Bigg Boss: ಬಿಗ್ ಬಾಸ್ ತಮಿಳು ಸೀಸನ್ 8 ಪ್ರಸ್ತುತ ಅಂತಿಮ ಹಂತದತ್ತ ಸಾಗುತ್ತಿದೆ. ಈ ಶೋನಲ್ಲಿ ಮುತ್ತುಕುಮಾರನ್, ಅರುಣ್ ಪ್ರಸಾದ್, ವಿಶಾಲ್, ದೀಪಕ್, ರಾಯನ್, ಪವಿತ್ರಾ, ಜಾಕ್ವೆಲಿನ್ ಮತ್ತು ಸೌಂದರ್ಯ ಸೇರಿ 8 ಮಂದಿ ಮಾತ್ರ ಉಳಿದಿದ್ದಾರೆ. ಅವರಲ್ಲಿ, ರಾಯನ್ ಅವರು ಅಂತಿಮ ಟಾಸ್ಕ್ ನಲ್ಲಿ ಟಿಕೆಟ್ ಗೆದ್ದಿದ್ದರಿಂದ ನೇರವಾಗಿ ಫೈನಲ್ ಪ್ರವೇಶಿಸಿದ್ದಾರೆ. ಉಳಿದ 7 ಸ್ಪರ್ಧಿಗಳು ಈ ವಾರ ಎವಿಕ್ಷನ್‌ಗೆ ನಾಮಿನೇಟ್‌ ಆಗಿದ್ದಾರೆ.. ಈ ನಡುವೆ ಬಿಗ್ ಬಾಸ್ ಕೊಂಚ ಟ್ವಿಸ್ಟ್ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಅದರಂತೆ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ 8 ಮಂದಿ ಸ್ಪರ್ಧಿಗಳು ರೀ ಎಂಟ್ರಿ ಕೊಡಲಿದ್ದಾರೆ ಎಂದು ಘೋಷಿಸಿದ್ದಾರೆ. ಮರು ಪ್ರವೇಶ ಪಡೆದವರನ್ನು ವೈಲ್ಡ್ ಕಾರ್ಡ್ ಸ್ಪರ್ಧಿಗಳೆಂದು ಪರಿಗಣಿಸಲಾಗುವುದು ಮತ್ತು ಒಳಗಿರುವ 8 ಸ್ಪರ್ಧಿಗಳ ಪೈಕಿ ಇಬ್ಬರನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ ಎಂದು ಘೋಷಿಸಿದ್ದರಿಂದ ಪ್ರಸ್ತುತ ಟಾಪ್ 8 ಸ್ಪರ್ಧಿಗಳು ಗೊಂದಲದಲ್ಲಿದ್ದಾರೆ. 


ಇದನ್ನೂ ಓದಿ-ʼಅವಸರದಲ್ಲಿ ಮದುವೆಯಾದೆ.. ಅದಕ್ಕೆʼ.. ವಿಚ್ಛೇದನದ ಬಗ್ಗೆ ಬಹಿರಂಹ ಹೇಳಿಕೆ ಕೊಟ್ಟ ಖ್ಯಾತ ನಟಿ!


ಅದರಂತೆ ಬಿಗ್ ಬಾಸ್ ಶೋನ ಮೊದಲ 8 ವಾರಗಳಲ್ಲಿ ಎಲಿಮಿನೇಟ್ ಆದ ಸ್ಪರ್ಧಿಗಳು ಮತ್ತೆ ಮನೆಯೊಳಗೆ ಹೋಗಲಿದ್ದಾರೆ. ಆ ಮೂಲಕ ರವೀಂದರ್ ಚಂದ್ರಶೇಖರ್, ಅರ್ನವ್, ದರ್ಶ ಗುಪ್ತಾ, ಸುನೀತಾ, ರಿಯಾ ತ್ಯಾಗರಾಜನ್, ವರ್ಷಿಣಿ ವೆಂಕಟ್, ಶಿವಕುಮಾರ್, ಸಾಚನಾ ಹೀಗೆ 8 ಮಂದಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಮತ್ತೆ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ. ಅವರ ಆಗಮನದಿಂದಾಗಿ ಆಟದಲ್ಲಿ ಟ್ವಿಸ್ಟ್ ಕಂಡುಬಂದಿದೆ. ಜೊತೆಗೆ ಯಾರನ್ನು ಎಲಿಮಿನೇಟ್ ಮಾಡಲಿದ್ದಾರೆ ಎಂಬ ನಿರೀಕ್ಷೆಯೂ ಇದೆ.


ಬಿಗ್ ಬಾಸ್‌ನ ಟಾಪ್ 8 ಸ್ಪರ್ಧಿಗಳು ಪ್ರಸ್ತುತ ಪ್ರವೇಶಿಸುತ್ತಿರುವ ವೈಲ್ಡ್ ಕಾರ್ಡ್ ಸ್ಪರ್ಧಿಗಳಿಂದ ಅರ್ನವ್ ಅವರನ್ನು ಹೊರಹಾಕಲು ನಿರ್ಧರಿಸಿದ್ದಾರೆ. ಏಕೆಂದರೆ ಅರ್ನವ್ ಅವರು ಈ ಮನೆಯಲ್ಲಿ ಇರುವವರೆಗೂ ಒಳ್ಳೆಯ ವ್ಯಕ್ತಿಯಂತೆ ನಟಿಸಿದ್ದಾರೆ.. ಅಲ್ಲದೇ ಕಾರ್ಯಕ್ರಮದಿಂದ ಹೊರ ಹೋದಾಗ ಅವರು ತಮ್ಮ ಸಹ ಸ್ಪರ್ಧಿಗಳನ್ನು ವೇದಿಕೆಯ ಮೇಲೆ ಜಲ್ರಾ ಎಂದು ಕರೆದರು. ಈ ಕಾರಣಕ್ಕಾಗಿಯೇ ಟಾಪ್ 8 ಸ್ಪರ್ಧಿಗಳು ತಮ್ಮ ಮೊದಲ  ಟಾರ್ಗೆಟ್ ಅರ್ನವ್‌ ಎಂದು ಹೇಳುತ್ತಿದ್ದಾರೆ.


ಇದನ್ನೂ ಓದಿ-ʼಅವಸರದಲ್ಲಿ ಮದುವೆಯಾದೆ.. ಅದಕ್ಕೆʼ.. ವಿಚ್ಛೇದನದ ಬಗ್ಗೆ ಬಹಿರಂಹ ಹೇಳಿಕೆ ಕೊಟ್ಟ ಖ್ಯಾತ ನಟಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್