`ದೇವರೇ ನನಗೆ ಇನ್ನೊಂದು ಜನ್ಮವಿದ್ದರೆ, ಇಂತಹ ಒಬ್ಬ ಅಣ್ಣನನ್ನು ಕರುಣಿಸು`, ಬಿಗ್‌ಬಾಸ್ ಸ್ಪರ್ಧಿ ಬಗ್ಗೆ ಸೀರಿಯಲ್ ನಟಿ ಪೋಸ್ಟ್ ವೈರಲ್!
Samiksha Post Viral: ಹಲವು ದಿನಗಳಿಂದ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಗ್ಗೆನೇ ಚರ್ಚೆ ಆಗುತ್ತಿದ್ದು, ಇದರ ಮಧ್ಯೆ ಕಿರುತರೆ ನಟಿ ಸಮೀಕ್ಷಾ ಈತನ ಬಗ್ಗೆ ಬರೆದ ಪೋಸ್ಟ್ ವೈರಲ್ ಆಗಿದೆ. ಹಾಗಾದ್ರೆ ಆ ಪೋಸ್ಟ್ನಲ್ಲಿ ಏನಿದೆ? ಇದರ ಡಿಟೇಲ್ಡ್ ಸ್ಟೋರಿ ಹೀಗಿದೆ.
Actress Samiksha Post About Varhur Santosh Viral: ಕಳೆದ ಕೆಲವು ದಿನಗಳಿಂದ ಬಿಗ್‌ಬಾಸ್ ಮನೆಯಲ್ಲೂ ಹಾಗೂ ಮನೆಯ ಹೊರಗೂ ವರ್ತೂರು ಸಂತೋಷ್ ಬಗ್ಗೆನೇ ಚರ್ಚೆ ಆಗುತ್ತಿದ್ದು, ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗ್ತೀನಿ ಅಂತ ವರ್ತೂರು ಸಂತೋಷ್ ಹಠ ಹಿಡಿದಿದ್ದರು. ಈತ ಕಣ್ಣೀರು ಹಾಕಿ ಪರಿ ಪರಿಯಾಗಿ ಬೇಡಿಕೊಂಡಿದ್ದರೂ, ವೀಕ್ಷಕರುಈ ಸ್ಪರ್ಧಿ ಮನೆಯೊಳಗೆ ಇರಬೇಕು ಅನ್ನೋ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಮದುವೆ ವಿಷಯ ಚರ್ಚೆಯಾಗಿದ್ದು, ಸದ್ಯ ಅದೀಗ ವಿವಾದಕ್ಕೆ ತಿರುಗಿದೆ.
ವರ್ತೂರು ಸಂತೋಷ್ ಮದುವೆ ವಿಚಾರ ವಿವಾದಕ್ಕೆ ತಿರುಗಿದ್ದು, ಈತ ಎರಡು ವರ್ಷಗಳಿಂದ ಪತ್ನಿಯಿಂದ ದೂರವಿದ್ದಾರೆ. ಈ ವಿಷಯವನ್ನು ಸ್ವತ: ಸಂತೋಷ್ ಮಾವ ಸೋಮನಾಥ್ ಆರೋಪ ಮಾಡಿದ್ರು, ಇದರ ಮಧ್ಯೆಯೇ ಕನ್ನಡದ ಉದಯೋನ್ಮುಖ ನಟಿ ಸಮೀಕ್ಷಾ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಮುಂದಿನ ಜನ್ಮದಲ್ಲಿ ವರ್ತೂರು ಸಂತೋಷ್ ಅಣ್ಣನಾಗಿ ಪಡೆಯಬೇಕು ಅಂತ ಬರೆದುಕೊಂಡಿರುವುದು ಪೋಸ್ಟ್ ಒಂದು ವೈರಲ್ ಆಗಿದೆ. ಸಮೀಕ್ಷಾ ಅಫಿಶಿಯಲ್ ಅನ್ನೋ ಖಾತೆಯಿಂದ ಈ ಸ್ಟೋರಿ ಹರಿದಾಡುತ್ತಿದ್ದು, ವರ್ತೂರು ವಿವಾದ ಆಗುತ್ತಿದ್ದಂತೆ ಸಮೀಕ್ಷಾ ಸ್ಕ್ರೀನ್ ಶಾಟ್ ವೈರಲ್ ಆಗುತ್ತಿದೆ.
ಇದನ್ನು ಓದಿ: ವರ್ತೂರ್ ಸಂತೋಷ್ ಈಗಾಗಲೇ ಮದುವೆ ಆಗಿದ್ದಾರಾ! ತನಿಷಾ ಜೊತೆಯ ಒಡನಾಟದ ಕತೆ ಏನು?
ಸಮೀಕ್ಷಾ ಅಫಿಶಿಯಲ್ ಖಾತೆಯಲ್ಲಿ "ನಾನು ಬಿಗ್‌ಬಾಸ್‌ನ ಫ್ಯಾನ್ ಅಲ್ಲ ಅಥವಾ ನನಗೆ ಈ ಶೋ ಅನ್ನು ಅರ್ಥ ಮಾಡಿಕೊಳ್ಳಲು ಸಮರ್ಥಳಲ್ಲ. ಆದರೆ.. ಈ ವ್ಯಕ್ತಿ ಸಂತೋಷ್ ಗೆಲ್ಲಬೇಕು. ದೇವರೇ ನನಗೆ ಇನ್ನೊಂದು ಮಾನವ ಜನ್ಮ ಅಂತ ಇದ್ದರೆ, ಇಂತಹ ಒಬ್ಬ ಅಣ್ಣನನ್ನು ಕರುಣಿಸು." ಎಂದು ಬರೆದುಕೊಂಡಿದ್ದಾರೆ. ಇದು ನಟಿ ಸಮೀಕ್ಷಾ ಅವರದ್ದೇ ಇನ್‌ಸ್ಟಾ ಸ್ಟೋರಿ ಎನ್ನಲಾಗಿದೆ. ಆದರೆ, ಅಧಿಕೃತವೋ ಅಲ್ಲವೋ ಅನ್ನೋದು ತಿಳಿದು ಬಂದಿಲ್ಲ.
ಇದರೊಂದಿಗೆ ಕಿರಿತೆರೆ ನಟಿ ಸಮೀಕ್ಷಾ ಶೋ ಗೆದ್ದು ಬನ್ನಿ ಅಂತಾನೂ ಹೇಳಿರುವುದರ ಜೊತೆಗೆ, "ಈ ಶೋ ಅನ್ನು ಗೆದ್ದು ಸ್ಟಾರ್ ಆಗಿ ಹೊರಗೆ ಬರುವಿರಿ ಎಂದು ಭಾವಿಸಿದ್ದೇನೆ. ಕಲರ್ಸ್ ಕನ್ನಡ ಅವರಿಗೆ ನನ್ನ ವಿಶ್ ಅನ್ನು ತಿಳಿಸಿ." ಎಂದು ಸಮೀಕ್ಷಾ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವಿವಾದಕ್ಕೂ ಮುನ್ನ ಹಾಕಿದ್ದಾ? ಇಲ್ಲ ವಿವಾದದ ಬಳಿಕ ಹಾಕಿದ್ದಾ? ಅಂತ ಚರ್ಚೆ ಮಾಡಲಾಗುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.