Bigg Boss Kannada : ಕಿಚ್ಚ ಸುದೀಪ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಕಿಚ್ಚನ ನೇರವಾಗಿ ನೋಡಬೇಕು ಒಂದೇ ಒಂದು ಫೋಟೋ ತಗೋಬೇಕು ಅಂತ ಸಹಸ್ರ ಅಭಿಮಾನಿಗಳು ಕಾದುಕುಳಿತಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಬಳಿಕ ಕಿಚ್ಚನ ಮುಂದಿನ ಸಿನಿಮಾಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. 2023 ರಲ್ಲಿ ಕಿಚ್ಚನ ಯಾವ ಸಿನಿಮಾ ಬರುತ್ತೆ ಅನ್ನೋದು ಫ್ಯಾನ್ಸ್ ಪ್ರಶ್ನೆಯಾಗಿದೆ. ಕಿಚ್ಚ ಇಷ್ಟು ದಿನ Bigg Boss ಸೀಸನ್ 9 ರಲ್ಲಿ ಕಂಪ್ಲೀಟ್ ಬ್ಯುಸಿಯಾಗಿದ್ದರು.ಇದೀಗ Bigg Boss ಸೀಸನ್ 9 ಮುಕ್ತಾಯವಾಗಿದೆ. ಈ ಸೀಸನ್ ನಲ್ಲಿ ರೂಪೇಶ್ ಶೆಟ್ಟಿ ಗೆದ್ದಿರೋ ಮ್ಯಾಟರ್ ನಿಮಗೆ ಗೊತ್ತೇ ಇದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಒಂದೇ ಹೋಟೆಲ್‌ನಲ್ಲಿ ರಶ್ಮಿಕಾ - ವಿಜಯ್‌ ನ್ಯೂ ಇಯರ್‌ ಸೆಲಿಬ್ರೆಷನ್‌!?


Bigg Boss ಶೋವನ್ನ ಕಿಚ್ಚ ತುಂಬಾ ಅದ್ಭುತವಾಗಿ ನಡೆಸಿಕೊಡುತ್ತಾರೆ. ಶನಿವಾರ ಮತ್ತು ಭಾನುವಾರದ ಕಾರ್ಯಕ್ರಮ ನೋಡಲು ಫ್ಯಾನ್ಸ್ ಅಂತೂ ನಿದ್ದೆಬಿಟ್ಟು ಕಾಯುತ್ತಾರೆ. ಒಂಬತ್ತು ಟಿವಿ ಸೀಸನ್ ಮತ್ತು ಒಂದು OTT ಸೀಸನ್ ನಡೆಸಿಕೊಟ್ಟ ಕಿಚ್ಚ ಈ ಬಾರಿಯ ಫಿನಾಲೆ ವೇದಿಕೆಯಲ್ಲಿ ಪುಟ್ಟ ಮಗುವಿನಂತೆ ಕಣ್ಣೀರು ಹಾಕಿ ಅಭಿಮಾನಿಗಳಿಗೂ ನೋವು ಕೊಟ್ಟರು ಅಂದ್ರೆ ತಪ್ಪಾಗಲ್ಲ ನೋಡಿ. Bigg Boss ಸೀಸನ್ 9ರ ಕಿಚ್ಚನ ಜರ್ನಿಯ ವಿಟಿ ನೋಡಿ ಕಿಚ್ಚ ಭಾವುಕರಾಗಿ  ಕಣ್ಣೀರು ಹಾಕಿಬಿಟ್ಟರು. ಇದನ್ನ ಕಂಡ ಸ್ಪರ್ಧಿಗಳು ಕೂಡ ಭಾವುಕರಾಗಿ ಬಿಟ್ಟರು. 


ಮನೆಗಳಲ್ಲಿ Bigg Boss ನೋಡುತ್ತಿದ್ದ ಫ್ಯಾನ್ಸ್ ಕೂಡ ಛೇ ಯಾಕಪ್ಪ ಕಿಚ್ಚ ಕಣ್ಣೀರು ಹಾಕಿದ್ದು ಅಂತ ನೋವಲ್ಲೇ ಮಾತನಾಡಿಕೊಂಡಿದ್ದು ಇದೆ. ಅದೇನೇ ಇರಲಿ ಕಿಚ್ಚ Bigg Boss ಶೋ ನಡೆಸಿಕೊಡೋ ರೀತಿ ತುಂಬಾ ಅದ್ಭುತವಾಗಿರುತ್ತೆ.ಯಾರಿಗೂ ನೋವು ಆಗದ ರೀತಿ ಏನು ಹೇಳಬೇಕೋ ಅದನ್ನ ತುಂಬಾ ಅಚ್ಚುಕಟ್ಟಾಗಿ ಹೇಳಿ ಅರ್ಥ ಮಾಡಿಸುತ್ತಾರೆ.ತಪ್ಪು ಮಾಡೋರನ್ನ ತಮ್ಮ ಮಾತುಗಳಿಂದಲೇ ತಿದ್ದಿಕೊಳ್ಳೋ ಹಾಗೆ ಬುದ್ದಿ ಹೇಳುತ್ತಾರೆ. ಕನ್ನಡ Bigboss ಶೋ ಕಿಚ್ಚನ ಜಾಗದಲ್ಲಿ ಬೇರೇ ಯಾರನ್ನೂ ಕೂಡ ಊಹೆ ಮಾಡದ ರೀತಿ ಕಿಚ್ಚ Bigg Boss ಶೋಗೆ ಜೀವ ತುಂಬೋ ಕೆಲಸ ಮಾಡಿದ್ದಾರೆ. ಸೋ ಕಿಚ್ಚನ ಪ್ರೀತಿ ಮಾಡೋ ಜನರಿಗೆ ಸುದೀಪ್ ಮಾತುಗಳನ್ನ ಕೇಳೋ ಆನಂದವೇ ಬೇರೇ ಬಿಡಿ. 


ಇದನ್ನೂ ಓದಿ : ರಕ್ಷಿತ್ ಶೆಟ್ಟಿ ಗಡ್ಡ ಬಿಟ್ಟಿರೋದು ಯಾಕೆ ಗೊತ್ತಾ..?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.