BBK9 : ಆಟ ಪಾಠದ ಜೊತೆ ಬಿಗ್‌ಬಾಸ್‌ ಮಂದಿಗೆ ಸಖತ್‌ ಫನ್‌ ಸಿಗುತ್ತಿದೆ. ದೊಡ್ಮನೆ ಮಂದಿಗೆ ಬಿಗ್‌ಬಾಸ್‌ ನೀಡುತ್ತಿರುವ ವಿಚಿತ್ರ ಟಾಸ್ಕ್‌ಗಳು ತಲೆನೋವಾಗಿ ಪರಿಣಮಿಸಿದ್ರೆ ಟಿವಿ ಮುಂದೆ ಕುಳಿತ ಪ್ರೇಕ್ಷಕರ ನಗುವಿಗೆ ಕಾಣವಾಗುತ್ತಿದೆ. ಇದೀಗ ಪ್ರಶಾಂತ್‌ ಸಂಬರ್ಗಿ ತುಂಡು ಬಟ್ಟೆತೊಟ್ಟು ಕ್ಯೂಟ್‌ ಹುಡುಗಿಯ ಅವತಾರ ತಾಳಿದ್ದು ಸಂಬರ್ಗಿಯ ಹೊಸ ಅವತಾರ ನೋಡಿದ ಪ್ರೇಕ್ಷಕರ ತಲೆತಿರುಗಿ ಬಿಳುವಂತಿದೆ.


COMMERCIAL BREAK
SCROLL TO CONTINUE READING

ಪ್ರತಿಯೊಂದು ಟಾಸ್ಕ್‌ ಚಿತ್ರ ವಿಚಿತ್ರ. ಬಿಗ್​ ಬಾಸ್​ ಆಟದ ನಿಯಮಗಳನ್ನು ಕೇಳಿದ್ರೆ ಶಾಕ್‌ ಆಗ್ಲೇಬೇಕು. ಏಕೆಂದ್ರೆ ಶಾಕ್‌ ಆಗ್ಲೀ ಅಂತಾನೆ ಬಿಗ್‌ಬಸ್‌ ಈ ರೀತಿಯ ಟಾಸ್ಕ್‌ ನೀಡೋದು. ಆ ನಿಯಮಗಳನ್ನು ಮುರಿದರೆ ಸ್ಪರ್ಧಿಗಳಿಗೆ ಶಿಕ್ಷೆ ನೀಡಲಾಗುತ್ತದೆ. ಈಗ ಅನುಪಮಾ ಗೌಡ‌ ಅವರಿಗೆ ಡಿಫರೆಂಟ್ ಶಿಕ್ಷೆ ನೀಡಲಾಗಿದ್ದು, ಪ್ರತಿ ಬಾರಿ ನೀರು ಕುಡಿಯಬೇಕು ಅಂದ್ರೆ ಅವರು ಓರ್ವ ಪುರುಷ ಸ್ಪರ್ಧಿಗೆ ಡ್ಯಾನ್ಸ್​ ಕಲಿಸಬೇಕು.


ಇದನ್ನೂ ಓದಿ: Mandeep Roy: ಸ್ಯಾಂಡಲ್‌ವುಡ್‌ನ ಹಿರಿಯ ನಟ ಮನ್‌ದೀಪ್‌ ರಾಯ್‌ಗೆ ಹೃದಯಾಘಾತ


ಇನ್ನು ಈ ಟಾಸ್ಕ್‌ನ ಪ್ರೋಮೋವನ್ನು ಬಿಗ್‌ಬಾಸ್‌ ಬಿಡುಗಡೆಮಾಡಿದ್ದು, ಪ್ರೋಮೋದಲ್ಲಿ ಅನುಪಮಾ ಅವರಿಗೆ ಲೆಟರ್‌ ಒಂದು ಕಾಯ್ದಿರುತ್ತದೆ. ಅದ್ರಲ್ಲಿ ಅನುಪಮಾ ಅವರಿಗೆ ಪ್ರತಿ ಸರಿ ನೀರು ಕುಡಿಯುವ ಮುನ್ನ ಮನೆಯ ಸದಸ್ಯರೊಬ್ಬರಿಗೆ ಡಾನ್ಸ್‌ ಹೇಳಿಕೊಡಬೇಕು ಎಂದು ಬಿಗ್‌ಬಾಸ್‌ ತಿಳಿಸುತ್ತದೆ. ಇನ್ನು ಬಿಗ್‌ಬಾಸ್‌ ಆದೇಶದಂತೆ ಅನುಪಮಾ ಮೊದಲು ಪ್ರಶಾಂತ್​ ಸಂಬರ್ಗಿ ಡಾನ್ಸ್‌ ಹೇಳಿಕೊಡುತ್ತಾರೆ. ಆದ್ರೆ ಸಂಬರ್ಗಿ ಅವರು ಯುವತಿ ವೇಷ ಧರಿಸಿ ಡ್ಯಾನ್ಸ್​ ಮಾಡಿದ್ದು, ನೋಡುಗರಿಗೆ ನಗು ಬರಿಸುವಂತಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.