ಭಾಗ್ಯಶ್ರೀ ಖುಲಾಯಿಸಿತು ಅದೃಷ್ಟ: ವಿನಯ್ ಹಾಗೂ ತುಕಾಲಿಗೆ ಡ್ರೋನ್ನಿಂದ ತಿರುಗೇಟು!
BBK10: ಬಿಗ್‌ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದಲ್ಲಿ ಭಾಗ್ಯಶ್ರೀಗೆ ಮತ್ತೆ ಅದೃಷ್ಟ ಖುಲಾಯಿಸಿ, ನಾಮಿನೇಷನ್‌ನಿಂದ ಮತ್ತೆ ಸೇಫ್ ಆಗಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, ಭಾಗ್ಯಶ್ರೀ ನಾಮಿನೇಷನ್‌ನಿಂದ ಸೇಫ್ ಡ್ರೋನ್ ಪ್ರತಾಪ್ ಮಾಡಿ, ವಿನಯ್ ಮತ್ತು ತುಕಾಲಿ ಸಂತುಗೆ ಪರೋಕ್ಷವಾಗಿ ಮತ್ತೆ ತಿರುಗೇಟು ಕೊಟ್ಟಿದ್ದಾರೆ.
Bhagyashree Safe From Nomination: ಬಿಗ್‌ಬಾಸ್ ಮನೆಯಲ್ಲಿ, ಈ ವಾರದ ಟಾಸ್ಕ್‌ಗಳನ್ನು ಗೆಲ್ಲುವ ತಂಡಕ್ಕೆ ನಾಮಿನೇಷನ್ ವಿಚಾರವಾಗಿ ವಿಶೇಷ ಅಧಿಕಾರ ನೀಡುವುದಾಗಿ ಬಿಗ್‌ಬಾಸ್ ಘೋಷಿಸುವುದರ ಜೊತೆಗೆ ಟಾಸ್ಕ್‌ಗಳಲ್ಲಿನ ಗೆಲುವು, ನಾಮಿನೇಷನ್ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದರು. ಆಗ "ಎಲ್ಲರಿಗೂ ಪ್ರೂವ್ ಮಾಡಿಕೊಳ್ಳಲು ಅವಕಾಶ ಇದೆ. ನಾವು ಗೆಲ್ಲಲೇಬೇಕು. ಐದಕ್ಕೆ ಐದೂ ಗೆದ್ದರೆ ಐದೂ ಜನರೂ ಸೇಫ್ ಆಗ್ತೀವಿ" ಎಂದು ತುಕಾಲಿ ಸಂತು ತಮ್ಮ ತಂಡದವರೊಂದಿಗೆ ಚರ್ಚೆ ಮಾಡುತ್ತಿರುವಾಗ, "ಆಟದಲ್ಲಿ ಚೆನ್ನಾಗಿ ಪರ್ಫಾರ್ಮ್ ಮಾಡುವವರನ್ನ ಸೇಫ್ ಮಾಡೋಣ" ಅಂತಲೂ ಸ್ನೇಹಿತ್ ಹೇಳುತ್ತಿದ್ದರು.
ಬಿಗ್‌ಬಾಸ್ ಎರಡೂ ತಂಡಗಳಿಗೂ ಪಝಲ್ ಕೊಟ್ಟಿ, ಬೇಗ ಪಝಲ್ ಮುಗಿಸುವ ತಂಡ ಗೆದ್ದಂತೆ ಎಂದು ಹೇಳಿದ್ದರು. ಆರಂಭದಲ್ಲಿ ಸಿರಿ ತಂಡದಲ್ಲಿ ಕನ್‌ಫ್ಯೂಶನ್ ಆಗಿದ್ದರು, ಡ್ರೋನ್ ಪ್ರತಾಪ್ ತಂಡದಲ್ಲಿ ಕೋ ಆರ್ಡಿನೇಷನ್ ಚೆನ್ನಾಗಿತ್ತು. ಬೇಗ ಪಝಲ್ ಮುಗಿಸಿ, ಡ್ರೋನ್ ಪ್ರತಾಪ್ ತಂಡ ಗೆಲುವಿನ ನಗೆ ಬೀರಿದರು. ಆ ವೇಳೆ ಟಾಸ್ಕ್ ಗೆದ್ದ ಡ್ರೋನ್ ಪ್ರತಾಪ್‌ಗೆ ಬಿಗ್‌ಬಾಸ್ ವಿಶೇಷ ಅಧಿಕಾರ ನೀಡಿ, "ನಿಮ್ಮ ತಂಡದಿಂದ ನಾಮಿನೇಟ್ ಆಗಿರುವ ಸದಸ್ಯರ ಪೈಕಿ ಒಬ್ಬರನ್ನು ನಾಮಿನೇಷನ್‌ನಿಂದ ಸೇಫ್ ಮಾಡಬಹುದು. ನಿರ್ಧಾರ ನಿಮ್ಮದೇ ಆಗಿರಬೇಕು. ಯಾರೊಂದಿಗೂ ಚರ್ಚಿಸುವಂತಿಲ್ಲ" ಎಂದಿದ್ದರು.
ಇದನ್ನು ಓದಿ: ‘ರೊಚ್ಚಿಗೆದ್ದಿದ್ದಾರೆ ಮನೆಮಂದಿ: ಸಂಗೀತಾ-ಕಾರ್ತಿಕ್ ವ್ಯಕ್ತಿತ್ವ ಮಾತಿನಲ್ಲೇ ಚಿಂದಿ!’
ಆಗ ಡ್ರೋನ್ ಪ್ರತಾಪ್ "ನಮ್ಮ ಟೀಮ್‌ನಲ್ಲಿ ಎಲ್ಲರೂ ಚೆನ್ನಾಗಿ ಆಡಿದ್ದಾರೆ. ಎಫರ್ಟ್ಸ್ ಹಾಕಿದ್ದಾರೆ. ನಾನು ಭಾಗ್ಯಶ್ರೀ ಅವರನ್ನ ಸೇಫ್ ಮಾಡುತ್ತಿದ್ದೇನೆ. ಯಾಕಂದ್ರೆ, ಪಝಲ್ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಿತ್ತು. ಅದರಿಂದ ನಮಗೆ ಸಹಾಯ ಆಯ್ತು. ಗೇಮ್ ದೃಷ್ಟಿಕೋನದಿಂದ ನಾನು ಭಾಗ್ಯಶ್ರೀ ಅವರನ್ನ ಸೇಫ್ ಮಾಡ್ತೀನಿ" ಎಂದು ಎಲ್ಲರ ಮುಂದೆ ಘೋಷಿಸಿದರು. ಅದಕ್ಕೆ ಭಾಗ್ಯಶ್ರೀ "ಥ್ಯಾಂಕ್ಯೂ ಸೋ ಮಚ್. ನಾನು ನಂಬೋಕೆ ಆಗ್ತಿಲ್ಲ" ಅಂತ್ಹೇಳಿ ಫುಲ್ ಖುಷಿಯಾದರು.
ಈ ವಾರ ನಾಮಿನೇಟ್ ಆಗಿದ್ದ ಭಾಗ್ಯಶ್ರೀ, ಮತ್ತೆ ಡ್ರೋನ್ ಪ್ರತಾಪ್ ಸೇಫ್ ಮಾಡಿಬಿಟ್ಟಿದ್ದರಿಂದ ಮತ್ತೆ ತುಕಾಲಿ ಸಂತು ಮತ್ತು ವಿನಯ್‌ಗೆ ಶೇಪ್ ಔಟ್ ಆದಂಗಾಯ್ತು. ಡ್ರೋನ್ ಪ್ರತಾಪ್ ನಿರ್ಧಾರ ಕಂಡು ‘ಪಾಪರೆಡ್ಡಿಪಾಳ್ಯ’ ಗ್ಯಾಂಗ್ ಶಾಕ್ ಆಗಿದ್ದು, ಅದರಲ್ಲೂ ತುಕಾಲಿ ಸಂತು ಮತ್ತು ವಿನಯ್‌ಗೆ ಡ್ರೋನ್ ಪ್ರತಾಪ್ ಪರೋಕ್ಷವಾಗಿ ತಿರುಗೇಟು ನೀಡಿದಂತಿತ್ತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.