾದಗಳಿಂದ ಸುದ್ದಿಯಲ್ಲಿದ್ದಾರೆ. ಇದೀಗ ಬಹು ಕೋಟಿ ಬೆಲೆ ಬಾಳುವ ಐಶಾರಾಮಿ ಕಾರು ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ಖ್ಯಾತ ಯೂಟ್ಯೂಬರ್, ಹಿಂದಿ ಬಿಗ್ ಬಾಸ್ ಒಟಿಟಿಯ ವಿಜೇತ ಎಲ್ವಿಶ್ ಯಾದವ್ ಮೇಲೆ ರೇವ್ ಪಾರ್ಟಿಗಳಲ್ಲಿ ಹಾವಿನ ವಿಷ ಬಳಕೆ ಮಾಡುತ್ತಿದ್ದ ಆರೋಪ ಇದೆ. ಈ ಪ್ರಕರಣದಲ್ಲಿ ಎಲ್ವಿಶ್‌ನನ್ನು ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು. ಅಲ್ಲದೆ, ತಮ್ಮ ಕೆಲ ಯೂಟ್ಯೂಬ್ ವಿಡಿಯೋಗಳಿಗೆ ಹಾವುಗಳನ್ನು ಬಳಸಿಕೊಂಡ ಆರೋಪವೂ ಎಲ್ವಿಶ್‌ ಮೇಲೆ ಇದೆ.


ಇದನ್ನೂ ಓದಿ:ಮನೆ ಮುಂದೆ ಗುಂಡಿನ ದಾಳಿ ಬಳಿಕ ಸಲ್ಮಾನ್ ಖಾನ್ ಮೊದಲ ಪೋಸ್ಟ್‌ ! ಏನಿದೆ ಅದರಲ್ಲಿ?!


ಯೂಟ್ಯೂಬರ್​​ ಆಗಿ ಸೋಷಿಯಲ್​​ ಮೀಡಿಯಾ ಮೂಲಕ ಗುರುತಿಸಿಕೊಂಡಿದ್ದ ಎಲ್ವಿಶ್​​ ಯಾದವ್​​​​ ಹಿಂದಿ ಬಿಗ್​ಬಾಸ್​​ ಕಾರ್ಯಕ್ರಮದ ಮೂಲಕ ಜನಮನ್ನಣೆ ಪಡೆದರು. ಆದರೆ ಹಾವಿನ ವಿಷ ಪೂರೈಕೆ ಮಾಡುತ್ತಿದ್ದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿತ್ತು. ಸುಮಾರು ಒಂದು ವಾರ ಕಳೆದ ನಂತರ, ಅವರಿಗೆ ಜಾಮೀನು ನೀಡಲಾಯಿತು. 


ಇತ್ತೀಚೆಗಷ್ಟೆ ಜೈಲಿನಿಂದ ಹೊರಬಂದ ಎಲ್ವಿಶ್​​​​ ಯಾದವ್​​ ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ. ಕಪ್ಪು ಬಣ್ಣದ ಮರ್ಸಿಡಿಸ್ ಜಿ ವ್ಯಾಗನ್ ಮಾಡೆಲ್​​ ಕಾರನ್ನು ಕೊಂಡುಕೊಂಡಿದ್ದು, ಈ ಕುರಿತ ಫೋಟೋಗಳನ್ನು ತಮ್ಮ ಸೊಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ​ ಕಾರಿನ ಮೌಲ್ಯ 3 ಕೋಟಿ ರೂಪಾಯಿಗೂ ಹೆಚ್ಚು ಎಂದು ವರದಿಯಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.