Sangeetha Sringeri Saffari Ride At Bandipura: ಸ್ಯಾಂಡಲ್‌ವುಡ್‌ ನಟಿ ಹಾಗೂ ಬಿಗ್‌ ಬಾಸ್‌ ಬೆಡಗಿ ಸಂಗೀತಾ ಶೃಂಗೇರಿ ಬಂಡೀಪುರ ಸಫಾರಿಗೆ ಹೋಗಿದ್ದರು. ಈ ನಟಿ  ಸಫಾರಿಯಲ್ಲಿ ಇಡೀ ಅರಣ್ಯವನ್ನು ನೋಡಿ ಖುಷಿಯಾಗಿದ್ದಾರೆ. ಈ ನಟಿ ಕಾಡಿನಲ್ಲಿ ಹುಲಿಯನ್ನು ನೋಡಿ ಸಂತೋಷ ಪಟ್ಟಿದ್ದಾರೆ. ಹಾಗೆಯೇ ಈಕೆ ಅಲ್ಲಿ ಹುಲಿ ಒಟಾಡುತ್ತಿರುವ ವಿಡಿಯೋವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸೋಶಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ನಟಿ ಸಂಗೀತಾ ಶೃಂಗೇರಿ ಬಂಡೀಪುರ ಸಫಾರಯ ವೇಳೆ ಕೈಯಲ್ಲಿ ಒಂದು ದೊಡ್ಡ ಕ್ಯಾಮರಾ ಹಿಡಿದು ಕೊಂಡು ತಮಗೆ ಇಷ್ಟವಾಗೋ ಎಲ್ಲ ದೃಶ್ಯಗಳನ್ನ ಕ್ಯಾಪ್ಚರ್ ಮಾಡಿದ್ದಾರೆ. ಈಕೆ ಹುಲಿಯನ್ನು ನೋಡಿದಾಗ ಅದನ್ನು ಹೆಚ್ಚು ಕಡಿಮೆ ಒಂದು ಗಂಟೆ ನೋಡಿದ್ದಾರೆ. ಅಷ್ಟೇ ಅಲ್ಲದೆ ಈ ನಟಿ ಹುಲಿಯ ಪ್ರತಿ ಚಲನವಲನ ಕಂಡು ಬೆರಗಾಗಿದ್ದು, ಇದನ್ನು ಕ್ಯಾಮೆರಾದಲ್ಲಿ ಅಷ್ಟೇ ಪ್ರೀತಿಯಿಂದಲೇ ಸೆರೆಹಿಡಿದಿದ್ದಾರೆ. ಈ ವಿಡಿಯೋದಲ್ಲಿ ಬಿಸಿಲ ಬೇಗೆ ತತ್ತರಿಸ್ತಿದ್ದ ಹುಲಿ ನೀರಲ್ಲಿ ಕುಳಿತುಕೊಂಡಿತ್ತು.



ಇದನ್ನೂ ಓದಿ: Haripriya - Vasishta: ಐಷಾರಾಮಿ ಕಾರು ಖರೀದಿಸಿದ ಸಿಂಹಪ್ರಿಯಾ ದಂಪತಿ: ಇದರ ಬೆಲೆ ಹಾಗೂ ವಿಶೇಷತೆಗಳೇನು ಗೊತ್ತೇ??


ಸಾಮಾನ್ಯವಾಗಿ ಹುಲಿಯನ್ನು ಮೃಗಾಲಯದಲ್ಲಿಯೇ ನೋಡಿರುತ್ತೇವೆ. ಆದರೆ ಕಾಡಿನಲ್ಲಿ ನೋಡೋದು ಬಹುತೇಕ ಕಡಿಮೆ. ಆದರೆ ಬಂಡಿಪುರ ಅರಣ್ಯದ ಸಾಫಾರಿಯಲ್ಲಿ ಸಂಗೀತಾ ಶೃಂಗೇರಿ ಹುಲಿಯನ್ನು ನೋಡಿ ಖುಷಿಯಾಗಿದ್ದು, ತಮ್ಮ ಅನುಭವವನ್ನು ಬಣ್ಣಿಸಿದ್ದಾರೆ. ಈ ನಟಿ ಸೋಶಿಯಲ್‌ ಮಿಡಿಯಾದಲ್ಲಿ ವಿಡಿಯೋ ಶೇರ್‌ ಮಾಡಿಕೊಳ್ಳುವುದರ ಜೊತೆಗೆ ಕ್ಯಾಪ್ಶನ್‌ನಲ್ಲಿ ʻತುಂಬಾನೆ ಅದ್ಭುತ ಕ್ಷಣ ಇದಾಗಿದೆ. ಒಂದು ಗಂಟೆಗೂ ಹೆಚ್ಚು ಸಮಯ ಹುಲಿಯನ್ನ ನೋಡಿರೋದು ತುಂಬಾನೆ ಆನಂದ ಕೊಟ್ಟಿದೆ. ಇದು ನಿಜಕ್ಕೂ ಖುಷಿಯ ಕ್ಷಣʼ ಅಂತ ಬರೆದುಕೊಂಡಿದ್ದಾರೆ.


ಬಿಗ್‌ಬಾಸ್‌ ಮನೆಯಲ್ಲಿ ಸಂಗೀತಾ ಶೃಂಗೇರಿಯವರನ್ನು  ಸಿಂಹಿಣಿ ಎಂದು ಕರೆಯುತ್ತಿದ್ದು, ಈ ನಟಿ ಅಲ್ಲಿ ಸಿಂಹಿಣಿ ರೀತಿನೇ ಆಟವಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂಗೀತಾ ಶೃಂಗೇರಿ ಶೇರ್‌ ಮಾಡಿದ ಹುಲಿಯ ವಿಡಿಯೋವನ್ನು ನೋಡಿ ಕಾಮೆಂಟ್‌ ಬಾಕ್ಸ್‌ನಲ್ಲಿ  ಹುಲಿ ಜೊತೆಗೆ ಸಿಂಹಿಣಿ ಅಂತ ಕಾಂಪ್ಲಿಮೆಂಟ್ಸ್ ಕೊಟ್ಟಿದ್ದಾರೆ. ಸದಾ ವಿಭಿನ್ನವಾದ ಸವಾಲುಗಳನ್ನು ಎದುರಿಸಲು ರೆಡಿಯಾಗಿರುವ ಸಂಗೀತಾ ಶೃಂಗೇರಿ ಸದ್ಯ  ಬಂಡಿಪುರದಲ್ಲಿ ಸಫಾರಿ ಮಾಡಿಕೊಂಡು ಅಲ್ಲಿಯ ಕ್ಷಣವನ್ನು ಎಂಜಾಯ್ ಮಾಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.