BBK10 : ಕನ್ನಡ ಬಿಗ್‌ ಬಾಸ್‌ 10 ಮುಕ್ತಾಯವಾಗಿದೆ. ನಟ ಕಾರ್ತಿಕ್‌ ಮಹೇಶ್‌ ಈ ಬಾರಿ ಬಿಗ್‌ ಬಾಸ್‌ ಕಪ್‌ ಗೆದ್ದಿದ್ದಾರೆ. ಡ್ರೋನ್‌ ಪ್ರತಾಪ್‌ ರನರ್‌ ಅಪ್‌ ಆಗಿದ್ದಾರೆ. ಇದೀಗ ಇಷ್ಟು ದಿನ ದೊಡ್ಮನೆಯಲ್ಲಿ ಜಗಳವಾಡುತ್ತಿದ್ದ ಸ್ಪರ್ಧಿಗಳು ಇದೀಗ ಮನೆಯಿಂದ ಹೊರ ಬಂದ ನಂತರವೂ ಜಗಳ ಶುರುಮಾಡಿದ್ದಾರೆ. ಈ ಕುರಿತು ವರದಿ ಇಲ್ಲಿ ನೋಡಿ..   


COMMERCIAL BREAK
SCROLL TO CONTINUE READING

ಹೌದು.. ಆದ್ರೆ ನಾವು ಹೇಳುತ್ತಿರುವುದು ಕನ್ನಡ ಬಿಗ್‌ ಬಾಸ್‌ ಸ್ಪರ್ಧಿಗಳ ವಿಚಾರವಲ್ಲ. ಬದಲಿಗೆ ಈ ತಿಂಗಳು ಕೊನೆಗೊಂಡ ಬಿಗ್ ಬಾಸ್ 7 ತಮಿಳು ಸ್ಪರ್ಧಿಗಳ ಕಥೆ. ಈ ಕಾರ್ಯಕ್ರಮದ ಪ್ರಮುಖ ಸ್ಪರ್ಧಿಗಳಾಗಿದ್ದ ದಿನೇಶ್ ಮತ್ತು ವಿಚಿತ್ರಾ ಸಧ್ಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವಾಗ ಜಗಳ ಮಾಡಿಕೊಂಡಿದ್ದಾರೆ ಎಂಬ ವರದಿಗಳು ಕೇಳಿ ಬಂದಿವೆ.


ಇದನ್ನೂ ಓದಿ:ಎರಡನೇ ಸಿನಿಮಾದಲ್ಲಿಯೇ ಶೂಟಿಂಗ್ ಬಿಟ್ಟು ದಿಢೀರ್ ನಾಪತ್ತೆಯಾಗಿದ್ದ ಈಕೆ ಸದ್ಯ ಸೂಪರ್‌ ಸ್ಟಾರ್!‌


ವಿವಾದಗಳು ಮತ್ತು ಬಿಗ್ ಬಾಸ್ ಕಾರ್ಯಕ್ರಮವನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ನಟ ಕಮಲ್ ಹಾಸನ್ 2017 ರಿಂದ ತಮಿಳಿನಲ್ಲಿ ಈ ಬಿಗ್ ಬಾಸ್ ಶೋ ಅನ್ನು ಹೋಸ್ಟ್ ಮಾಡುತ್ತಿದ್ದಾರೆ. ಆರಂಭದ ಸೀಸನ್‌ನಿಂದ ಕೆಲವು ದಿನಗಳ ಹಿಂದೆ ಮುಕ್ತಾಯಗೊಂಡ ಸೀಸನ್‌ವರೆಗೆ ದೊಡ್ಮನೆಯಲ್ಲಿ ನಡೆದ ಹಲವು ಸಂಗತಿಗಳು ಇಂದಿಗೂ ಪಂಚಾಯ್ತಿಯಾಗಿವೆ. ಇತ್ತೀಚಿನ ಸೀಸನ್ ನಲ್ಲೂ ‘ಮಹಿಳೆಯರ ಸುರಕ್ಷತೆ, ಶಾಲಾ ಶಿಕ್ಷಣ ಸಮಸ್ಯೆ’ಯಂತಹ ಹಲವು ಘಟನೆಗಳು ಅಭಿಮಾನಿಗಳನ್ನು ತಿರುಗಿ ನೋಡುವಂತೆ ಮಾಡಿದ್ದವು.


ಬಿಗ್‌ ಬಾಸ್‌ ತಮಿಳು ಮನೆಯೊಳಗೆ ತಂಡೋಪತಂಡವಾಗಿ ಆಟವಾಡಲಾಗುತ್ತದೆ. ಅವರೆಲ್ಲರ ಸಾಮಾನ್ಯ ಗುರಿ ಎಂದರೆ ಕಪ್‌ ಗೆಲ್ಲುವುದು. ಆದ್ರೆ ಈ ಭಾರಿ ಈ ಬಾರಿಯ ಶೋನಲ್ಲಿ ಬದ್ಧ ವೈರಿಗಳಂತಿದ್ದದ್ದು ವಿಚಿತ್ರಾ ಮತ್ತು ದಿನೇಶ್. ದಿನೇಶ್ 5ನೇ ರನ್ನರ್‌ ಅಪ್‌ ಅದ್ರೆ, ವಿಚಿತ್ರಾ ಫೈನಲ್‌ಗೆ ಕೆಲವು ವಾರಗಳ ಮೊದಲೇ ದೊಡ್ಮನೆಯಿಂದ ಹೊರ ಹೊಗಿದ್ದರು.


ಇದನ್ನೂ ಓದಿ:ಎರಡನೇ ಸಿನಿಮಾದಲ್ಲಿಯೇ ಶೂಟಿಂಗ್ ಬಿಟ್ಟು ದಿಢೀರ್ ನಾಪತ್ತೆಯಾಗಿದ್ದ ಈಕೆ ಸದ್ಯ ಸೂಪರ್‌ ಸ್ಟಾರ್!‌


ಇನ್ನು ಬಿಗ್ ಬಾಸ್ ಜನಪ್ರಿಯ ಸ್ಪರ್ಧಿಗಳನ್ನು ಟಿವಿ ರಿಯಾಲಿಟಿ ಶೋಗಳಿಗೆ ಆಹ್ವಾನಿಸಲಾಗುತ್ತದೆ. ಅದರಂತೆ ʼಅಂದಾಗಕಾಸಂʼ ಎಂಬ ತಮಿಳು ಶೋಗೆ ಇವರಿಬ್ಬರನ್ನು ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮದ ಶೂಟಿಂಗ್ ವೇಳೆ ಈ ಇಬ್ಬರು ಜಗಳವಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.


ಯಸ್‌.. ಅಂದಾಗಕಾಸಂ ಕಾರ್ಯಕ್ರಮದಲ್ಲಿ ತಂಡ ತಂಡವಾಗಿ ಆಟವಾಡಬೇಕು.. ಶೂಟಿಂಗ್ ಪ್ರಾರಂಭವಾಗುವ ಮೊದಲು ನಟಿ ವಿಚಿತ್ರಾ ದಿನೇಶ್ ಅವರನ್ನು ತಮ್ಮ ತಂಡದಲ್ಲಿ ಆಡಲು ಕೇಳಿದರು. ಆದರೆ ಅವರೊಂದಿಗೆ ಒಂದೇ ತಂಡದಲ್ಲಿ ಆಡಲು ಸಾಧ್ಯವಿಲ್ಲ ಎಂದು ದಿನೇಶ್ ಹೇಳಿದ್ದಾರೆ. ಇದರಿಂದ ಕುಪಿತಗೊಂಡ ವಿಚಿತ್ರಾ ಶೂಟಿಂಗ್ ನಲ್ಲಿ ತಕ್ಷಣ ಭಾಗವಹಿಸುವುದಿಲ್ಲ ಎಂದು ಹೇಳಿ ಹೊರ ನಡೆದಿದ್ದಾರೆ ಎನ್ನಲಾಗಿದೆ. ಕಾರ್ಯಕ್ರಮದ ಸಿಬ್ಬಂದಿ ಎಷ್ಟು ಬೇಡಿಕೊಂಡರೂ ಅವರು ಒಪ್ಪಲಿಲ್ಲ ಎಂದು ತಿಳಿದು ಬಂದಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.