ಬಿಗ್‌ ಬಾಸ್ ಕನ್ನಡ ಸೀಸನ್‌ 11 ಇದೇ ಸೆಪ್ಟೆಂಬರ್ 29 ರಿಂದ ಆರಂಭವಾಗುತ್ತಿದೆ. ಈಗಾಗಲೇ ಅನೇಕ ಸಂಭಾವ್ಯ ಸ್ಪರ್ಧಿಗಳ ಹೆಸರು ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿದೆ. ಇದೀಗ ಮತ್ತೊಂದಯ ಕುತೂಹಲಕಾರಿ ಸಂಗತಿ ವೈರಲ್‌ ಆಗುತ್ತಿದೆ. ಬಿಗ್‌ ಬಾಸ್ ಕನ್ನಡ ಸೀಸನ್ 11 ಸ್ವರ್ಗ ಹಾಗೂ ನರಕದ ಕಾನ್ಸೆಪ್ಟ್ ನೊಂದಿಗೆ ಬರಲಿದೆ. ಇದನ್ನು ಖುದ್ದು ಕಲರ್ಸ್ ಕನ್ನಡ ರಿವೀಲ್ ಮಾಡಿದೆ. 


COMMERCIAL BREAK
SCROLL TO CONTINUE READING

ನಟ ಪ್ರಥಮ್ ಕೂಡ ಇದೀಗ ಸರ್‌ಪ್ರೈಸ್‌ವಿಚಾರ ತಿಳಿಸಿದ್ದಾರೆ. ಇತ್ತೀಚೆಗೆ ಹೊಸ ಕಾರು ಖರೀದಿ ಮಾಡಿರುವ ಪ್ರಥಮ್ ಮತ್ತೊಂದು ಸಂತಸದ ವಿಚಾರ ತಿಳಿಸಿದ್ದಾರೆ. ಬಿಗ್‌ ಬಾಸ್ ಸೀಸನ್ 11ಗೆ ಹೋಗುತ್ತೀರಾ ಎಂದು ಪ್ರಥಮ್‌ ಅವರನ್ನು ಪ್ರಶ್ನಿಸಲಾಗಿದೆ. ಇದಲ್ಲೆ ಫಸ್ಟ್ ಎಪಿಸೋಡ್‌ನಲ್ಲಿ ಸರ್ಪ್ರೈಸ್ ಕೊಡುತ್ತೇನೆ ಎಂದು ಪ್ರಥಮ್‌ ಹೇಳಿದ್ದಾರೆ.


ಇದನ್ನೂ ಓದಿ: ವಿಚ್ಛೇದನಕ್ಕೆ ಮುಂದಾದ ಖ್ಯಾತ ಬಾಲಿವುಡ್‌ ನಟಿ... 8 ವರ್ಷಗಳ ದಾಂಪತ್ಯ ಜೀವನ ಅಂತ್ಯ!


ಬಿಗ್‌ ಬಾಸ್ ಕನ್ನಡ ಸೀಸನ್ 4 ರಲ್ಲಿ ಸ್ಪರ್ಧಿಯಾಗಿದ್ದ ಪ್ರಥಮ್‌ ಸಿಕ್ಕಾಪಟ್ಟೆ ಹೈಪ್‌ ಕ್ರಿಯೇಟ್‌ ಮಾಡಿದ್ದರು. ಜನರ ಗಮ ಸೆಳೆದ ಪ್ರಥಮ್ ಬಿಗ್‌ ಬಾಸ್ ಕನ್ನಡ ಸೀಸನ್ 4 ರ ವಿ್ನರ್‌ ಕೂಡ ಆದರು. ಇದೀಗ ಬಿಗ್‌ ಬಾಸ್ ಕನ್ನಡ ಸೀಸನ್ 11ರಲ್ಲೂ ಕಾಣಿಸಿಕೊಳ್ಳುತ್ತಾರಾ? ಎಂಬ ಕುತೂಹಲ ಹೆಚ್ಚಾಗಿದೆ.


ನನ್ನ ಕಡೆಯಿಂದ ಏನೋ ಸರ್ಪ್ರೈಸ್ ಇರುತ್ತೆ. ಫಸ್ಟ್ ಎಪಿಸೋಡ್‌ನಲ್ಲಿ ಏನೋ ಒಂದು ಇರುತ್ತೆ. ಅದನ್ನೆಲ್ಲ ನಾನು ಬಿಚ್ಚಿಡೋಕೆ ಆಗಲ್ಲ. ನನ್ನನ್ನು ಏನೂ ಕೇಳಬೇಡಿ. ಬಿಗ್‌ ಬಾಸ್ ಬಗ್ಗೆ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದು ನಟ ಪ್ರಥಮ್‌ ಹೇಳಿದ್ದಾರೆ. 


ಇದನ್ನೂ ಓದಿ: ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಆರಂಭಕ್ಕೆ ಕೂಡಿಬಂತು ಕಾಲ.. ʼಈʼ ದಿನದಂದೇ ಗ್ರ್ಯಾಂಡ್‌ ಓಪನಿಂಗ್‌!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.