BBK 10: ತುಕಾಲಿ ಸಂತೋಷ್ ಹುಟ್ಟಿದ್ದೇ ಪವಾಡವಂತೆ..! ಕಥೆ ಕೇಳಿ ಶಾಕ್ ಆದ ದೊಡ್ಮನೆ ಮಂದಿ
BBK 10 Tukali Santosh: ಅದಾ ಕಾಮಿಡಿ ಮಾಡಿಕೊಂಡು ಎಲ್ರನ್ನೂ ನಗುನಗಿಸ್ತಾ ಇರ್ತಿದ್ದ ಸಂತೋಷ್, ಅಪರೂಪಕ್ಕೊಮ್ಮೆ ಸೀರಿಯಸ್ ಆಗಿದ್ದಾರೆ. ಅಷ್ಟೇ ಅಲ್ಲ, ತುಂಬ ಸೀರಿಯಸ್ ಆಗಿ ತಮ್ಮ ಹುಟ್ಟಿನ ಪವಾಡದ ಕಥೆಯನ್ನು ರೋಚಕವಾಗಿ ಹೇಳಿಕೊಡುತ್ತಿದ್ದಾರೆ. ಆದ್ರೆ ಏನ್ಮಾಡೋದು? ಅವ್ರು ಸೀರಿಯಸ್ ಆಗಿ ಮಾತಾಡಲಿಕ್ಕೆ ಶುರುಮಾಡಿದಾಗ, ಯಾವಾಗ್ಲೂ ಸೀರಿಯಸ್ ಆಗಿರೋ ಸ್ಪರ್ಧಿಗಳೆಲ್ಲ ಕಾಮಿಡಿ ಮಾಡಿ ಅವ್ರ ಕಾಲೆಳಿಲಿಕ್ಕೆ ಶುರುಮಾಡಿದಾರಪ್ಪಾ… ತಾವು ಹೇಳಿದ ಕಥೆಯನ್ನು ಯಾರೂ ನಂಬ್ಲಿಲ್ಲ ಅಂದ್ರೆ ಸಂತೋಷ್ಗೆ ನೋವಾಗಲ್ವಾ? ಹೋಗ್ಲಿ ನೀವಾದ್ರೂ ಅವ್ರ ಹುಟ್ಟಿನ ಕಥೆಯನ್ನು ‘ಸೀರಿಯಸ್’ ಆಗಿ ಓದಿ...
BBK 10 Updates: ’15-01-1990ಕ್ಕೆ ಒಬ್ಬ ಮಹಾನ್ ಸಾಧಕನ ಜನನ ಆಗತ್ತೆ’ ಸಂತೋಷ್ ಕಥೆಯ ಸಾಲಿನ ಬಗ್ಗೆಯೇ ನೀತುಗೆ ಅನುಮಾನ. ‘1990?’ ಎಂದು ಪ್ರಶ್ನಾರ್ಥಕವಾಗಿ ಕೇಳ್ತಾರೆ. ಆದ್ರೆ ವಯಸ್ಸನ್ನು ಕಡಿಮೆ ಮಾಡಿಕೊಳ್ಳುವ ಹುಮ್ಮಸ್ಸಿನಲ್ಲಿದ್ದ ಸಂತೋಷ್ ಅವರ ಅನುಮಾನದ ಕಡೆಗೆ ಗಮನಹರಿಸಲು ಸಾಧ್ಯನಾ? ಅವರು ತಮ್ಮ ಪಾಡಿಗೆ ತಾವು ಮಾತು ಮುಂದುವರಿಸುತ್ತಾರೆ.
‘ಪವಾಡ ಪುರುಷ ಅಲ್ಲ ನಾನು. ನಾನು ಹುಟ್ಟಿದ್ದೇ ಒಂದು ಪವಾಡ. ಪವಾಡದಿಂದ ಜನನ. ನಿಮಗಿನ್ನ ಗೊತ್ತಿಲ್ಲ, ಒಂಬತ್ತು ತಿಂಗಳಾಗಿ ಮೂರು ದಿನಕ್ಕೆ ನಾನು ಹುಟ್ಟಿರೋದು. ಒಂಬತ್ತು ತಿಂಗಳು ಕರೆಕ್ಟಾಗಿ ಬರತ್ತಲ್ಲಾ. ಅವತ್ತು, ಜೋರಾದ ಗುಡುಗು, ಸಿಡಿಲು, ಮಳೆ, ಗಾಳಿ…’
ಇಷ್ಟು ಹೇಳುತ್ತಿದ್ದ ಹಾಗೆಯೇ ಮಧ್ಯ ಬಾಯಿ ಹಾಕಿದೋರು ವರ್ತೂರು ಸಂತೋಷ್. “ಈ ಭೂಮಿಗೆ ಯಾವ್ದೋ ದುಷ್ಟಶಕ್ತಿ ಬರ್ತಿದೆ ಅಂತ ಸೂಚನೆ’ ಎಂದ ಅವರ ಮಾತಿಗೆ ಉಳಿದವರೆಲ್ಲ ಜೋರಾಗಿ ನಕ್ಕರು. ಗೌರೀಶ ಅಕ್ಕಿ, ಇನ್ನೊಂದು ಹೆಜ್ಜೆ ಮುಂದೆ ಹೋಗಿ, ‘ಧುರ್ಯೋಧನ ಹುಟ್ಟಬೇಕಾದರೆ ಹಿಂಗೇ ಆಗಿತ್ತಂತೆ’ ಎಂದು ಸಂತೋಷ್ ಜನ್ಮಕ್ಕೆ ಪುರಾಣಸ್ಪರ್ಶವನ್ನು ಬೇರೆ ಕೊಟ್ಟುಬಿಟ್ಟರು.
ತುಕಾಲಿ ಅವರಿಗೆ ಕೋಪ ಬರ್ದೇ ಇರತ್ತಾ? ಆದ್ರೂ ನಗ್ತಾನೇ ‘ನನ್ನ ಹಾಳು ಮಾಡ್ತಿದ್ದಾರೆ ಇವ್ರು’ ಎಂದು ಹೇಳಿ ತಮ್ಮ ಕಥೆಯನ್ನು ಮುಂದುವರಿಸಿದ್ರು. ‘ಜೋರಾದ ಗುಡುಗು, ಸಿಡಿಲು, ಮಳೆ ಬರ್ತಾ ಐತೆ. ರಾತ್ರಿ ಒಂಬತ್ತು ಗಂಟೆ. ಅಮ್ಮ ಬೆಳಿಗ್ಗೆ ತಿಂಡಿ ಮಾಡ್ಬೇಕಲಾ… ತರಕಾರಿ ಹಿಡ್ಕೊಂಡು ಬರ್ತಾ ಇದ್ದಾರೆ ದೇವಸ್ಥಾನದ ಹತ್ರ. ಆಗ ಯಾವ್ದೋ ಒಂದು ಶಬ್ದ’ ಎಂದು ಎರಡು ಸಾಲು ಹೇಳುವಷ್ಟರಲ್ಲಿ ನೀತು ತಲೆಗೆ ಹೊಸ ಆಲೋಚನೆ ಹೊಳೆದಿದೆ. ‘ಈ ಕಥೆಯನ್ನೇ ಸಿನಿಮಾ ಮಾಡ್ಬೋದು ನೀವು’ ಎಂದು ಗೌರೀಶ ಅವರಿಗೆ ಸಲಹೆಯನ್ನೂ ಕೊಟ್ಟುಬಿಟ್ಟರು.
ಈಗ ಸಂತೋಷ್ ತಾಳ್ಮೆಯ ಕಟ್ಟೆ ಒಡೀತು. ‘ಯಾರಾದ್ರೂ ಬಂದು ನನ್ ತಲ್ ತಲೆಗೆ ಹೊಡ್ದುಬಿಡ್ರಪ್ಪಾ… ಹೊಡ್ದುಬಿಡಿ… ನನ್ ಲೈಫ್‌ನ ರಿಯಲ್ ಸ್ಟೋರಿ ಹೇಳ್ತಿದೀನಿ… ಸಿನಿಮಾ ಮಾಡ್ಬೇಕು ಅಂತಿದೀರಲಾ ನೀವು…’ ಎಂದು ಕೋಪಗೊಂಡರೇನೋ ನಿಜ. ಆದ್ರೆ ಕಥೆಯನ್ನು ಹೇಳುವ ಉತ್ಸಾವನ್ನು ಮಾತ್ರ ಕಳೆದುಕೊಳ್ಳಲಿಲ್ಲ.
‘ಇದು ನಿಜವಾಗ್ಲೂ ನಡೆದಿದ್ದು. ನಮ್ಮೂರಲ್ಲಿ ಮಾರಮ್ಮನ ಗುಡಿ, ಆಂಜನೇಯ ಸ್ವಾಮಿ ಗುಡಿ ಇವೆ. ಈಗ ದೇವಸ್ಥಾನ ಕಟ್ತವ್ರೆ. ವೆರಿ ಪವರ್‍ಫುಲ್ ಆಂಜನೇಯಸ್ವಾಮಿ. ಆ ಗುಡಿ ಹತ್ರ ನಮ್ಮಮ್ಮ ತರಕಾರಿ ಬ್ಯಾಗ್ ಹಿಡ್ಕಂಡು ಬರೋವಾಗ ಒಂದು ಧ್ವನಿ ಕೇಳ್ತಂತೆ.. ನಿನ್ ಮಗ ಇಡೀ ಜಗತ್ತನ್ನೇ….’
ಸಂತೋಷ್ ಮಾತನ್ನು ತುಂಡರಿಸಿದ ಸಿರಿ, ‘ಹಾಳ್ಮಾಡ್ತಾನೆ ಅಂದ್ರಾ?’ ಎಂದು ಕೇಳಿದರು.
‘ಇಲ್ಲ. ಆಳ್ತಾನೆ ಅಂತ. ನಾನು ದೊಡ್ಡ ಇದಾಯ್ತೀನಿ ಅಂತ ಹೇಳಿದ್ದು ಅಲ್ಲಿ’ ಎಂದು ಸಮಾಧಾನದಿಂದ ತಿದ್ದಿದರು ತುಕಾಲಿ ಅವರು. ‘ನಿನ್ ಮಗ ಒಳ್ಳೆ ಅದ್ಭುತ ವ್ಯಕ್ತಿಯಾಗ್ತಾನೆ. ಸಾಧಕನಾಗ್ತಾನೆ. ಇಡೀ ನಾಡನ್ನು ಗೆಲ್ಲುವಂಥ ಶಕ್ತಿ ಸಿಗ್ತದೆ- ಇಷ್ಟು ಮಾತು ಆ ಗುಡುಗು ಸಿಡಿಲು ಮಳೆಯಲ್ಲಿ ಎಲ್ಲೋ ಒಂದು ಕಡೆ ಎಕೋ ಧ್ವನಿಯಲ್ಲಿ ಕೇಳಿಸಿದ್ದು’
ಸಂತೋಷ್ ಇಷ್ಟು ತನ್ಮಯನಾಗಿ ಕಥೆ ಹೇಳ್ತಿದ್ರೆ ಉಳಿದವರಿಗೆಲ್ಲ ಲಾಜಿಕ್‌ನ ಸಮಸ್ಯೆ. ‘ನೀವು ಎಲ್ಲಿದ್ರಿ ಆವಾಗ?’ ‘ನೀವು ಹುಟ್ಟೇ ಇರ್ಲಿಲ್ವಲ್ಲಾ. ನಿಮಗೆ ಹೇಗೆ ಗೊತ್ತಾಯ್ತು?’ ‘ಅಮ್ಮನತ್ರ ಛತ್ರಿ ಇರ್ಲಿಲ್ವಾ?’ -ರೋಚಕ ಪವಾಡದ ಕಥೆಯನ್ನು ಅಷ್ಟೇ ರಸವತ್ತಾಗಿ ಹೇಳುತ್ತಿರುವಾಗ ಅದನ್ನು ಮೈಮರೆತು ಕೇಳಿಸಿಕೊಳ್ಳೋದು ಬಿಟ್ಟು ಎಲ್ರೂ ಹೀಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳತೊಡಗಿದ್ರೆ ಕಥೆ ಮುಂದುವರಿಸೋದಾದ್ರೂ ಹೇಗೆ? ಆದ್ರೆ ತುಕಾಲಿ ಅವರಿಗೆ ತಮ್ಮನ್ನು ಜನ್ಮದ ಹಿಂದಿನ ‘ಪವಾಡ’ದ ಕಥೆಯನ್ನು ಎಲ್ಲರಿಗೂ ನಂಬಿಸಬೇಕು ಎಂಬ ಹಟ. ಅವ್ರುಕಥೆಯನ್ನು ಮುಗಿಸ್ತಾರಾ? ಉಳಿದವ್ರೆಲ್ಲ ನಂಬ್ತಾರಾ? ತಿಳಿದುಕೊಳ್ಳಲು JioCinemaದಲ್ಲಿ ಬಿಗ್‌ಬಾಸ್ ಕನ್ನಡ ನೇರಪ್ರಸಾರದಲ್ಲಿನ ‘Unseen ಕಥೆಗಳು’ ನೋಡಬೇಕು.
ಇದನ್ನೂ ಓದಿ-Bigg Boss Kannada 10: ಸ್ನೇಕ್ ಶ್ಯಾಮ್ ತೆರೆದಿಟ್ಟ ವಿಸ್ಮಯಕಾರಿ ಉರಗ ಪ್ರಪಂಚ!
https://jiocinema.onelink.me/fRhd/6yz6p28o
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ನೋಡಿ.
ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9.30ಗೆ ವೀಕ್ಷಿಸಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Snake ShyamAmazing Reptile World