Bigg Boss OTT Season 2 : ಬಿಗ್ ಬಾಸ್ OTT ಹೊಸ ಸೀಸನ್ ಶುರುವಾಗಲಿದೆ. ಕಾರ್ಯಕ್ರಮದ ಎರಡನೇ ಸೀಸನ್‌ನ ಟೀಸರ್ ಮಂಗಳವಾರ ಬಿಡುಗಡೆಯಾಗಿದೆ. ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಬಿಗ್ ಬಾಸ್ ಒಟಿಟಿಯ ಮೊದಲ ಸೀಸನ್ ಅನ್ನು ಕರಣ್ ಜೋಹರ್ ನಡೆಸಿಕೊಟ್ಟರು ಮತ್ತು ದಿವ್ಯಾ ಅಗರ್ವಾಲ್ ವಿನ್ನರ್‌ ಆದರು.


COMMERCIAL BREAK
SCROLL TO CONTINUE READING

ಟೀಸರ್‌ನಲ್ಲಿ ಸಲ್ಮಾನ್ ತಮ್ಮ ವಿಶಿಷ್ಟ ಶೈಲಿಯಲ್ಲಿ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿ ಬಿಗ್‌ ಬಾಸ್‌ ಎಷ್ಟು ಕಠಿಣವಾಗಿರಲಿದೆ ಎಂಬುದನ್ನು ಸಲ್ಮಾನ್‌ ಟೀಸರ್‌ನಲ್ಲೇ ಹೇಳಿದ್ದಾರೆ. ಶೋನಲ್ಲಿ ಪ್ರೇಕ್ಷಕರ ಭಾಗವಹಿಸುವಿಕೆಯ ಬಗ್ಗೆಯೂ ಅವರು ಸುಳಿವು ನೀಡಿದ್ದಾರೆ. ಬಿಳಿ ಟಿ-ಶರ್ಟ್ ಮತ್ತು ಬ್ಲೇಜರ್ ಧರಿಸಿರುವ ನಟ ಸಲ್ಮಾನ್‌ ಇತರ ನೃತ್ಯಗಾರರೊಂದಿಗೆ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ.


ತಿರುಪತಿ ದೇವಸ್ಥಾನದಲ್ಲಿ ಕೃತಿ ಸನೋನ್‌ಗೆ ಕಿಸ್‌ ಕೊಟ್ಟ ನಿರ್ದೇಶಕ, ಟೀಕೆಗೆ ಗುರಿ.!


ಕಳೆದ ಹದಿಮೂರು ಸೀಸನ್‌ಗಳಿಂದ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವ ಸಲ್ಮಾನ್ ಖಾನ್ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ಗಳಿಸಿದ್ದಾರೆ. 'ವೀಕೆಂಡ್ ಕಾ ವಾರ್' ಸಂಚಿಕೆಗಳನ್ನು ಅವರು ಜನ ಮೆಚ್ಚುವಂತೆ ನಡೆಸಿಕೊಡುತ್ತಾರೆ.


ಬಿಗ್ ಬಾಸ್ OTT ಸೀಸನ್ 2 ರ ಸ್ಪರ್ಧಿಗಳ ಪಟ್ಟಿಯನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಬಿಗ್ ಬಾಸ್ OTT 2 ಅದರ ಹಿಂದಿನ ಸೀಸನ್‌ನಂತೆ, ಆರು ವಾರಗಳ ಕಾಲ ನಡೆಯುತ್ತದೆ. ಮನೆಯೊಳಗೆ 10 ಸೆಲೆಬ್ರಿಟಿಗಳನ್ನು ಲಾಕ್ ಮಾಡಲಾಗುತ್ತದೆ. ಕಳೆದ ಸೀಸನ್‌ನಲ್ಲಿ, ಬಿಗ್ ಬಾಸ್ OTT ಯ ಮೂರು ಫೈನಲಿಸ್ಟ್‌ಗಳಾದ ಶಮಿತಾ ಶೆಟ್ಟಿ, ಪ್ರತೀಕ್ ಸೆಹಜ್‌ಪಾಲ್ ಮತ್ತು ನಿಶಾಂತ್ ಭಟ್ ಅವರಿಗೆ ಟಿವಿ ಶೋ ಬಿಗ್ ಬಾಸ್ ಸೀಸನ್‌ 15 ಕ್ಕೆ ಹೋಗಲು ಅವಕಾಶ ನೀಡಲಾಯಿತು. 


ಇದನ್ನೂ ಓದಿ: Tamanna Bhatia: ತಮನ್ನಾ ಬೋಲ್ಡ್‌ ಲುಕ್‌ಗೆ ಬೆವರಿದ ಗಂಡಹೈಕ್ಳು.. ಟೆಂಪರೇಚರ್‌ ಹೈ ಮಾಡುತ್ತೆ ಈ ವೆಬ್‌ ಸಿರೀಸ್‌!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.