Bigg Boss Kannada 11: ಮನೆಯಿಂದ ಹೊರಬಂದವರಿಂದಲೇ ರಿವೀಲ್ ಆಯ್ತು `ಬಿಗ್ ಬಾಸ್ ವಿನ್ನರ್` ಹೆಸರು...!
Bigg Boss Kannada 11: ಬಿಗ್ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆಗಾಗಿ ದಿನಗಣನೆ ಶುರುವಾಗಿದ್ದು, ಬಿಗ್ಬಾಸ್ ವಿನ್ನರ್ ಆಗುವವರು ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ. .
Bigg Boss Kannada 11 Finalists: ಕನ್ನಡದ ಮನರಂಜನಾ ಕಾರ್ಯಕ್ರಮಗಳಲ್ಲಿ ಕಮಾಲ್ ಮಾಡುತ್ತಿರುವ ಬಿಗ್ಬಾಸ್ ಸೀಸನ್ 11 ಟಿಆರ್ ಪಿ ಗಳಿಕೆಯಲ್ಲೂ ಮುಂದಿದೆ. ಈಗ ಗ್ರ್ಯಾಂಡ್ ಫಿನಾಲೆಗಾಗಿ ದಿನಗಣನೆ ಶುರುವಾಗಿದೆ. ಈ ಬಾರಿ ಬಿಗ್ಬಾಸ್ ಫೈನಲ್ ತಲುಪುವ ಕಂಟೆಸ್ಟೆಂಟ್ ಗಳು ಯಾರು? ಫೈನಲ್ ನಲ್ಲಿ ಮಿಂಚಿ ಕಪ್ ಎತ್ತುವವರು ಯಾರು? ಎನ್ನುವ ಚರ್ಚೆಗಳು ಜೋರಾಗಿಯೇ ಇವೆ.
ಬಿಗ್ಬಾಸ್ ವಿನ್ನರ್ ಆಗುವವರು ಯಾರು ಎನ್ನುವ ಕುತೂಹಲ ಜನಕ್ಕೆ ಸಿಕ್ಕಾಪಟ್ಟೆ ಇದೆ. ಇದರ ನಡುವೆ ಬಿಗ್ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿಗಳು ಯಾರು ಗೆಲ್ಲಬಹುದು ಎನ್ನುವ ಭವಿಷ್ಯ ಹೇಳುತ್ತಿದ್ದಾರೆ. ಯಾವ ಆಧಾರದ ಮೇಲೆ ಯಾರಿಗೆ ಗೆಲ್ಲುವ ಚಾನ್ಸ್ ಜಾಸ್ತಿ ಇದೆ ಎಂಬ ವಿವರಣೆಯನ್ನೂ ನೀಡುತ್ತಿದ್ದಾರೆ.
ಇದನ್ನೂ ಓದಿ- ಬಿಗ್ ಬಾಸ್ನಿಂದ ಹೊರಬರಲು ಇದೇ ಮುಖ್ಯ ಕಾರಣ: ಜೀ ಕನ್ನಡ ನ್ಯೂಸ್ಗೆ ಗೋಲ್ಡ್ ಸುರೇಶ್ ಸ್ಪಷ್ಟನೆ
ಕಳೆದ ವಾರವಷ್ಟೇ ಬಿಗ್ಬಾಸ್ ಮನೆಯಿಂದ ಹೊರಗಡೆ ಬಂದಿರುವ ಶಿಶಿರ್ ಶಾಸ್ತ್ರಿ ಅವರ ಪ್ರಕಾರ ಈ ಸಲ ಫೈನಲ್ ತಲುಪುವವರು ಯಾರು ಮತ್ತು ಕಪ್ ಗೆಲ್ಲುವವರು ಯಾರು ಎನ್ನುವುದನ್ನು ತಿಳಿಸಿದ್ದಾರೆ. ಅವರ ಪ್ರಕಾರ ಫೈನಲ್ ತಲುಪುವ ನಾಲ್ಕು ಜನ ಎಂದರೆ ಉಗ್ರಂ ಮಂಜು, ತ್ರಿವಿಕ್ರಮ್, ಹನುಮಂತ ಮತ್ತು ಧನರಾಜ್. ಕಪ್ ಎತ್ತುವವರು ಹನುಮಂತ ಅಥವಾ ಧನರಾಜ್. ನಾನು ಬಿಗ್ಬಾಸ್ ಮನೆಯಲ್ಲಿ ಇದ್ದು ಹೊರಗೆ ಬಂದಿರುವವನು ಅಲ್ಲಿ ಹೇಗೆ ನಡೆಯುತ್ತೆ ಅಂತಾ ಗೊತ್ತು ಹಾಗಾಗಿ ಹನುಮಂತ ಅಥವಾ ಧನರಾಜ್ ಫೈನಲ್ ಗೆಲ್ಲಬಹುದು ಎಂದಿದ್ದಾರೆ.
ಬಿಗ್ಬಾಸ್ ಮನೆಯಿಂದ ಹೊರಬಂದಿರುವ ಮತ್ತೊಬ್ಬ ಸ್ಪರ್ಧಿ ಗೋಲ್ಡ್ ಸುರೇಶ್ ಕೂಡ ಮುತ್ತಿನಂತ ಮಾತೊಂದನ್ನು ಆಡಿದ್ದಾರೆ. ನನ್ನ ಅಳಿಯ ಹನುಮಂತನೇ ಕಪ್ ಗೆಲ್ಲುವುದು ಎಂದಿದ್ದಾರೆ. ಎಲ್ಲರಿಗಿಂತ ಚೆನ್ನಾಗಿ ಆಟವಾಡುತ್ತಿರುವುದರಿಂದ ಹನುಮಂತಗೆ ಬಿಗ್ ಬಾಸ್ ಕನ್ನಡ ಸೀಸನ್ 11 ಗೆಲ್ಲುವ ಚಾನ್ಸ್ ಜಾಸ್ತಿಯಂತೆ!
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.