ಬಿಗ್ ಬಾಸ್ ಡಬಲ್ ಎಲಿಮಿನೇಷನ್..! ಈ ದಿನ ಮನೆಯಿಂದ ಹೊರ ಹೋಗುವ ಇಬ್ಬರು ಸ್ಪರ್ಧಿಗಳು ಇವರೇ..
Bigg Boss double eviction : ಬಿಗ್ ಬಾಸ್ ಮನೆಯಿಂದ ಇಂದು ಇಬ್ಬರು ಸದಸ್ಯರು ಹೊರ ಹೋಗುವ ಸಾಧ್ಯತೆ ಇದೆ. ದೊಡ್ಮನೆ ಮಂದಿ ಈ ಬಾರಿ ಡಬಲ್ ಎಲಿಮಿನೇಷನ್ ಎದುರಿಸಲಿದ್ದು, ಇಬ್ಬರು ಸ್ಪರ್ಧಿಗಳಿಗೆ ಈ ದಿನ ಕಂಟಕವಾಗಲಿದೆ. ಹಾಗಿದ್ರೆ ಬಿಗ್ಹೌಸ್ನಿಂದ ಹೊರ ಹೊಗುವ ಸ್ಪರ್ಧಿಗಳಾರು..? ಬನ್ನಿ ನೋಡೋಣ..
Bigg Boss elimination today : ಬಿಗ್ ಬಾಸ್ ತಮಿಳು ಸೀಸನ್ 8 ರಲ್ಲಿ ಕಳೆದ ವಾರ ಮನೆಯಿಂದ ಯಾವುದೇ ಸ್ಪರ್ಧಿ ಎಲಿಮಿನೇಟ್ ಆಗದಿದ್ದರೂ, ಈ ವಾರ 2 ಮಂದಿ ಮನೆಯಿಂದ ಹೊರ ಹಾಕಲಿದ್ದಾರೆ.. ಆ ಇಬ್ಬರು ವ್ಯಕ್ತಿಗಳು ಯಾರು ಗೊತ್ತಾ?ವಿಜಯ್ ಸೇತುಪತಿ ನಡೆಸಿಕೊಡುವ ಬಿಗ್ ಬಾಸ್ ಸೀಸನ್ 8ರಲ್ಲಿ ಕಳೆದ ವಾರ ವೈಲ್ಡ್ ಕಾರ್ಡ್ ಎಂಟ್ರಿಯಾಗಿ 6 ಮಂದಿ ಸ್ಪರ್ಧಿಗಳಾದ ರಿಯಾ, ರಾಯನ್, ರಯಾನ್, ವರ್ಷಿಣಿ ಮತ್ತು ಶಿವಕುಮಾರ್ ಮನೆಗೆ ಎಂಟ್ರಿ ಕೊಟ್ಟಿದ್ದರು.
ಈಗಾಗಲೇ ರವೀಂದರ್, ಅರ್ನವ್, ದರ್ಶ ಗುಪ್ತಾ ಎಲಿಮಿನೇಟ್ ಆಗಿದ್ದರಿಂದ ಮನೆಯಲ್ಲಿ 8 ಪುರುಷರು, 7 ಮಹಿಳೆಯರು ಸೇರಿ 15 ಮಂದಿ ದ್ದಾರೆ.. ಇದೀಗ ವೈಲ್ಡ್ ಕಾರ್ಡ್ ಎಂಟ್ರಿ ಸೇರಿ 21 ಮಂದಿ ಇದ್ದಾರೆ. ವೈಲ್ಡ್ ಕಾರ್ಡ್ ಪ್ರವೇಶ ಹೊರತುಪಡಿಸಿ ಇತರ ಸ್ಪರ್ಧಿಗಳ ನಡುವೆ ಈ ವಾರ ಮುಕ್ತ ನಾಮಿನೇಷನ್ ನಡೆಸಲಾಯಿತು. 11 ಜನರ ಪೈಕಿ ಅರುಣ್ ಪ್ರಸಾದ್, ವಿಶಾಲ್, ಸಚನಾ, ದೀಪಕ್, ರಂಜಿತ್, ಜಾಕ್ವೆಲಿನ್, ಪವಿತ್ರ, ಸುನೀತಾ, ಆರ್.ಜೆ.ಅನಂತಿ, ಅಂಶಿತಾ, ಮುತ್ತುಕುಮಾರನ್ ನಾಮಿನೇಟ್ ಆಗಿದ್ದರು.
ಇದನ್ನೂ ಓದಿ:ʼಈʼ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಬಾಲಿವುಡ್ ನಟ ಅರ್ಜುನ್ ಕಪೂರ್! ಯಾವ ಕಾಯಿಲೆ ಗೊತ್ತಾ..?
ಜನರ ನಡುವೆ ನಡೆಸಿದ ಮತದಾನದಲ್ಲಿ ಆರ್.ಜೆ. ಆನಂದಿ, ಸುನೀತಾ ಮತ್ತು ಸಚನಾ ಅವರ ಮತಗಳು ಕಡಿಮೆ ಎಂದು ವರದಿಯಾಗಿದೆ. ಹೀಗಿರುವಾಗ ಕಳೆದ ವಾರ ಎಲಿಮಿನೇಷನ್ ನಡೆಯದ ಕಾರಣ ಈ ವಾರ ಡಬಲ್ ಎವಿಕ್ಷನ್ ಆಗಲಿದ್ದು, ಇಬ್ಬರು ಮನೆಯಿಂದ ತೆರಳಲಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ