Ankita Lokhande-Vicky Jain Lip Lock: ನಟ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ 'ಬಿಗ್ ಬಾಸ್ 17'ರ ಶೋ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಇತ್ತೀಚೆಗೆಯಷ್ಟೇ ಬೆಡ್ ರೂಂನಲ್ಲಿ ಸ್ಪರ್ಧಿಯೊಬ್ಬ ತನ್ನ ಸಹಸ್ಪರ್ಧಿಯ ಸೀರೆಯನ್ನು ಸರಿಸಿ ಹೊಟ್ಟೆಗೆ ಮುತ್ತಿಟ್ಟಿದ್ದ. ಅದಾದ ಕೆಲ ದಿನಗಳ ಬಳಿಕ ಮತ್ತೆ, ಒಂದೇ ಬೆಡ್ ಶೀಟ್ ಒಳಗೆ ಮಲಗಿಕೊಂಡು ರೊಮ್ಯಾನ್ಸ್ ಮಾಡುತ್ತಿರುವಂತೆ ಕಂಡುಬಂದಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ರಾಶಿಯ ಜನರ ಭಾಗ್ಯದ ಬಾಗಿಲು ತೆರೆಯುವುದು ಮಾರ್ಗಶಿರ ಮಾಸ! ಯಶಸ್ಸಿನ ಹಾದಿಯಲ್ಲೇ ಪಯಣ-ವಿದೇಶದಲ್ಲಿ ಉದ್ಯೋಗ ಯೋಗ


ಒಟ್ಟಾರೆಯಾಗಿ ಫ್ಯಾಮಿಲಿ ಶೋ ಆಗಿರಬೇಕಿದ್ದ ಬಿಗ್ ಬಾಸ್ ಇದೀಗ ರೊಮ್ಯಾಂಟಿಕ್ ತಾಣವಾಗುತ್ತಿದೆ ಎಂದು ಕೆಲವರು ಕಿಡಿಕಾರಿದ್ದರು.


ಈ ಬೆನ್ನಲ್ಲೇ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಲಿಪ್ ಲಾಕ್ ಮಾಡಿದ್ದಾರೆ.


ತೇಜಸ್ ಚಿತ್ರದ ಪ್ರಚಾರಕ್ಕಾಗಿ ಬಿಗ್ ಬಾಸ್ 17 ರ ವೀಕೆಂಡ್ ಕಾರ್ಯಕ್ರಮಕ್ಕೆ ನಟಿ ಕಂಗನಾ ರಣೌತ್ ಬಂದಿದ್ದರು. ಈ ವೇಳೆ ಕಂಗನಾ ಎಲ್ಲಾ ಸ್ಪರ್ಧಿಗಳಿಗೂ ಫನ್ ಟಾಸ್ಕ್’ಗಳನ್ನು ಮಾಡಿಸಿದ್ದರು. ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಹಾಗೂ ಐಶ್ವರ್ಯ ಶರ್ಮಾ ಮತ್ತು ನೀಲ್ ಭಟ್ ದಂಪತಿ ನಡುವಿನ ಕೆಮೆಸ್ಟ್ರಿ ಹೇಗಿದೆ ಎಂದು ಟೆಸ್ಟ್ ಮಾಡಲು ಕಂಗನಾ ಮುಂದಾದರು.


ಕಂಗನಾ ಈ ಜೋಡಿಗೆ ಡ್ಯಾನ್ಸ್ ಮಾಡುವ ಟಾಸ್ಕ್ ಕೊಟ್ಟಿದ್ದರು. ಅವರ ಆದೇಶದಂತೆ ಸಖತ್ ಡ್ಯಾನ್ಸ್ ಮಾಡಿದ ಅಂಕಿತಾ ಮತ್ತು ವಿಕ್ಕಿ, ಪರಸ್ಪರ ಕಳೆದುಹೋದರು. ಅಷ್ಟೇ ಅಲ್ಲದೆ, ನೃತ್ಯದ ಕೊನೆಯಲ್ಲಿ, ಒಬ್ಬರಿಗೊಬ್ಬರು ಲಿಪ್ ಲಾಕ್ ಮಾಡಿದ್ದಾರೆ.


ಬಿಗ್ ಬಾಸ್ ಎಂಬುದು ಫ್ಯಾಮಿಲಿ ಶೋ. ಆದರೆ ಹಿಂದಿ ಅವತರಣಿಕೆಯಲ್ಲಿ ಫ್ಯಾಮಿಲಿ ಶೋ ತೀರಾ ಕೆಳಮಟ್ಟಕ್ಕೆ ಇಳಿದಂತಾಗಿದೆ. ಈ ಬಗ್ಗೆ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ಹೊರಹಾಕಿದ್ದಾರೆ.


ಇದನ್ನೂ ಓದಿ: 13 ರನ್, 7 ವಿಕೆಟ್ ಉಡೀಸ್: 18ರ ಹರೆಯದ ಭಾರತದ ಯುವವೇಗಿ ಮೋಡಿಗೆ ವಿಶ್ವದಾಖಲೆ ಸೃಷ್ಟಿ


ಅಂದಹಾಗೆ ಕಂಗನಾ ಮತ್ತು ಅಂಕಿತಾ ನಡುವೆ ಉತ್ತಮ ಸ್ನೇಹವಿದೆ. ಕಂಗನಾ ಅಭಿನಯದ ಮಣಿಕರ್ಣಿಕಾ ಚಿತ್ರದ ಮೂಲಕ ಅಂಕಿತಾ ಬಾಲಿವುಡ್ ಪ್ರವೇಶಿಸಿದ್ದರು. ಬಿಗ್ ಬಾಸ್ ಮನೆಯಲ್ಲೂ ಇವರಿಬ್ಬರ ನಡುವೆ ಉತ್ತಮ ಬಾಂಧವ್ಯ ಕಂಡುಬಂದಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ