Neethu Vanajakshi : ಗಂಡಾಗಿ ಹುಟ್ಟಿ ಹೆಣ್ಣಾದ ಬಿಗ್‌ಬಾಸ್ ಸ್ಪರ್ಧಿ..! ಗದಗ ʼಮಂಜುನಾಥ್ʼ ನೀತು ಆದ ಕತೆ
BBK 10 : ಬಿಗ್‌ಬಾಸ್ ಸೀಸನ್ 10 ಶುರುವಾಗಿದೆ, ಮನೆ ಮಂದಿ ಒಬ್ಬರಿಗೊಬ್ಬರು ತಮ್ಮ ಸುಖ-ದುಃಖವನ್ನು ಹಂಚಿಕೊಳ್ಳುತ್ತಿದ್ದಾರೆ. ಬಿಗ್‌ಹೌಸ್‌ಗೆ ತೃತೀಯ ಲಿಂಗಿಯೊಬ್ಬರು ಪ್ರವೇಶ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಅವರೇ ನೀತು ವನಜಾಕ್ಷಿ. ಇತ್ತೀಚಿಗೆ ನೀತು, ಮಂಜುನಾತ್ನಿಂದ ನೀತು ಹೇಗೆ ಆದ್ರು ಎಂಬುವುದರ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
Neetu in Bigg Boss kannada : ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್ 10 ಶುರುವಾಗಿದ್ದು, ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವೆ ಫೈಪೋಟಿ ಜೋರಾಗುತ್ತಿದೆ. ಅಲ್ಲದೆ ಸ್ಪರ್ಧಿಗಳ ನಡುವೆ ಸ್ನೇಹ, ಪ್ರೀತಿ, ವೈರತ್ವವೂ ಸಹ ಹೆಚ್ಚುತ್ತಿದೆ. ಇನ್ನು ಬಿಗ್‌ಹೌಸ್‌ಗೆ ಪ್ರಥಮ ಬಾರಿಗೆ ತೃತೀಯ ಲಿಂಗಿಯೊಬ್ಬರು ಪ್ರವೇಶ ಮಾಡಿದ್ದು ಎಲ್ಲರಿಗೂ ತಿಳಿದಿದೆ.
ಹೌದು.. ಟ್ರ್ಯಾನ್ಸ್‌ಜೆಂಡರ್ ನೀತು ವನಜಾಕ್ಷಿ ಈ ಬಾರಿಯ ಬಿಗ್‌ಬಾಸ್ ಶೋನಲ್ಲಿ ಸ್ಪರ್ಧೆ ಮಾಡಿದ್ದಾರೆ. ಗದಗ ಮೂಲದ ಮಂಜುನಾಥ್ ನೀತು ವನಜಾಕ್ಷಿ ಆಗಿ ಬದಲಾಗಿದ್ದಾರೆ. ಗಂಡಾಗಿ ಹುಟ್ಟಿದ್ದ ಮಂಜು, ಹೆಣ್ಣಾಗಿ ಬದಲಾಗಿದ್ದು ಹೇಗೆ ಎನ್ನುವ ಪ್ರಶ್ನೆ ಸೇರಿದಂತೆ ತಮ್ಮ ಜೀವನದ ಕಹಿ ಘಟನೆಗಳನ್ನು ಸಹ ಸ್ಪರ್ಧಿಗಳ ಜೊತೆ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ:ನೆಚ್ಚಿನ ನಟಿಗಾಗಿ ದ್ವಿಚಕ್ರ ವಾಹನದಲ್ಲಿ 1000 ಕಿಲೋಮೀಟರ್ ಪ್ರಯಾಣಿಸಿದ ಫ್ಯಾನ್ : ರಾಕುಲ್ ಬರ್ತ್‌ಡೇ ಸ್ಪೆಷಲ್
ಬಿಗ್‌ಬಾಸ್ ಸ್ಪರ್ಧಿಗಳು ತಮ್ಮ ಜೀವನದಲ್ಲಾದ ನೋವು ನಲಿವಿನ ಘಟನೆಗಳ ಕುರಿತು ಮನಬಿಚ್ಚಿ ಮಾತನಾಡುತ್ತಿದ್ದಾರೆ. ಈ ಪೈಕಿ ಕಿರುತೆರೆ ನಟಿ ಸಿರಿ ನೀತು ವನಜಾಕ್ಷಿ ದೈಹಿಕ ಬದಲಾವಣೆ ಕುರಿತು ಪ್ರಶ್ನೆ ಮಾಡಿದರು. ನಿಮಗೆ ಯಾವ ವಯಸ್ಸಿನಲ್ಲಿ ಈ ವಿಚಾರ ಗೊತ್ತಾಯಿತು ಅಂತ ಸಿರಿ ನೀತು ಅವರನ್ನು ಕೇಳಿದರು.
ಅದಕ್ಕೆ ನೀತು, ಏಳನೇ ಕ್ಲಾಸ್‌ನಲ್ಲಿ ಸ್ವಲ್ಪ ಗೊತ್ತಾಗೋಕೆ ಸ್ಟಾರ್ಟ್ ಆಯಿತು ಅಂದ್ರು, ಆಗ ಸಿರಿ, ಹೇಗೆ ಗೊತ್ತಾಗುತ್ತೆ.? ಅಂತ ಕೇಳಿದರು, ಈ ನಡುವೆ ಭಾಗ್ಯಶ್ರೀ ಸಹ ಮಾತನಾಡಲು ಪ್ರಾರಂಭಿಸಿ ನಿಮಗೆ ಹೇಗೆ ಅನಿಸಿತು?
ಅಂತ ಪ್ರಶ್ನೆ ಮಾಡಿದರು. ಇಬ್ಬರ ಪ್ರಶ್ನೆ ನೀತು ಉತ್ತರಿಸಿದರು.
ಇದನ್ನೂ ಓದಿ:ಪ್ರದೀಪ್ ಈಶ್ವರ್ ಬಿಗ್ ಬಾಸ್ ಗೆ ಬರಲು ಪಡೆದ ಸಂಭಾವನೆ ಗೊತ್ತಾ.!
ಪ್ರೌಡಾವಸ್ತೆಯಲ್ಲಿ ಹುಡುಗರ ಮಾತುಗಳು ನನಗೆ ಇಷ್ಟವಾಗುತ್ತಿರಲಿಲ್ಲ. ಹುಡುಗರೆಲ್ಲಾ ಹುಡುಗಿಯರ ಬಗ್ಗೆ ಮಾತನಾಡುತ್ತಿದ್ದರು. ನನಗೆ ಆ ಫೀಲ್ ಬರುತ್ತಿರಲಿಲ್ಲ. ನನಗೆ ಹುಡುಗರನ್ನ ಕಂಡ್ರೆ ಅಟ್ರ್ಯಾಕ್ಷನ್ ಆಗುತ್ತಿತ್ತು. ಇದು ನನಗೆ ಕನ್ಫ್ಯೂಶನ್ ಮಾಡಿತ್ತು. ಆಗ ನಾನು ಅಕ್ಕನ ಬಟ್ಟೆ ಹಾಕುತ್ತಿದ್ದೆ. ಕಾಜಲ್ ಹಚ್ಚಿಕೊಳ್ಳುತ್ತಿದ್ದೆ.
ನಾನು ಹುಡುಗ ಆಗಿರುವಾಗ ನನಗೆ ಎಷ್ಟೋ ಜನ ಹುಡುಗಿಯರು ಪ್ರಪೋಸ್ ಮಾಡಿದ್ರು. ಹುಡುಗ ಆಗಿ ನಾನು ತುಂಬಾ ಚೆನ್ನಾಗಿದ್ದೆ. ಆದರೆ, ಹುಡುಗನಾಗಿರೋದು ನನಗೆ ಇಷ್ಟ ಆಗುತ್ತಿರಲಿಲ್ಲ. ಪ್ರತಿದಿನ ಅಳುತ್ತಿದ್ದೆ.
ಮೊದಲು ನಾನು ಗೇ ಅಂದುಕೊಂಡಿದ್ದೆ. ಬರ್ತಾ ಬರ್ತಾ ಹುಡುಗಿಯರ ಡ್ರೆಸ್ ಹಾಕಿಕೊಂಡರೆ, ನಾನೇ ಎನಿಸುತ್ತಿತ್ತು. ಪ್ಯಾಂಟ್ ಶರ್ಟ್ ಹಾಕಿಕೊಂಡರೆ ನಾನಲ್ಲ ಎನ್ನುವ ಭಾವನೆ ಬರುತ್ತಿತ್ತು ಎಂದು ಹಳೇ ದಿನಗಳನ್ನ ನೆನಪು ಮಾಡಿಕೊಂಡ ನೀತು ವನಜಾಕ್ಷಿ ಕಣ್ಣೀರು ಸುರಿಸಿದರು.
ಇದನ್ನೂ ಓದಿ:ಡಿಸಿಪ್ಲಿನ್ ಅನ್ನೋದಕ್ಕೆ ಒಂದರ್ಥ ಶಿವಣ್ಣ ಎಂದ ಸಂದೇಶ್
ಅಲ್ಲದೆ, ಅಕ್ಕನಿಗೆ ನಾನು ಈ ವಿಷಯವನ್ನ ಮೊದಲು ಹೇಳಿದೆ. ಸಮಾಜಕ್ಕೆ ನಾನು ಭಯ ಪಟ್ಟಿಲ್ಲ. ಆದರೆ ಕುಟುಂಬದ ಮರ್ಯಾದೆಯನ್ನ ನಾನು ಉಳಿಸಬೇಕಿತ್ತು. ಅದು ಅಕ್ಕನಿಗೆ ಅರ್ಥ ಆಯ್ತು. ನನ್ನ ತಾಯಿ ನನಗೆ ತುಂಬಾ ಸಪೋರ್ಟ್ ಮಾಡ್ತಾರೆ ಅಂತ ಅಂದುಕೊಂಡಿರಲಿಲ್ಲ. ಅವರಿಗೆ ನಾನು ಈ ವಿಷಯ ಹೇಳಿದಾಗ, ಸಪೋರ್ಟ್ ಮಾಡಿದ್ರು. ಈ ತರ ಸಪೋರ್ಟ್ ಎಲ್ಲಾ ಮಂಗಳಮುಖಿಯರಿಗೆ ಸಿಕ್ಕರೆ, ಖಂಡಿತ ಸಾಧನೆ ಮಾಡ್ತಾರೆ ಎಂದು ನೀತು ತಮ್ಮ ಜೀವನದ ನೋವಿನ ಕತೆ ಬಿಚ್ಚಿಟ್ಟರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.