BBK 10: ಬಿಗ್‌ಬಾಸ್ ಮನೆಯ ಚೇಲಾ ಯಾರು? ಚೇಲನಾಗಿರುವ ಸದಸ್ಯ ಏನ್ಹೇಳಿದ್ದಾರೆ!
Bigg Boss Kannada 10: ಬಿಗ್‌ಬಾಸ್ ಮನೆಯೊಳಗೆ ಒಂಬತ್ತನೇ ವಾರ ಬಿಗ್‌ಬಾಸ್ ನೀಡಿದ ವಿಶೇಷ ಚಟುವಟಿಕೆಯಲ್ಲಿ `ಇಡೀ ಸೀಸನ್‌ನಲ್ಲಿ ಕೊನೆಯವರೆಗೂ ಚೇಲನಾಗಿಯೇ ಇರುವ ಸದಸ್ಯ ಯಾರು?` ಎಂದು ಪ್ರಶ್ನೆ ಕೇಳಿದ್ದಾರೆ. ಆಗ ವೇಳೆ ಮನೆಯ ಸದಸ್ಯರು ಯಾರ ಹೆಸರು ತೆಗೆದುಕೊಂಡರು? ಇಲ್ಲಿದೆ ಸಂಪೂರ್ಣ ಮಾಹಿತಿ.
Snehith In BBK: ಬಿಗ್‌ಬಾಸ್ ಕನ್ನಡ 10ರ ಕಾರ್ಯಕ್ರಮದಲ್ಲಿ 9ನೇ ವಾರ ಆರಂಭಗೊಂಡಿದ್ದು, ವಾರದ ಆರಂಭದಲ್ಲೇ ಸ್ಪರ್ಧಿಗಳಿಗೆ ಬಿಗ್‌ಬಾಸ್ ವಿಶೇಷ ಚಟುವಟಿಕೆ ನೀಡಿದ್ದಾರೆ. ಇತರ ಸ್ಪರ್ಧಿಗಳ ಬಗೆಗಿನ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಉದ್ದೇಶದಿಂದ ಸ್ಪೆಷಲ್ ಟಾಸ್ಕ್ ಕೊಟ್ಟಿದ್ದು, ಇದರ ಅನುಸಾರ ಟಿವಿ ಪರದೆ ಮೇಲೆ ತೋರಿಸುವ ಪ್ರಶ್ನೆಗಳಿಗೆ ತಕ್ಕ ಉತ್ತರಗಳನ್ನು ಸ್ಪರ್ಧಿಗಳು ಯಾರೊಂದಿಗೂ ಚರ್ಚಿಸದಂತೆ ನೀಡಬೇಕಿತ್ತು.
ಈ ಚಟುವಟಿಕೆಯ ವೇಳೆ ಟಿವಿ ಪರದೆ ಮೇಲೆ "ಇಡೀ ಸೀಸನ್‌ನಲ್ಲಿ ಕೊನೆಯವರೆಗೂ ಚೇಲನಾಗಿಯೇ ಇರುವ ಸದಸ್ಯ ಯಾರು?"ಎಂಬ ಪ್ರಶ್ನೆ ಬಂದಾಗ, ಬಿಗ್‌ಬಾಸ್ ಮನೆಯ ಬಹುತೇಕ ಮಂದಿ ಸ್ನೇಹಿತ್ ಎಂದೇ ಉತ್ತರ ಕೊಟ್ಟಿದ್ದಾರೆ. ಡ್ರೋನ್ ಪ್ರತಾಪ್ , ಸ್ನೇಹಿತ ಯಾಕಂದ್ರೆ, ನಾನು ಹಲವಾರು ಬಾರಿ ಗಮನಿಸಿದ್ದೇನೆ.. ನನಗೂ ಅನುಭವ ಆಗಿದೆ. ಎಷ್ಟೋ ವಿಚಾರಗಳಲ್ಲಿ ಸ್ನೇಹಿತ್ ವಿನಯ್, ನಮ್ರತಾ ಪರವಾಗಿ ಇದ್ದಾರೆ. ಚೇಲನಾಗಿಯೇ ನಡೆದುಕೊಳ್ತಾರೆ ಎಂದು ಹೇಳಿದರು. ಬಳಿಕ ಕಾರ್ತಿಕ್ , ಬಾತ್‌ರೂಮ್ ವಿಚಾರವಾಗಿ ಸ್ನೇಹಿತ್ ನಡೆದುಕೊಂಡಿದ್ದು ನನಗೆ ಸರಿ ಎನಿಸಲಿಲ್ಲ. ಅದಕ್ಕೆ ಸ್ನೇಹಿತ್ ಎಂದಿದ್ದಾರೆ. ಹಾಗೆ ಸಂಗೀತಾ ಮೊದಲನೇ ವಾರದಿಂದಲೂ ಸ್ನೇಹಿತ್ ಚೇಲ ಅಂತಲೇ ಅನಿಸುತ್ತೆ. ವಿನಯ್ ವಿರುದ್ಧ ಸ್ನೇಹಿತ್ ಧ್ವನಿ ಏರಿಸುವುದಿಲ್ಲ ಎಂದು ಕಾರಣ ನೀಡಿದ್ದಾರೆ.
ಇದನ್ನೂ ಓದಿ: ಬಿಗ್‌ಬಾಸ್: ಸ್ನೇಹಿತ್ ಕೈಗೆ ವಿಶೇಷ ಅಧಿಕಾರ: ಯಾರಿಗೆ ಅಭಯ? ಯಾರಿಗೆ ಅಪಾಯ
ಡ್ರೋನ್ ಪ್ರತಾಪ್, ಕಾರ್ತಿಕ್ ಹಾಗೂ ಸಂಗೀತಾ ಜೊತೆಗೆ ವರ್ತೂರು ಸಂತೋಷ್, ತನಿಷಾ ಹಾಗೂ ತುಕಾಲಿ ಸಂತು ಕೂಡ ಸ್ನೇಹಿತ್‌ಗೆ ಚೇಲ ಎಂದರು. ಇತ್ತ ಪವಿ ಪೂವಪ್ಪ, ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತು ಜೊತೆಯಲ್ಲೇ ಇರ್ತಾರೆ. ತುಕಾಲಿ ಸಂತುಗೆ ಚೇಲ ವರ್ತೂರು ಸಂತೋಷ್. ಯಾವಾಗಲೂ ಅಣ್ಣ ಅಣ್ಣ ಅಂತಿರುತ್ತಾರೆ ಎಮದು ಹೇಳಿದ್ದಾರೆ. ಹಾಗೇ ವಿನಯ್ ಸಹ, ಸಂತು ಪಂತು. ಇಬ್ಬರಲ್ಲಿ ಯಾರು ಚೇಲ ಅಂತ ಗೊತ್ತಿಲ್ಲ. ಆದರೆ, ಇಬ್ಬರೂ ಒಟ್ಟಿಗೆ ಇರುತ್ತಾರೆ. ಒಬ್ಬರಿಗೊಬ್ಬರ ಮಾತು ಕೇಳುತ್ತಿರುತ್ತಾರೆ. ಒಬ್ಬರಿಗೊಬ್ಬರು ಸಾಥ್ ಕೊಟ್ಟುಕೊಳ್ಳುತ್ತಿರುತ್ತಾರೆ ಎಂದು ತಮ್ಮ ಕಾರಣ ತಿಳಿಸಿದ್ದಾರೆ.
ಬಿಗ್‌ಬಾಸ್ ನಾಮಿನೇಷನ್‌ನಲ್ಲಿ ಸ್ನೇಹಿತ್ ತಮಗೆ ಸಿಕ್ಕ ಸೂಪರ್ ಸ್ಪೆಷಲ್ ಅಧಿಕಾರವನ್ನ ಬಳಸಿದ ತಮ್ಮ ‘ಅಣ್ಣ’ ವಿನಯ್‌ರನ್ನ ಬಚಾವ್ ಮಾಡಿ, ಹಾಗೇ, ನಮ್ರತಾನನ್ನೂ ಸ್ನೇಹಿತ್ ಸೇಫ್ ಮಾಡಿದರು. ದೊಡ್ಮನೆಯ ಬಹುತೇಕ ಸ್ಪರ್ಧಿಗಳಿಂದ ಚೇಲ ಎಂದು ಕರೆಸಿಕೊಂಡ ಸ್ನೇಹಿತ್ "ವಿನಯ್ ಅವರಲ್ಲಿ ಈ ಆಟವನ್ನ ಗೆಲ್ಲಲೇಬೇಕು ಅಂತ ಕಿಚ್ಚಿದೆ. ವಿನಯ್ ಅವರ ಸ್ವೀಟ್ ಸೈಡ್‌ನ ನಾನು ನೋಡಿದ್ದೀನಿ. ಟಾಸ್ಕ್‌ನಲ್ಲಿ ರಕ್ತ, ಬೆವರು ಸುರಿಸಿ ಆಡುತ್ತಾರೆ. ಅದು ನನಗೆ ಇಷ್ಟ. ಆ ತರಹದ ಪ್ಲೇಯರ್ ಇದ್ದರೆ, ನಮಗೂ ಒಂದು ಮೋಟಿವೇಷನ್. ನಾನು ವಿನಯ್ ಅವರಿಗೆ ಏನು ಮಾಡಿದ್ಧೀನಿ ಅಂತ ಒಂದಷ್ಟು ಜನ ನೋಡಿರಬಹುದು. ಅದಕ್ಕೆ ನಾನು ಚೇಲ ಅನಿಸಿರಬಹುದು. ಆದರೆ, ವಿನಯ್ ಅವರು ನನಗೇನು ಮಾಡಿದ್ದಾರೆ ಅಂತ ನನಗೆ ಮಾತ್ರ ಗೊತ್ತು" ಎಂದು ಹೇಳಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.