Dharma keerthiraj:ಖ್ಯಾತ ಖಳನಟ ಕೀರ್ತಿರಾಜ್‌ ಅವರ ಪುತ್ರರಾದ ಧರ್ಮ ಅವರು ಕೆಲವೊಂದು ಸಿನಿಮಾಗಳಲ್ಲಿ ನಟಿಸಿ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೆ ಆದ ಹೆಜ್ಜೆ ಗುರುತನ್ನು ಹಚ್ಚೆ ಹಾಕಿದವರು. ಇತ್ತೀಚೆಗೆ ಬಿಗ್‌ ಬಾಸ್‌ ಭಾಗವಾಗಿದ್ದ ಶಧರ್ಮ ಅವರ ಮದುವೆ ಕುರಿತು ಚರ್ಚೆಗಳು ಆಗಾಗ ನಡೆಯುತ್ತಾ ಇರುತ್ತದೆ.


COMMERCIAL BREAK
SCROLL TO CONTINUE READING

ಧರ್ಮ ಕೀರ್ತಿರಾಜ್‌ ಬಿಗ್‌ಬಸ್‌ ಸೀಸನ್‌ 11ರ ಸ್ಪರ್ಧಿಗಳಲ್ಲಿ ಒಬ್ಬ ಅದ್ಭುತ ಆಟಗಾರರಾಗಿದ್ದರು, ಇವರ ಆಟ ಅನೇಕರಿಗೆ ಇಷ್ಟವಾಗಿತ್ತು. 52 ದಿನಗಳ ಕಾಲ ಬಿಗ್‌ ಬಾಸ್‌ ಮೆನಯಲ್ಲಿ ಸೈಲೆಂಟ್‌ ಆಗಿದ್ದ ಧರ್ಮ, ಎಲಿಮಿನೇಟ್‌ ಆಗಿ ಬಿಗ್‌ ಬಾಸ್‌ ಮೆನಯಿಂದ ಹೊರಬಿದ್ದಿದ್ದರು.


ಇನ್ನೂ, ಬಿಗ್‌ಬಾಸ್‌ ಮೆನಯಲ್ಲಿರುವಾಗ ಧರ್ಮ ಹಾಗೂ ಅನುಷಾ ರೈ ಅವರು ಪರಸ್ಪರ ಪ್ರೀತಿಸುತ್ತಿದ್ದಾರೆ, ಇವರಿಬ್ಬರು ಮದುವೆಯಾದರೆ ತುಂಬಾ ಚೆನ್ನಾಗಿ ಇರುತ್ತೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ, ಬಿಗ್‌ ಬಾಸ್‌ ಮೆನೆಯಿಂದ ಹೊರಬಂದ ಬಂದ ನಂತರ ಧರ್ಮಾ ಅವರು "ನಾವಿಬ್ಬರು ಒಳ್ಳೆ ಸ್ನೇಹಿತರಷ್ಟೆ, ನಮ್ಮಿಬ್ಬರದ್ದು ತೀರಾ ವಿಭಿನ್ನವಾದ ವ್ಯಕ್ತಿತ್ವ" ಎಂದು ಊಹಾಪೋಹಗಳಿಗೆ ತೆರೆ ಎಳೆದಿದ್ದರು.


ಇದೀಗ ಇತ್ತೀಚೆಗೆ ಧರ್ಮ ಅವರು ಒಂದು ಸಂಧರ್ಶನದಲ್ಲಿ ಕಾಣಿಸಿಕೊಂಡಿದ್ದು, ಈ ಸಂದರ್ಶನಲ್ಲಿ ಪ್ರೇಕ್ಷಕರು ನೀವು ಅನುಷಾ ರೈ ಅವರನ್ನು ಮದುವೆಯಾಗುತ್ತೀರಾ ಎಂದು ಕೇಳುತ್ತಿದ್ದಾರೆ ಇದಕ್ಕೆ ನಿಮ್ಮ ಉತ್ತರ ಏನು ಎಂದಿದ್ದರು, ಇದಕ್ಕೆ ಉತ್ತರಿಸಿದ ಧರ್ಮ ಕೀರ್ತಿರಾಜ್‌ ಅವರು "ನಾನು ಇದೇ ವರ್ಷ ಅಂದರೆ 2025 ರಲ್ಲಿ ಮದುವೆಯಾಗಲಿದ್ದಾನೆ, ಅಪ್ಪ ಅಮ್ಮ ಹುಡುಗಿಯನ್ನು ಹುಡುಕಿದ್ದಾರೆ, ಮಾತು ಕತೆ ಸಹ ನಡೆದಿದೆ, ಈ ವರ್ಷ ಮದುವೆಯಾಗಲಿದ್ದೇನೆ" ಎಂದಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.