ಬೆಂಗಳೂರು: ಬಿಗ್‌ಬಾಸ್ ಓಟಿಟಿ ಸೀಸನ್-1‌ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದ್ದು, ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗೋದು ಯಾರು ಅನ್ನೋ ಚರ್ಚೆ ಆರಂಭವಾಗಿದೆ. ಕೆಲವರು ಸೋನು ಶ್ರೀನಿವಾಸ್‌ ಗೌಡ ಎಲಿಮಿನೇಟ್‌ ಆಗಲಿದ್ದಾರೆ ಅಂತಿದ್ರೆ, ಇನ್ನೂ ಕೆಲವರು ಬೇರೆಯವರ ಹೆಸರು ಹೇಳುತ್ತಿದ್ದಾರೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಪರ ಹಾಗೂ ವಿರೋಧದ ಚರ್ಚೆ ತುಂಬಾ ಜೋರಾಗಿದೆ.


COMMERCIAL BREAK
SCROLL TO CONTINUE READING

ಈ ಬಾರಿ ಓಟಿಟಿ ಬಳಕೆದಾರರನ್ನೇ ಗಮನದಲ್ಲಿ ಇಟ್ಟುಕೊಂಡು ಬಿಗ್‌ಬಾಸ್ ಓಟಿಟಿ ಸೀಸನ್ ಆರಂಭಿಸಲಾಗಿದೆ. ಹೀಗಾಗಿಯೇ ಸೋಷಿಯಲ್‌ ಮೀಡಿಯಾ ಸ್ಟಾರ್‌ಗಳನ್ನ ಕೂಡ ಬಿಗ್‌ಬಾಸ್ ಮನೆಗೆ ಕರೆಸಲಾಗಿದೆ. ಈ ಪೈಕಿ ಸೋನು ಶ್ರೀನಿವಾಸ್‌ ಗೌಡ ಕೂಡ ಒಬ್ಬರು.


ಇದನ್ನೂ ಓದಿ: ಕೋವಿಡ್‌ ಲಸಿಕೆಯ ಮೂರನೇ ಡೋಸ್‌ ಪಡೆದವರು 17% ಮಾತ್ರ : ಸಚಿವ ಸುಧಾಕರ್‌


ಸೋನು ಶ್ರೀನಿವಾಸ್‌ ಗೌಡ ಆಯ್ಕೆ ಆದ ದಿನದಿಂದಲೂ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಹಾಗೇ ಟ್ರೋಲರ್ಸ್‌ ಮಾಡೋ ಟ್ರೋಲ್‌ಗಳಿಗೆ ಸೋನು ಶ್ರೀನಿವಾಸ್‌ ಗೌಡ ಆಹಾರ ಆಗುತ್ತಿದ್ದಾರೆ.ಹೊರಗೆ ಇದ್ದಾಗಲೂ ಟ್ರೋಲ್‌ ಆಗುತ್ತಿದ್ದ ಸೋನು, ಇದೀಗ ಬಿಗ್‌ಬಾಸ್‌ ಮನೆಯಲ್ಲಿ ಇದ್ದರೂ ಟ್ರೋಲರ್‌ಗಳ ಕೆಂಗಣ್ಣಿಗೆ ಗುರಿಯಾಗಿ ಟ್ರೋಲ್‌ ಆಗುತ್ತಿದ್ದಾರೆ. ಹಾಗೇ ಮತ್ತೊಂದು ಕಡೆ ಎಲಿಮಿನೇಷನ್‌ ವಿಚಾರ ಕೂಡ ಗಂಭೀರ ಚರ್ಚೆಗೆ ಕಾರಣವಾಗಿದೆ.


ಸೋನು ಔಟ್..?‌
ಸೋನು ಶ್ರೀನಿವಾಸ್‌ ಗೌಡ ಹೊರಗೆ ಹೋಗೋದು ಗ್ಯಾರಂಟಿ ಅನ್ನೋ ಚರ್ಚೆ ದೊಡ್ಡ ಸದ್ದು ಮಾಡುತ್ತಿದೆ. ಅದರಲ್ಲೂ ಸೋಷಿಯಲ್‌ ಮೀಡಿಯಾ ತುಂಬಾ ಈ ಕುರಿತು ಸಾವಿರಾರು ಪೋಸ್ಟ್‌ ಕಮೆಂಟ್‌ ಹಾಕಿ ಜನರು ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಆದರೆ ಇದಕ್ಕೆಲ್ಲಾ ಉತ್ತರ ಸಿಗಬೇಕು ಅಂದರೆ ಇನ್ನೆರಡು ದಿನ ಕಾಯಬೇಕಿದೆ. ಕಿಚ್ಚ ಸುದೀಪ್‌ ಅವರು ವಾರಾಂತ್ಯದಲ್ಲಿ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಈ ಕುರಿತು ಘೋಷಣೆ ಹೊರಬೀಳಲಿದ್ದು, ಯಾರು ಹೊರಗೆ ಹೋಗಲಿದ್ದಾರೆ ಅನ್ನೋದು ಡಿಸೈಡ್‌ ಆಗಲಿದೆ.


ಇದನ್ನೂ ಓದಿ: ವೀರಪ್ಪನ್ ತಾಣವಾಗಿದ್ದ ಈ ಊರು ಇಂದು ಯೋಧರ ಗ್ರಾಮ.. ಇಲ್ಲಿದೆ ಸೇನಾ ತರಬೇತಿ ಅಕಾಡೆಮಿ


ಸೋಷಿಯಲ್‌ ಮೀಡಿಯಾದಲ್ಲಿ ಹಲವು ವರ್ಷಗಳಿಂದ ಸೋನು ಶ್ರೀನಿವಾಸ್‌ ಗೌಡ ಸಿಕ್ಕಾಪಟ್ಟೆ ಆಕ್ಟಿವ್‌ ಆಗಿದ್ದು, ಪದೇ ಪದೆ ವಿವಾದಗಳನ್ನೂ ಮೈಮೇಲೆ ಎಳೆದುಕೊಳ್ಳುವುದಕ್ಕೆ ಫೇಮಸ್.‌ ಇದೀಗ ಬಿಗ್‌ಬಾಸ್ ಓಟಿಟಿ ಸೀಸನ್-1‌ ಸ್ಪರ್ಧಿ ಕೂಡ ಆಗಿರುವ ಸೋನು ಶ್ರೀನಿವಾಸ್‌ ಗೌಡ ಇತರ ಸ್ಪರ್ಧಿಗಳ ಜೊತೆಯಲ್ಲೂ ಕಿರಿಕ್‌ ಮಾಡಿಕೊಂಡು ಸದ್ದು ಮಾಡುತ್ತಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.