BBK10: ದೊಡ್ಮನೆಗೆ ಕಾಲಿಟ್ಟ ಕಾಂತಾರ ಮೂಗುತಿ ಸುಂದರಿ! ಇದು ವೈಲ್ಡ್ ಕಾರ್ಡ್ ಎಂಟ್ರಿನಾ?
Saptami Gowda Entry To Bigg Boss: ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಬಿಗ್ ಬಾಸ್ ಮನೆಯಲ್ಲಿ ಸಖತ್ ಟ್ವಿಸ್ಟ್ಗಳು ಎದುರಾಗುತ್ತಿವೆ.. ಅದೇ ರೀತಿ ಇದೀಗ ದೊಡ್ಮನೆಗೆ ಕಾಂತಾರ ಸುಂದರಿ ಸಪ್ತಮಿ ಗೌಡ ಎಂಟ್ರಿ ಕೊಟ್ಟಿದ್ದಾರೆ..
Bigg Boss Kannada: ಇತ್ತೀಚಿನ ಬಿಗ್ಬಾಸ್ ಸೀಸನ್ ಸ್ಪರ್ಧಿಗಳ ಅತೀರೇಖದ ವರ್ತನೆಯಿಂದ ಪ್ರೇಕ್ಷಕರು ಬೇಸರಗೊಂಡಿದ್ದರು.. ಆದರೆ ಇದೀಗ ಎಲ್ಲವೂ ಸರಿಯಾಗಿದ್ದು.. ಶೋ ನೋಡುವ ಕುತೂಹಲ ಹೆಚ್ಚಾಗುತ್ತಿದೆ.. ಅದೇ ರೀತಿ ಇದೀಗ ಟ್ವಿಸ್ಟ್ಗಳ ಮೇಲೆ ಟ್ವಿಸ್ಟ್ ನೀಡುತ್ತಿರುವ ದೊಡ್ಮನೆಗೆ ಸದ್ಯ ಕಾಂತಾರ ಸುಂದರಿ ಸಪ್ತಮಿ ಗೌಡ ಕಾಲಿಟ್ಟಿದಾರೆ..
ಹೌದು ಕಾಂತಾರ ಸಿನಿಮಾ ಮೂಲಕ ಮನೆಮಾತಾದ ಸಪ್ತಮಿ ಗೌಡ ಅವರನ್ನು ಇತ್ತೀಚೆಗೆ ರಾಜ್ಯ ಸರ್ಕಾರ ಆರಂಭಿಸಿರುವ ಮೈತ್ರಿ ಮುಟ್ಟಿನ ಕಪ್ ಯೋಜನೆಗೆ ರಾಯಭಾರಿಯಾಗಿದ್ದು.. ಹೆಣ್ಣು ಮಕ್ಕಳಲ್ಲಿ ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ..
ಇದನ್ನೂ ಓದಿ-12 ವಾರಗಳ ಜಿದ್ದಾಜಿದ್ದಿ, 8 ಮಂದಿ ನಾಮಿನೇಟ್… ಈ ವಾರ ದೊಡ್ಮನೆಯಿಂದ ಹೊರಹೋಗೋರು ಯಾರು ಗೊತ್ತಾ?
ಇದೇ ಸದುದ್ದೇಶ ಸಾರುವ ಸಲುವಾಗಿ ಸದ್ಯ ಸಪ್ತಮಿ ಗೌಡ ಬಿಗ್ ಬಾಸ್ ಮನೆಗೂ ಕಾಲಿಟ್ಟಿದ್ದಾರೆ.. ಹೌದು ಬಿಗ್ಬಾಸ್ ಮನೆಯಲ್ಲಿಯೂ ಹೆಣ್ಣು ಮಕ್ಕಳಿರುವುದರಿಂದ ಅವರಿಗೂ ಮೈತ್ರಿ ಮುಟ್ಟಿನ ಕಪ್ ನೀಡಿ ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ಭಾಗಿಯಾಗಲು ಕೋರಿದ್ದಾರೆ.. ಸದ್ಯ ಇದರ ಪ್ರೋಮೋವೊಂದನ್ನು ಕಲರ್ಸ್ ಕನ್ನಡ ಬಿಡುಗಡೆಮಾಡಿದೆ..
ಮೈತ್ರಿ ಮುಟ್ಟಿನ ಕಪ್ ಯೋಜನೆಯ ಬಗ್ಗೆ ಬಿಗ್ ಮನೆಯಲ್ಲಿ ಮಾತನಾಡಿದ ಸಪ್ತಮಿ "ನಾನು ಇಲ್ಲಿಗೆ ಬಂದಿರುವ ಉದ್ದೇಶ ಎಂದರೇ ಇತ್ತೀಚೆಗೆ ರಾಜ್ಯ ಸರ್ಕಾರ ಆರಂಭಿಸಿರುವ ಮೈತ್ರಿ ಮುಟ್ಟಿನ ಕಪ್ ಯೋಜನೆಗೆ ರಾಯಭಾರಿಯಾಗಿದ್ದೇನೆ.. ಈ ಯೋಜನೆಯ ಮುಖ್ಯ ಉದ್ದೇಶವೆಂದರೇ ಸ್ಯಾನಿಟರಿ ಪ್ಯಾಡ್ನಿಂದ ಮುಟ್ಟಿನ ಕಪ್ ಬಳಕೆ ಮಾಡುವಂತೆ ಅರಿವು ಮೂಡಿಸುವುದು.. ಸದ್ಯ ಅನೇಕ ಹೆಣ್ಣು ಮಕ್ಕಳು ಮುಟ್ಟಿನ ಕಪ್ನ್ನು ಬಳಸುತ್ತಿದ್ದಾರೆ.." ಎಂದು ಮುಟ್ಟಿನ ಕಪ್ ನೀಡಿ ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸಿದ್ದಾರೆ..
ಇದನ್ನೂ ಓದಿ-Isha Koppikar: 14 ವರ್ಷದ ದಾಂಪತ್ಯಕ್ಕೆ ಫುಲ್ ಸ್ಟಾಪ್.. ವಿಚ್ಛೇದನಕ್ಕೆ ಕಾರಣ ಬಿಚ್ಚಿಟ್ಟ ಸೂರ್ಯವಂಶ ನಟಿ.!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.