Bigg Boss season 9: ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ನೋಡಲು ಜನರು ಕಾದು ಕುಳಿತಿರುತ್ತಾರೆ. ಬಿಗ್ ಬಾಸ್ ಸೀಸನ್ 9 ಗಾಗಿ ಪ್ರೇಕ್ಷಕರು ಕಾತುರರಾಗಿದ್ದಾರೆ. ಈ ನಡುವೆ ಬಿಗ್ ಬಾಸ್ ಸೀಸನ್ 9 ಬಗ್ಗೆ ಹೊಸ ಅಪ್ ಡೇಟ್ ಹೊರಬಿದ್ದಿದೆ. ಇದನ್ನು ಕೇಳಿ ಬಿಗ್‌ ಬಾಸ್‌ ಪ್ರಿಯರಿಗೆ ಸಂತಸವಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬಾಲಿವುಡ್ ನಟ ರಾಜ್ ಬಬ್ಬರ್ ಗೆ ಎರಡು ವರ್ಷ ಜೈಲು ಶಿಕ್ಷೆ


ಬಿಗ್‌ ಬಾಸ್‌ ಸೀಸನ್‌ 9 ಹಲವಾರು ವಿಶೇಷತೆಗಳಿಂದ ಕೂಡಿರಲಿದೆ. ಕಲರ್ಸ್‌ ವಾಹಿನಿಯಲ್ಲಿ ಎರಡು ರೀತಿಯ ಬಿಗ್‌ ಬಾಸ್‌ ಸೀಸನ್‌ಗಳನ್ನು ಪ್ರಸಾರ ಮಾಡಲು ನಿರ್ಧರಿಸಲಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಸಹ ವೂಟ್ ಸೆಲೆಕ್ಟ್ ನಲ್ಲಿ ಬಿಗ್ ಬಾಸ್ ಪ್ರಸಾರವಾಗಲಿದೆ. 


ಕಲರ್ಸ್‌ ವಾಹಿನಿಯಲ್ಲಿ ಬಿಗ್‌ ಬಾಸ್‌ ಪ್ರಸಾರ ಆರಂಭವಾಗುವ ಮೊದಲೇ ವೂಟ್‌ ಸೆಲೆಕ್ಟ್ ನಲ್ಲಿ ಬಿಗ್‌ ಬಾಸ್‌ ಮಿನಿ ಸೀಸನ್‌ ಪ್ರಸಾರವಾಗಲಿರುವ ಸುದ್ದಿ ಕೇಳಿ ಫ್ಯಾನ್ಸ್‌ ದಿಲ್‌ ಖುಷ್‌ ಆಗಿದೆ. ಬಿಗ್‌ ಬಾಸ್‌ ಮಿನಿ ಸೀಸನ್‌ 42 ದಿನಗಳ ಕಾಲ ಪ್ರಸಾರವಾಗಲಿದ್ದು, ಇಂಟರ್‌ನೆಟ್‌ ಸ್ಟಾರ್‌ಗಳು, ಇನ್‌ಫ್ಲುಯೆನ್ಸರ್‌ಗಳು ಈ ಬಾರಿ ಬಿಗ್‌ ಬಾಸ್‌ನಲ್ಲಿರಲಿದ್ದಾರೆ.  


ಇದನ್ನೂ ಓದಿ: "ಇಷ್ಟು ವರ್ಷ ಪ್ರೀತಿ ತೋರಿದ್ದಕ್ಕೆ ಧನ್ಯವಾದ": ನಾಗ ಚೈತನ್ಯ ಭಾವುಕ ಪೋಸ್ಟ್‌


ಪ್ರತಿ ಬಾರಿಯಂತೆ ಈ ಸಲವೂ ಕಿಚ್ಚ ಸುದೀಪ್‌ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಮಿನಿ ಬಿಗ್‌ ಬಾಸ್‌ ಸೀಸನ್‌ನಲ್ಲಿ ಆಯ್ಕೆಯಾದ ಒಂದಿಬ್ಬರು ಸ್ಪರ್ಧಿಗಳು, ಕಲರ್ಸ್‌ ವಾಹಿನಿಯಲ್ಲಿ ಪ್ರಸಾರವಾಗುವ ಪೂರ್ಣ ಪ್ರಮಾಣದ ಸೀಸನ್‌ನಲ್ಲಿ ಭಾಗವಹಿಸುವ ಅವಕಾಶ ಪಡೆಯುತ್ತಾರೆ. 90 ದಿನಗಳ ಕಾಲ ಕಲರ್ಸ್‌ ಕನ್ನಡದಲ್ಲಿ ಬಿಗ್‌ ಬಾಸ್‌ ಪ್ರಸಾರವಾಗಲಿದೆ.


ಒಟಿಟಿಯಲ್ಲಿ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಅನ್ನು ಸಹ ಕಿಚ್ಚ ಸುದೀಪ್ ಅವರೆ ನಡೆಸಿಕೊಡಲಿದ್ದಾರೆ. ಬಳಿಕ ಟಿವಿಯಲ್ಲಿ ಬರುವ ಬಿಗ್ ಬಾಸ್ ಜವಾಬ್ದಾರಿ ಸಹ ಕಿಚ್ಚನದ್ದೇ ಆಗಿದೆ. ಬಿಗ್ ಬಾಸ್ ಆಗಸ್ಟ್‌ ಮೊದಲ ವಾರದಿಂದ ಆರಂಭವಾಗಲಿದೆ ಎಂದು ಸಹ ತಿಳಿದುಬಂದಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.