Karthik Mahesh In Ondu Salara Prema Kathe: ಸಿಂಪಲ್ಲಾಗಿ ಒಂದ್‌ ಲವ್‌ ಸ್ಟೋರಿ ಸಿನಿಮಾದ ಮೂಲಕ ಚಂದನವನಕ್ಕೆ ನಿರ್ದೇಶಕನಾಗಿ ಪಾದಾರ್ಪಣೆ ಮಾಡಿದ ಡೈರೆಕ್ಟರ್‌ ಸಿಂಪಲ್‌ ಸಿನಿ, ಸಾಲು ಸಾಲು ಚಿತ್ರಗಳ ನಿರ್ದೇಶನ ಮಾಡುವುದರಲ್ಲಿ ಸೈ ಎನಿಸಿಕೊಂಡಿದ್ದಾರೆ. ಇನ್ನೂ ಈ ಯಶಸ್ವಿ ನಿರ್ದೇಶಕ ಸಿನಿಮಾದಲ್ಲಿ ಬಿಗ್‌ ಬಾಸ್‌ ವಿನ್ನರ್‌ ಕಾರ್ತಿಕ್‌ ಮಹೇಶ್‌ ಅಭಿನಯಿಸಿದ್ದಾರೆ.  ಈ ಹಿಂದೆ ಸೀರಿಯಲ್‌ಗಳ ಮೂಲಕ ಮನೆ ಮಾತನಾದ ನಟ ದೊಡ್ಮನೆ ಒಳಗೆ ಹೋಗೋ ಮೊದಲೇ ಒಂದು ಚಿತ್ರದಲ್ಲಿ ಅಭಿನಯಿಸಿದ್ದಾರೆ.


COMMERCIAL BREAK
SCROLL TO CONTINUE READING

ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಅಭಿನಯಿಸಿದ ಈ ಸಿನಿಮಾದಲ್ಲಿ ದೊಡ್ಮನೆ ಮೊಮ್ಮಗ ಕೂಡ ಇದ್ದು, ಹಾಗೆಯೇ ಇದರಲ್ಲಿ ಒಬ್ಬರಲ್ಲ ಅಂತ ಇಬ್ಬರು ಹೀರೋಯಿನ್‌ಗಳೂ ಇದ್ದಾರೆ. ಈ ಚಿತ್ರದ ಒಂದು ಸ್ಪೆಷಲ್ ಹಾಡನ್ನು ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ   ಡಿಜಿಟಲ್‌ನಲ್ಲಿ ರಿಲೀಸ್ ಮಾಡಿದ್ದು, ಇನ್ನೇನು ಈ ಸಿನಿಮಾ ಇದೇ ತಿಂಗಳು ರಿಲೀಸ್ ಆಗುತ್ತದೆ. ನಟ ಕಾರ್ತಿಕ್ ಮಹೇಶ್ ಒಂದು ಸರಳ ಪ್ರೇಮ ಕಥೆ ಚಿತ್ರದಲ್ಲಿ  ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದು, ಆದರೆ ಆ ಪಾತ್ರವೇನು ಅನ್ನೋದು ಇನ್ನು ಸೀಕ್ರೆಟ್ ಆಗಿಯೇ ಇದೆ. ನಿರ್ದೇಶಕ ಸಿಂಪಲ್ ಸುನಿ ಕೂಡ ಈ ಬಗ್ಗೆ ಹೆಚ್ಚು ಏನೂ ಬಿಟ್ಟುಕೊಟ್ಟಿಲ್ಲ. 


ಇದನ್ನೂ ಓದಿ: Koffee With Shobha Shetty: ನಟನೆಯಿಂದ ನಿರೂಪಕಿಯಾಗಿ ಭಡ್ತಿ ಪಡೆದ ಕಾರ್ತಿಕಾ ದೀಪಂ ನಟಿ!


ಕಿರುತೆರೆ ನಟ ಕಾರ್ತಿಕ್ ಮಹೇಶ್ ಈ ಹಿಂದೆ ಹಲವಾರು ಸೀರಿಯಲ್‌ಗಳನ್ನ ಮಾಡಿದ್ದು, ಇದರ ಜೊತೆಗೆ ಸಿನಿಮಾದಲ್ಲೂ ನಟಿಸಿದ್ದಾರೆ. ಕಾರ್ತಿಕ್ ಮಹೇಶ್ ರಾಷ್ಟ್ರಪ್ರಶಸ್ತಿ ಪಡೆದ ಡೊಳ್ಳು ಚಿತ್ರದಲ್ಲಿ  ಹೀರೋ ಆಗಿ ಬಣ್ಣ ಹಚ್ಚಿದ್ದು, ಅಷ್ಟು ವಿಶೇಷವಾಗಿರೋ ಈ ನಟ ದೊಡ್ಮನೆ ಒಳಗೆ ಹೋಗುವ ಮುನ್ನ ಒಂದು ಸರಳ ಪ್ರೇಮ ಕಥೆ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಮತ್ತೆ ಈ ಚಿತ್ರದಲ್ಲಿ ಮಲ್ಲಿಕಾ ಸಿಂಗ್ ನಟಿಸಿದ್ದರೇ, ಸ್ವಾತಿಷ್ಠ ಮತ್ತೊಂದು ರೋಲ್ ಮಾಡಿದ್ದಾರೆ. ಇಬ್ಬರು ಹೀರೋಯಿನ್‌ಗಳ ಮಧ್ಯೆ ಸಂಗೀತದ ಪಯಣದಲ್ಲಿ ಸಾಗೋ ವಿನಯ್ ರಾಜಕುಮಾರ್ ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. 


ನಟ ವಿನಯ್‌ ರಾಜಕುಮಾರ್ ತಂದೆ ರಾಘವೇಂದ್ರ ರಾಜಕುಮಾರ್ ಜೊತೆಗೂ ಈ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಒಂದು ಸರಳ ಪ್ರೇಮ ಕಥೆ ಚಿತ್ರದ ಎಲ್ಲ ಕೆಲಸ ಪೂರ್ಣಗೊಂಡಿದ್ದು, ಪ್ರಚಾರವೂ ಶುರು ಆಗಿದೆ. ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಇದೇ ವರ್ಷ ಫೆಬ್ರವರಿ-8 ರಂದು ಈ ಸಿನಿಮಾ ಕೂಡ  ತೆರೆಗೆ ಅಪ್ಪಳಿಸುತ್ತಿದೆ. ಈಗಾಗಲೇ ಚಿತ್ರದ  ಹಾಡುಗಳು ಮೋಡಿ ಮಾಡ್ತಾನೇ ಇದ್ದು, ಇದರ ಜೊತೆಗೆ ಈ ಸಿನಿಮಾ ಒಂದು ನಿರೀಕ್ಷೆಯನ್ನೂ ಹುಟ್ಟುಹಾಕಿದೆ ಅಂತಲೇ ಹೇಳಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ