BBK10: ಅಲ್ಲಿನ ಜೈಕಾರ, ಹೀಗಳಿಕೆಗಳಲ್ಲ. ಹೊಗಳಿಕೆ ತೆಗಳಿಕೆಗಳಲ್ಲ… ಬದಲಾಗಿ ಆತ್ಮಸಾಕ್ಷಿಯ ಕನ್ನಡಿಯ ಎದುರು ಕಾಣಿಸುವುದು ನಮ್ಮ ಚಿತ್ರವೇ. ಅದು ನಮ್ಮೊಳಗಿನ ನಿಜದ ಚಿತ್ರ. ಅಲ್ಲಿ ನಮ್ಮ ಚಿತ್ರದ ಜೊತೆಗೆ ಕಾಣಿಸುವುದು ಹೊರಜಗತ್ತಿನೆದುರು ನಾವು ನಡೆದುಕೊಂಡ ರೀತಿ. ಅದು ಪ್ರಾಮಾಣಿಕವಾಗಿದ್ದರೆ ಹೂವಂತೆ ನೇವರಿಸುತ್ತದೆ. 


COMMERCIAL BREAK
SCROLL TO CONTINUE READING

ಅಪ್ರಾಮಾಣಿಕವಾಗಿದ್ದರೆ ಮುಳ್ಳಂತೆ ಚುಚ್ಚುತ್ತದೆ. ಇಂಥದ್ದೊಂದು ಆತ್ಮಸಾಕ್ಷಿಯ ಕನ್ನಡಿ ಈಗ ಬಿಗ್‌ಬಾಸ್‌ ಮನೆಯ ಫಿನಾಲೆ ವಾರದ ಆರು ಸ್ಪರ್ಧಿಗಳ ಎದುರಿಗೆ ಇಡಲಾಗಿದೆ. ಆಗ ಅವರ ರಿಯಾಕ್ಷನ್ ಹೇಗಿತ್ತು ಎಂಬುದು JioCinema ಬಿಡುಗಡೆ ಮಾಡಿದ ಪ್ರೋಮೊದಲ್ಲಿ ಸೆರೆಯಾಗಿದೆ.


ಇದನ್ನೂ ಓದಿ-ಮಹೇಶ್ ಬಾಬು ಮಗಳು ಬ್ರ್ಯಾಂಡ್ ಪ್ರಚಾರದಿಂದಲೇ ಕೋಟಿ ಕೋಟಿ ಗಳಿಸೋದು!


ಫಿನಾಲೆಗೆ ಇನ್ನೆರಡೇ ದಿನ ಬಾಕಿ ಇರುವಾಗ ಬಿಗ್‌ಬಾಸ್ ಸ್ಪರ್ಧಿಗಳು ತಮ್ಮ ದೇಹದೊಟ್ಟಿಗೆ ಮನಸ್ಸನ್ನೂ ಕಾಣಿಸುವ ಆಳೆತ್ತರದ ಕನ್ನಡಿಯೆದುರು ಕೂತಿದ್ದಾರೆ. ವಿನಯ್ ಗೌಡ ತಮ್ಮ ಬಿಂಬವನ್ನು ನೋಡಿಕೊಂಡು, ‘ಹಲೋ ಮಿಸ್ಟರ್ ವಿನಯ್ ಗೌಡ’ ಎಂದು ಕರೆದುಕೊಂಡಿದ್ದಾರೆ. ‘ಈ ಮನೆಯಲ್ಲಿ ಜಾಸ್ತಿ ಮಾತಾಡಿರುವುದು ನಿನ್ ಜೊತೆ. ಯಾರೂ ಜೊತೆಗಿಲ್ಲದಿರುವಾಗ ನೀನು ಇರ್ತೀಯಾ. ನನ್ನನ್ನು ನಾನು ಹುಡುಕಿಕೊಂಡಿದೀನಿ. ಐ ಆಮ್ ವೆರಿ ಪ್ರೌಢ್ ಆಫ್ ಯು’ ಎಂದು ಸಂಗೀತಾ ತಮ್ಮ ಬಿಂಬದ ಎದುರು ಸ್ವಗತವಾಡುತ್ತ ಕಣ್ಣೀರಾಗಿದ್ದಾರೆ. 


ಇದನ್ನೂ ಓದಿ-Bigg Boss Kannada 10: ಫೈನಲ್ ಪ್ರವೇಶದ ಕನಸು ನುಚ್ಚು ನೂರು!ಬಿಗ್ ಬಾಸ್ ಮನೆಗೆ ವಿದಾಯ ಹೇಳಿದ ಕೊನೆಯ ಸ್ಪರ್ಧಿ ಇವರು!


‘ನನ್ನನ್ನು ನಾನೇ ನೋಡಿಕೊಂಡಾಗ ಕೆಲವು ಸಂಗತಿಗಳು ಮನಸಲ್ಲಿ ಚುಚ್ಚುತ್ತವೆ’ ಎಂದು ಪ್ರತಾಪ್ ಓಪನ್‌ಅಪ್ ಆಗಿದ್ದಾರೆ. ‘ಫ್ರೆಂಡ್‌ಷಿಪ್‌ನ ಯೂಸ್ ಮಾಡ್ಕೊತಾನೆ ಅಂತಾರೆ’ ಎಂದು ಇಲ್ಲ ಎನ್ನುವಂತೆ ತಲೆಯಾಡಿಸಿದ್ದಾರೆ ಕಾರ್ತಿಕ್.


ಇಷ್ಟು ದಿನಗಳಲ್ಲಿ ಕಟ್ಟಿಕೊಂಡ ತಮ್ಮದೇ ವ್ಯಕ್ತಿಚಿತ್ರಗಳನ್ನು ಕನ್ನಡಿಯೆದುರು ಕಂಡ ವಿಶಿಷ್ಟ ಗಳಿಗೆಗೆ ಬಿಗ್‌ಬಾಸ್‌ ಸ್ಪರ್ಧಿಗಳು ಕರಗಿದ್ದಾರೆ. ತಮ್ಮನ್ನು ತಾವು ತೆರೆದುಕೊಂಡಿದ್ದಾರೆ. ಈ ಭಾವುಕ ಕ್ಷಣಗಳನ್ನು ಜಿಯೊ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಬಹುದು.


ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಮತ್ತು ಎಪಿಸೋಡ್‌ಗಳನ್ನು JioCinemaದಲ್ಲಿ ಉಚಿತವಾಗಿ ನೋಡಿ.
ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.