BBK Drone-Vinay: ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ವಿನಯ್‌, ಪ್ರತಾಪ್ ವಿರುದ್ಧ ಹರಿಹಾಯ್ದಿದ್ದಾರೆ. ‘ಅಮಾಯಕನ ಹಾಗೆ ವೇಷ ಹಾಕಿಕೊಂಡು, ಎಲ್ಲರಿಗೂ ಬೂದಿ ಎರೆಚಿಕೊಂಡು ಇರುವುದೆಂದರೆ ಅದು ಪ್ರತಾಪ್’ ಎಂದು ಅವರು ಹೇಳಿದ್ದಾರೆ. ಸಾಮಾನ್ಯವಾಗಿ ಇಂಥ ಟೀಕೆಗಳಿಗೆ ತಣ್ಣಗೇ ಉತ್ತರಿಸುತ್ತಿದ್ದ ಡ್ರೋಣ್ ಪ್ರತಾಪ್ ಕೂಡ ಈ ಬಾರಿ ಗರಂ ಆಗಿದ್ದಾರೆ. ಅಷ್ಟೇ ಅಲ್ಲ, ಧ್ವನಿ ಎತ್ತರಿಸಿ ವಿನಯ್‌ ವಿರುದ್ಧ ಮಾತಾಡಿದ್ದಾರೆ.


COMMERCIAL BREAK
SCROLL TO CONTINUE READING

‘ನೀವು ಅಂದಹಾಗೆಲ್ಲ ಅನ್ನಿಸಿಕೊಂಡು ಇರುವುದಕ್ಕೆ ಸಾಧ್ಯವಿಲ್ಲ. ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಮಾರುತ್ತರ ನೀಡಿದ್ದಾರೆ. ವಿನಯ್, ‘ನೀನು ಆಡ್ತಿರೋ ನಾಟಕ ನಂಗೆ ಗೊತ್ತಿಲ್ವೇನೋ? ಏನೋ ಮಾಡ್ತೀಯಾ ನೀನು?’ ಎಂದು ಕೂಗಾಡಿದ್ದಾರೆ. 


ಇದನ್ನೂ ಓದಿ-Jhanvi Kapoor: ಕಾಸ್ಟಿಂಗ್‌ ಕೌಚ್‌ ಬಗ್ಗೆ ಧಡಕ್‌ ಬೆಡಗಿ ಹೇಳಿದ್ದೇನು ಗೊತ್ತೇ?


ಪ್ರತಾಪ್ ಕೂಡ ಅಷ್ಟೇ ದೊಡ್ಡದಾಗಿ, ‘ನೀಟಾಗಿ ಮಾತಾಡೋದು ಕಲ್ತುಕೊಳ್ಳಿ. ನಾನು ಮಾತುಗಳ ಮುಖಾಂತರ ಉತ್ತರ ಕೊಡ್ತೀನಿ’ ಎಂದು ಹೇಳಿದ್ದಾರೆ. ವಿನಯ್, ‘ನೀನು ನನಗೆ ಹೇಳಿಕೊಡಬೇಕಾಗಿಲ್ಲ. ಹೋಗಲೇ’ ಎಂದಿದ್ದಾರೆ. ಸಂಗೀತಾ ಮತ್ತು ತುಕಾಲಿ ಸಂತೋಷ್‌ ಎಲ್ಲರೂ ಸೇರಿಕೊಂಡು ಜಗಳ ತಪ್ಪಿಸಲು ಯತ್ನಿಸುತ್ತಿರುವ ದೃಶ್ಯವೂ ಪ್ರೋಮೊದಲ್ಲಿ ಸೆರೆಯಾಗಿದೆ.


ಹಾಗಾದರೆ ಈ ವಾರ ವಿನಯ್ ಮತ್ತು ಪ್ರತಾಪ್‌ ನಡುವಿನ ಯುದ್ಧಕ್ಕೆ ಸಾಕ್ಷಿಯಾಗಲಿದೆಯಾ? ಹಾಗಾದದಲ್ಲಿ ಉಳಿದ ಸದಸ್ಯರು ಯಾರ ಪರ ನಿಂತುಕೊಳ್ಳುತ್ತಾರೆ? ಫಿನಾಲೆಗೆ ಕೆಲವೇ ಹೆಜ್ಜೆಗಳ ದೂರದಲ್ಲಿರುವಾಗ ಮತ್ತೆ ಏರುತ್ತಿರುವ ಕಾವು ಮನೆಯ ಪರಿಸ್ಥಿತಿಯನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಲಿದೆ?ಈ ಎಲ್ಲ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕು.


ಇದನ್ನೂ ಓದಿ-UI First Look Teaser: ಕಲ್ಕಿ ಅವತಾರದಲ್ಲಿ ಉಪ್ಪಿ..! ಫ್ಯಾನ್ಸ್‌ಗೆ ಹಾಲಿವುಡ್‌ ಲೆವೆಲ್‌ ಗಿಫ್ಟ್ ಕೊಟ್ಟ ರಿಯಲ್‌ ಸ್ಟಾರ್‌


ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.


ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.