ತೆಲುಗು ಬಿಗ್‌ಬಾಸ್‌ ಆರಂಭವಾಗಿದ್ದನ್ನು ನೋಡಿ ಕನ್ನಡಿಗರು ಸಹ ಬಿಗ್‌ಬಾಸ್‌ ಅಪ್ಡೇಟ್‌ಗಾಗಿ ಕಾತುರದಿಂದ ಕಾಯುತ್ತಿದ್ದರು.. ಅಲ್ಲದೇ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿದ್ದ ಸುದೀಪ್‌ ಅವರ ಮಾತು ಕೇಳಿ ಯಾರು ಹೋಸ್ಟ್‌ ಆಗಲಿದ್ದಾರೆ ಎನ್ನುವ ಕುತೂಹಲ ಮೂಡಿತ್ತು..


COMMERCIAL BREAK
SCROLL TO CONTINUE READING

ಈ ಬಹುನಿರೀಕ್ಷಿತ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ರ ಮೊದಲ ಪ್ರೋಮೋ ರಿಲೀಸ್‌ ಆಗಿದ್ದು, ಬೆಂಕಿ.. ಬಿರುಗಾಳಿಯನ್ನು ಒಳಗೊಂಡಿರುವ ಕಣ್ಣಿನ ಲೋಗೋಗೆ ಗುಡುಗಿನ ಸದ್ದು ಎಲ್ಲರನ್ನು ಬೆಚ್ಚಿಬೀಳಿಸುವಂತಿದೆ.. 


ಇದನ್ನೂ ಓದಿ-ಯಾವ ಸ್ಟಾರ್‌ ಹೀರೋಗೂ ಕಮ್ಮಿಯಿಲ್ಲ ಸಲ್ಮಾನ್‌ ಖಾನ್‌ ಬಾಡಿಗಾರ್ಡ್‌! ಬಾಯಿಜಾನ್‌ ಇವನ ಮುಂದೆ ಏನೂ ಅಲ್ಲ ಗುರೂ!!


ಈ ಬಾರಿಯೂ ಬಿಗ್‌ಬಾಸ್‌ ಕಣ್ಣಿನ ಲೋಗೋ ಫುಲ್‌ ಅಟ್ರ್ಯಾಕ್ಟ್‌ ಆಗಿ ಕಾಣಿಸಿಕೊಂಡಿದ್ದು, ಬೆಂಕಿ ಮತ್ತು ನೀರಿನ ಸಮ್ಮಿಲನದಲ್ಲಿ ಬಿಗ್‌ ಬಾಸ್‌ ಕಣ್ಣು ಮೂಡಿ ಬಂದಿದೆ.. ಹೀಗೆ ಸಾಕಷ್ಟು ವಿಶೇಷವಾಗಿರುವ ಪ್ರೋಮೋ ರಿಲೀಸ್‌ ಆಗಿದ್ದು, ಎಲ್ಲ ಸೀಸನ್‌ಗಳಿಗಿಂತ ಈ ಸೀಸನ್‌ ಭರ್ಜರಿಯಾಗಿ ಇರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.. 


 


ಇದನ್ನೂ ಓದಿ-ಆ ವಿಚಾರ ಗೊತ್ತಾದ್ರೆ ನನ್ನ ಗಂಡ ನನ್ನ ಜೊತೆ ಇರಲ್ಲ..! 37 ವಯಸ್ಸಾದ್ರೂ ಮದುವೆಯಾಗದಕ್ಕೆ ಕಂಗಾನಾ ಕ್ಲಾರಿಟಿ


ಇನ್ನು ಈ ಬಾರಿ ಬಿಗ್‌ಬಾಸ್‌ ಹೋಸ್ಟ್‌ ಯಾರು ಎನ್ನುವುದು ಬಹುದೊಡ್ಡ ಚರ್ಚೆಯ ವಿಷಯವಾಗಿತ್ತು.. ಆದರೆ ಇದೀಗ ಇದಕ್ಕೆ ತೆರೆಬಿದ್ದಿದೆ.. ಹೌದು ರಿಲೀಸ್‌ ಆಗಿರುವ ಪ್ರೋಮೋದಲ್ಲಿ ಕಿಚ್ಚ ಸುದೀಪ್‌ ಅವರೇ ನಿರೂಪಣೆ ಮಾಡುತ್ತಾರೆ ಎನ್ನುವುದು ಗೊತ್ತಾಗಿದೆ.. ಏಕೆಂದರೇ ಅದರಲ್ಲಿ ಕಿಚ್ಚಸುದೀಪ್‌ ಹ್ಯಾಶ್‌ ಟ್ಯಾಗ್‌ ಬಳಸಲಾಗಿದೆ.. ಹೀಗಾಗಿ ಈ ಬಾರಿಯೂ ಸ್ಯಾಂಡಲ್‌ವುಡ್‌ ಬಾದ್‌ ಷಾ ಕಿಚ್ಚನೇ ನಿರೂಪಕ ಎನ್ನುವುದು ಪಕ್ಕಾ ಆಗಿದೆ..


ಸದ್ಯ ರಿಲೀಸ್‌ ಆಗಿರುವ ಈ ಪ್ರೋಮೋ ಬಿಗ್‌ಬಾಸ್‌ ಅಭಿಮಾನಿಗಳಲ್ಲಿ ಕುತೂಲ ಹೆಚ್ಚಿಸುತ್ತಿದ್ದು, ಕಿಚ್ಚ ಸುದೀಪ್‌ ಅವರು ಇರುವಂತಹ ಪ್ರೋಮೋ ಯಾವಾಗ ರಿಲೀಸ್‌ ಆಗುತ್ತೇ ಎಂದು ವೀಕ್ಷಕರು ಕಾತುರದಿಂದ ಕಾಯ್ತಾಇದ್ದಾರೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.