ಶೂಟಿಂಗ್‌ಗೆ ತೆರಳುತ್ತಿದ್ದ ಬಿಗ್ ಬಾಸ್ ಸ್ಪರ್ಧಿ ಕಾರು ಅಪಘಾತ..! ಸಂಪೂರ್ಣ ಜಖಂ.. ನಟಿಯ ಆರೋಗ್ಯ ಪರಿಸ್ಥಿತಿ..?
Bigg Boss Shubhashree car accident : ಬಿಗ್ ಬಾಸ್ ಸುಂದರಿ ಶುಭಶ್ರೀ ಕಾರು ಅಪಘಾತಕ್ಕೀಡಾಗಿದೆ. ಬೈಕ್ ನಲ್ಲಿ ಬರುತ್ತಿದ್ದ ಇಬ್ಬರು ಯುವಕರು ಆಕೆಯ ಕಾರಿಗೆ ಗುದ್ದಿದ್ದಾರೆ ಎಂದು ಹೇಳಲಾಗಿದೆ.. ಕಾರು ಸಂಪೂರ್ಣ ಜಖಂ ಆಗಿದೆಯಂತೆ.. ಹೆಚ್ಚಿನ ಮಾಹಿತಿ ಈ ಕೆಳಗಿದೆ..
Shubhashree car accident : ಬಿಗ್ ಬಾಸ್ ಸೀಸನ್ 7 ಸ್ಪರ್ಧಿಸಿದ್ದ ಶುಭಶ್ರೀ ಕಾರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಸಿನಿಮಾ ಚಿತ್ರೀಕರಣದ ಭಾಗವಾಗಿ ನಾಗಾರ್ಜುನ ಸಾಗರ್ ಕಡೆಗೆ ತೆರಳುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಆಕೆಯ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಇದರಿಂದ ಶುಭಶ್ರೀ ಪ್ರಯಾಣಿಸುತ್ತಿದ್ದ ಕಾರು ಸಂಪೂರ್ಣ ಜಖಂಗೊಂಡಿದೆ.
ಘಟನೆಯಿಂದ ಸುಭಶ್ರೀ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಅವಘಡದಲ್ಲಿ ಶುಭಶ್ರೀಗೆ ಯಾವುದೇ ಗಾಯಗಳಾಗಿಲ್ಲ, ಅವರು ಆರೋಗ್ಯವಾಗಿದ್ದಾರೆ. ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರು ಮದ್ಯ ಸೇವಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇಂದು ಭಾನುವಾರ ಮಧ್ಯಾಹ್ನ ನಾಗಾರ್ಜುನ ಸಾಗರ ಬಸ್ ನಿಲ್ದಾಣದ ಹತ್ತಿರ ಈ ದುರ್ಘಟನೆ ನಡೆದಿದೆ. ಅಪಘಾತಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅಪಘಾತದ ಪರಿ ನೋಡಿ ಶುಭಶ್ರೀಗೆ ಏನಾಯಿತು ಅಂತ ಅವರ ಅಭಿಮಾನಿಗಳು ಚಿಂತಿತರಾಗಿದ್ದಾರೆ.
ಸದ್ಯ ಶುಭಶ್ರೀ ಹೀರೋಯಿನ್ ಆಗಿಯೂ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.. ಈ ಘಟನೆಯಿಂದ ಬಿಗ್ ಬಾಸ್ ಬೆಡಗಿಗೆ ಸ್ವಲ್ಪದರಲ್ಲೇ ದೊಡ್ಡ ಅಪಘಾತ ತಪ್ಪಿದೆ. ಈಕೆ 3000 ಲೈವ್ ಶೋಗಳನ್ನು ಹೋಸ್ಟ್ ಮಾಡಿದ ದಾಖಲೆಯನ್ನು ಹೊಂದಿದ್ದಾರೆ. VLCC ಫೆಮಿನಾ ಮಿಸ್ ಇಂಡಿಯಾ ಒಡಿಶಾ 2020 ಅನ್ನು ಸಹ ಸುಭಾಶ್ರೀಗೆ ನೀಡಲಾಗಿದೆ.
ಇದನ್ನೂ ಓದಿ:ಸೀರೆ ಜಾರಿದರೂ ಕೇರ್ ಮಾಡದ ಅನಸೂಯಾ...! ಹಾರ್ಟ್ ಬೀಟ್ ಹೆಚ್ಚಾಯ್ತು.. ಅಂತ ಎದೆ ಹಿಡ್ಕೊಂಡು ಕುಳಿತ ಪಡ್ಡೆ ಹೈಕ್ಲು
ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶುಭಾ 2022ರಲ್ಲಿ ರುದ್ರವೀಣಾ ಸಿನಿಮಾದಲ್ಲಿ ನಟಿಸಿದ್ದರು. 'ಆ' ಎಂಬ ತೆಲುಗು ಚಲನಚಿತ್ರದ ಹೊರತಾಗಿ, ಅವರು ತಮಿಳು ಚಲನಚಿತ್ರ ಉತ್ರನ್ (2019) ನಲ್ಲಿಯೂ ಅಭಿನಯಿಸಿದ್ದಾರೆ. ಶುಭಶ್ರೀ ಸದ್ಯ ‘ಭೀಮ ಭೂಮಿಕಿ ಜೈ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್‌ಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.