ಖಡಕ್ ಧ್ವನಿಯಿಂದ ಅಬ್ಬರಿಸೋ ನಿಜವಾದ ಬಿಗ್‌ಬಾಸ್ ಇವರೇ! ನೀವು ಎಂದೂ ನೋಡಿರಲಿಕ್ಕಿಲ್ಲ..
Who Is Real Bigg Boss: ಬಿಗ್ ಬಾಸ್ ರಿಯಾಲಿಟಿ ಶೋ ಕ್ರೇಜ್ ಬೇರೆನೇ... ಆದರೆ ನಿಜವಾದ ಬಿಗ್ ಬಾಸ್ ಯಾರೆಂದು ಯಾರಿಗೂ ಗೊತ್ತಿಲ್ಲ... ಹಾಗಾದ್ರೆ ಧ್ವನಿಯಿಂದ ಅಬ್ಬರಿಸೋ ತೆರೆ ಮರೆಯಲ್ಲಿ ಅಡಗಿರುವ ಆ ಬಿಗ್ ಬಾಸ್ ಯಾರು? ಇಲ್ಲಿ ತಿಳಿಯೋಣ..
Bigg Boss: ಬಿಗ್ ಬ್ರದರ್ ರಿಯಾಲಿಟಿ ಶೋ ಎಂದು ವಿದೇಶದಲ್ಲಿ ಜನಪ್ರಿಯವಾಗಿದ್ದ ದೂರದರ್ಶನ ಕಾರ್ಯಕ್ರಮವನ್ನು ಬಿಗ್ ಬಾಸ್ ಎಂದು ಭಾರತಕ್ಕೆ ತರಲಾಯಿತು. ಬಿಗ್ ಬಾಸ್ ಹಿಂದಿಯ ಮೊದಲ ಸೀಸನ್ 2006 ರಲ್ಲಿ ನಟ ಅರ್ಷದ್ ವರ್ಷಿ ನಿರೂಪಕರಾಗಿ ಪ್ರಾರಂಭವಾಯಿತು. ಅಂದಿನಿಂದ ಈ ಶೋ ಪ್ರದರ್ಶನವು ಅವಿರೋಧವಾಗಿ ಮುಂದುವರಿಯುತ್ತದೆ. ಬಿಗ್ ಬಾಸ್ ಅನ್ನು ಶಿಲ್ಪಾ ಶೆಟ್ಟಿ, ಅಮಿತಾಬ್ ಮತ್ತು ಸಂಜಯ್ ದತ್ ಹೋಸ್ಟ್ ಮಾಡಿದ್ದಾರೆ. ಆದರೆ ಸೀಸನ್ 4 ರಲ್ಲಿ ಪ್ರವೇಶಿಸಿದ ಸಲ್ಮಾನ್ ಖಾನ್ ತಮ್ಮ ಟ್ರೇಡ್ ಮಾರ್ಕ್ ಹೋಸ್ಟಿಂಗ್ ಕೌಶಲ್ಯದೊಂದಿಗೆ ಇಲ್ಲಿಯವರೆಗೂ ಅವರೇ ಹೋಸ್ಟ್ ಆಗಿ ಉಳಿದುಕೊಂಡಿದ್ದಾರೆ..
2017 ರಲ್ಲಿ ಅಂದರೇ ಹಿಂದಿಯಲ್ಲಿ ಪಾದಾರ್ಪಣೆ ಮಾಡಿದ 10 ವರ್ಷಗಳ ನಂತರ ತೆಲುಗು ಪ್ರೇಕ್ಷಕರಿಗೆ ಬಿಗ್‌ಬಾಸ್ ಶೋನ ಪರಿಚಯವಾಯಿತು ಮೊದಲ ಸೀಸನ್ ಯಂಗ್ ಟೈಗರ್ ಎನ್ಟಿಆರ್ ಹೋಸ್ಟ್ ಆಗಿ ಪ್ರಾರಂಭವಾಯಿತು. ಸೀಸನ್ ಒನ್ ಟಾಪ್ ಸೆಲೆಬ್ರಿಟಿಗಳನ್ನು ಒಳಗೊಂಡು ದೊಡ್ಡ ಯಶಸ್ಸನ್ನು ಕಂಡಿತು. ಸಂಪೂರ್ಣ ಅರಿವಿಲ್ಲದಿದ್ದರೂ ಪ್ರೇಕ್ಷಕರು ಕಾರ್ಯಕ್ರಮವನ್ನು ವೀಕ್ಷಿಸಿದರು.
ಶಿವಬಾಲಾಜಿ ಮೊದಲ ಸೀಸನ್ ವಿಜೇತರಾದರು. ಎನ್‌ಟಿಆರ್ ಇತರ ಕಮಿಟ್‌ಮೆಂಟ್‌ಗಳಿಂದಾಗಿ ಸೀಸನ್ 2 ನಿಂದ ಹೊರಬಿದ್ದರು... ಬಳಿಕ ನ್ಯಾಚುರಲ್ ಸ್ಟಾರ್ ನಾನಿ ಹೋಸ್ಟ್ ಜವಾಬ್ದಾರಿಯನ್ನು ತೆಗೆದುಕೊಂಡರು.. ಇವರ ನಂತರ ಸೀಸನ್ 3 ರಲ್ಲಿ ಪ್ರವೇಶಿಸಿದ ನಾಗಾರ್ಜುನ ಕಾರ್ಯಕ್ರಮಕ್ಕೆ ಹೆಚ್ಚು ಜನಪ್ರಿಯತೆಯನ್ನು ತಂದರು. ನಾಗಾರ್ಜುನ ಹೋಸ್ಟಿಂಗ್‌ನಲ್ಲಿ ಬಿಗ್ ಬಾಸ್ ಸೀಸನ್‌ಗಳು ಯಶಸ್ವಿಯಾಗಿ ನಡೆಯುತ್ತಿವೆ. ಜೊತೆಗೆ ಹೆಚ್ಚಿನ ಟಿಆರ್‌ಪಿ ಪಡೆಯುತ್ತಿವೆ...
ಈ ರಿಯಾಲಿಟಿ ಶೋನ ಯಶಸ್ಸಿಗೆ ಬಿಗ್ ಬಾಸ್ ಧ್ವನಿಯ ಕಾಣದ ಪಾತ್ರವಿದೆ. ತೆರೆಮರೆಯ ಬಿಗ್ ಬಾಸ್ ಧ್ವನಿ ಕುತೂಹಲಕಾರಿಯಾಗಿದೆ ಎಂದರೇ ಅತಿಶಯೋಕ್ತಿಯಲ್ಲ... ಸ್ಪರ್ಧಿಗಳಿಗೆ ಗಂಭೀರ ಧ್ವನಿಯಲ್ಲಿ ಆದೇಶ ನೀಡುವ ಧ್ವನಿ ಪ್ರೇಕ್ಷಕರಲ್ಲಿ ಅಪಾರ ಕುತೂಹಲವನ್ನು ಉಂಟುಮಾಡುತ್ತದೆ. ಬಿಗ್ ಬಾಸ್ ಪ್ರೇಕ್ಷಕರು ಒಮ್ಮೆಯಾದರೂ ನಿಜವಾದ ಬಿಗ್ ಬಾಸ್ ಯಾರೆಂದು ನೋಡಲು ಬಯಸುತ್ತಾರೆ. ಬಿಗ್ ಬಾಸ್ ಯಾವುದೇ ಭಾವನೆಗಳನ್ನು ತೋರಿಸದೆ ಕೇವಲ ನಿಯಮಗಳು ಮತ್ತು ನಿಬಂಧನೆಗಳನ್ನು ಹೇಳುವ ಮೂಲಕ ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡುತ್ತಾರೆ. ಬಿಗ್ ಬಾಸ್ ಹೋಸ್ಟ್ ನಾಗಾರ್ಜುನ ಅವರಿಗೂ ಆದೇಶ ನೀಡುವ ಅಧಿಕಾರವನ್ನು ಹೊಂದಿದ್ದಾರೆ.. ಹಾಗಾದ್ರೆ ಯಾರು ಆ ಬಿಗ್‌ಬಾಸ್ ಎನ್ನುವುದು ಪ್ರೇಕ್ಷಕರ ಪ್ರಶ್ನೆ..
ಇದನ್ನೂ ಓದಿ-ಪೋರ್ನೋಗ್ರಫಿ ಪ್ರಕರಣ: ಶಿಲ್ಪಾ ಶೆಟ್ಟಿ ಮನೆ ಮೇಲೆ ಇಡಿ ದಾಳಿ..!
ವಾಸ್ತವವಾಗಿ ಬಿಗ್ ಬಾಸ್ ಎಂಬ ವ್ಯಕ್ತಿಯೇ ಇಲ್ಲ. ಅದು ಕೇವಲ ಕಾಲ್ಪನಿಕ ಪಾತ್ರ. ರೇಣುಕುಂಟ್ಲ ಶಂಕರ್ ಎಂಬ ಡಬ್ಬಿಂಗ್ ಕಲಾವಿದ ಬಿಗ್ ಬಾಸ್ ಗೆ ಧ್ವನಿಯಾಗಿದ್ದಾರೆ. ಸಿನಿಮಾ, ಧಾರಾವಾಹಿಗಳಿಗೆ ಡಬ್ಬಿಂಗ್ ಕಲಾವಿದರಾಗಿ ಬಹಳ ದಿನಗಳಿಂದ ಕೆಲಸ ಮಾಡುತ್ತಿದ್ದ ಶಂಕರ್ ಅವರ ಧ್ವನಿ ಬಿಗ್ ಬಾಸ್‌ಗೆ ಸರಿಯಾಗಿ ಹೊಂದಿಕೆಯಾಗುತ್ತದೆ ಎಂದು ಅವರ ಧ್ವನಿಯನ್ನು ನೀಡಲಾಗುತ್ತಿದೆ.. ಇದರೊಂದಿಗೆ ಎಲ್ಲಾ ಸೀಸನ್ ಗಳಿಗೂ ಬಿಗ್ ಬಾಸ್ ಗೆ ಧ್ವನಿ ನೀಡುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.