Bigg Boss Srishty rode : ಹೊಸ ವರ್ಷದ ಸಂದರ್ಭದಲ್ಲಿ, ಅನೇಕ ಸೆಲೆಬ್ರಿಟಿಗಳು ರಜಾದಿನಗಳನ್ನು ಆನಂದಿಸಲು ವಿದೇಶಕ್ಕೆ ಹೋಗುತ್ತಿದ್ದಾರೆ. ಈ ಪೈಕಿ ವಿದೇಶಕ್ಕೆ ಹೋಗಿದ್ದ ನಟಿಯೊಬ್ಬರಿಗೆ ಫಾರೀನ್‌ ಟ್ರಿಪ್‌ ಕಂಠಕವಾಗಿದೆ. ಸಧ್ಯ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ನಟಿಯ ಆರೋಗ್ಯ ಹೇಗಿದೆ..? ಬನ್ನಿ ನೋಡೋಣ..


COMMERCIAL BREAK
SCROLL TO CONTINUE READING

ನಟಿ ಮತ್ತು 'ಬಿಗ್ ಬಾಸ್ 12' ಖ್ಯಾತಿಯ ಸೃಷ್ಟಿ ರೊಡೆ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಆಸ್ಪತ್ರೆಯ ಬೆಡ್‌ ಮೇಲೆ ಮಲಗಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿವೆ. ಸ್ವತಃ ಈ ಚಿತ್ರಗಳನ್ನು ನಟಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ..


ಇದನ್ನೂ ಓದಿ: ಮುಖ ನೋಡಿ ನಗುವಂತಿದ್ದ ಈ ಹುಡುಗಿ ಈಗ ಹಾಟ್‌ ಬ್ಯೂಟಿ..! ಸೆಲ್ಫಿ ತಗೋಳೋಕೆ ವರ್ಷಗಟ್ಟಲೇ ಕಾಯಬೇಕು..


ಈ ಫೋಟೋ ನೋಡಿದ ಆಕೆಯ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಡಿಸೆಂಬರ್ 26 ರಂದು, ನಟಿ ಆಸ್ಪತ್ರೆಯಲ್ಲಿರುವ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.. ಆದ್ರೆ ಏಕಾಏಕಿ ನಟಿಯನ್ನು ಈ ಸ್ಥಿತಿಯಲ್ಲಿ ಕಂಡ ಫ್ಯಾನ್ಸ್‌ ಶಾಕ್‌ ಆಗಿದ್ದಾರೆ..


ರಜೆಯ ವೇಳೆ ಅನಾರೋಗ್ಯಕ್ಕೆ ತುತ್ತಾಗಿ ಆಮ್‌ಸ್ಟರ್‌ಡ್ಯಾಮ್‌ನ ಆಸ್ಪತ್ರೆಗೆ ದಾಖಲಾಗಬೇಕಾಯಿತು ಎಂದು ಸೃಷ್ಟಿ ಹೇಳಿದ್ದಾರೆ. ಸೃಷ್ಟಿ ಆಸ್ಪತ್ರೆಯಲ್ಲಿ ಚೇತರಿಸಿಕೊಂಡ ನಂತರ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವರದಿಗಳ ಪ್ರಕಾರ, ನಟಿ ನ್ಯುಮೋನಿಯಾದಿಂದ ಬಳಲುತ್ತಿದ್ದು, ಇದರಿಂದಾಗಿ ಉಸಿರಾಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.