ಬಿಗ್‌ಬಾಸ್ ಮನೆಯಲ್ಲಿ ಫೇಕ್ ಅಂದ್ರೆ ಸಂಗೀತಾ, ವಿನ್ನರ್ ಪಕ್ಕಾ ಇವರೇ ಆಗೋದು: ತನಿಷಾ ಕುಪ್ಪಂಡ
Bigg Boss Kannada 10 Tanisha Kuppanda: ಆ ಸಂದರ್ಭದಲ್ಲಿ ತುಂಬ ಬೇಜಾರಾಯ್ತು ನನಗೆ. ನಾನು ಇನ್ನಷ್ಟು ದಿನ ಉಳಿದುಕೊಳ್ಳಲು ಅರ್ಹಳು ಎಂಬ ಆತ್ಮವಿಶ್ವಾಸದಲ್ಲಿಯೇ ನಾನಿದ್ದೆ ಎಂದು ತನಿಷಾ ಹೇಳಿದ್ದಾರೆ.
Tanisha Kuppanda: ಬಿಗ್‌ಬಾಸ್ ಮನೆಯಲ್ಲಿ ‘ಬೆಂಕಿ’ ಎಂದೇ ಎಲ್ಲರಿಂದಲೂ ಹೇಳಿಸಿಕೊಳ್ಳುತ್ತಿದ್ದವರು ತನಿಷಾ ಕುಪ್ಪಂಡ. ಸ್ನೇಹಿತರಿಗೆ ಬೆಚ್ಚನೆಯ ಭಾವ ನೀಡುತ್ತ, ಎದುರಾಳಿಯಾಗಿ ನಿಂತರೆ ಸುಡುವ ಕೋಪವನ್ನೂ ತೋರುತ್ತಿದ್ದ ಅವರಿಗೆ ಈ ಬಿರುದು ಒಪ್ಪುವಂಥದ್ದೇ ಆಗಿದೆ. ನಡುವಲ್ಲಿ ಕಾಲುನೋವಾಗಿ ವಾಪಸ್ ಬರುತ್ತಾರೋ ಇಲ್ಲವೋ ಎಂಬ ಹಂತ ತಲುಪಿದರೂ, ಬಿಡದೇ ವಾಪಸ್ ಬಂದು ಸಾಕಷ್ಟು ಆಟವಾಡಿ ನೂರಕ್ಕೂ ಅಧಿಕ ದಿನ ಉಳಿದಿಕೊಂಡಿದ್ದ ತನಿಷಾ ಕುಪ್ಪಂಡ ಕಳೆದ ವಾರ ಮಿಡ್‌ವೀಕ್ ಎಲಿಮಿನೇಷನ್‌ನಲ್ಲಿ ಮನೆಯಿಂದ ಹೊರಗೆ ಬಂದಿದ್ದರು. ‘ಇನ್ನಷ್ಟು ದಿನ ಉಳಿದುಕೊಳ್ಳುತ್ತೇನೆ’ ಎಂಬ ವಿಶ್ವಾಸದಲ್ಲಿಯೇ ಇದ್ದ ಅವರಿಗೆ ಎಲಿಮಿನೇಷನ್ ಶಾಕ್ ಕೊಟ್ಟಿತ್ತು. ಅದಕ್ಕಾಗಿ ಹೋಗುವಾಗ ಕಣ್ಣೀರು ಹಾಕುತ್ತ ಮನೆಯ ಸದಸ್ಯರಿಗೂ ಜರಿದು, ‘ಬಿಗ್‌ಬಾಸ್ ಯಾಕಿಷ್ಟುಕೆಟ್ಟದಾಗಿ ಕಳಿಸಿಕೊಡ್ತೀರಾ?’ ಎಂದು ಕೇಳುತ್ತಲೇ ಹೊರಗೆ ಹೋದರು. ಆದರೆ ಈ ವಾರದ ವೀಕೆಂಡ್ ಎಪಿಸೋಡ್‌ನಲ್ಲಿ ಮತ್ತೆ ವೇದಿಕೆಗೆ ಬಂದು ಕಿಚ್ಚನ ಜೊತೆಗೆ ಬಿಚ್ಚುಮಾತುಗಳನ್ನಾಡಿದ ತನಿಷಾ ಕುಪ್ಪಂಡ ಮನೆಯಿಂದ ಹೊರಗೆ ಬಂದಕೂಡಲೇ ಜಿಯೊಸಿನಿಮಾಗೆ ಎಕ್ಸ್‌ಕ್ಲ್ಯೂಸಿವ್ ಸಂದರ್ಶನ ನೀಡಿದ್ದಾರೆ.
ಮಿಡ್ ವೀಕ್ ಎಲಿಮಿನೇಷನ್ ಅನುಭವ ಹೇಗಿತ್ತು?
ಆ ಸಂದರ್ಭದಲ್ಲಿ ತುಂಬ ಬೇಜಾರಾಯ್ತು ನನಗೆ. ನಾನು ಇನ್ನಷ್ಟು ದಿನ ಉಳಿದುಕೊಳ್ಳಲು ಅರ್ಹಳು ಎಂಬ ಆತ್ಮವಿಶ್ವಾಸದಲ್ಲಿಯೇ ನಾನಿದ್ದೆ. ಆ ನಂಬಿಕೆ ಮುರಿದುಹೋಯಿತು ಎಂಬ ಬೇಜಾರಿದೆ. ಆದರೆ ಆಚೆ ಬಂದು ಸ್ವಲ್ಪ ರಿಲ್ಯಾಕ್ಸ್ ಆಗಿ ಯೋಚಿಸಿದಾಗ ನನ್ನ ಜರ್ನಿ ನನಗೆ ಖುಷಿ ಕೊಟ್ಟಿದೆ. ನಾನು ಮಾಡಬೇಕಾದ ಎಲ್ಲ ಕೆಲಸಗಳನ್ನೂ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದೇನೆ.
ಹಾಗಾಗಿ ನಾನು ಬಿಗ್‌ಬಾಸ್ ಮನೆಯ ಒಳಗೆ ಇದ್ದಾಗ ಎಷ್ಟು ಖುಷಿಯಾಗಿದ್ದೆನೊ, ತೃಪ್ತಳಾಗಿದ್ದೇನೋ. ಆಚೆ ಬಂದಾಗಲೂ ಹಾಗೆಯೇ ಇದ್ದೇನೆ. ಎಲ್ಲರ ಮನೆಯ ಮಗಳಾಗಿದ್ದೇನೆ ನಾನು. ತುಂಬ ಖುಷಿ ಕೊಟ್ಟ ಪಯಣ ಇದು.
ಇದನ್ನೂ ಓದಿ: Bigg Boss 10: ಬಿಗ್ ಬಾಸ್ ಕನ್ನಡ ಸೀಸನ್ 10 ರ ಟಾಪ್ 6 ಫೈನಲಿಸ್ಟ್‌ಗಳ ಲಿಸ್ಟ್ ಇಲ್ಲಿದೆ
ಬಿಗ್‌ಬಾಸ್ ಮನೆಯಿಂದ ಯಾಕೆ ಹೊರಗೆ ಬಂದಿರಿ?
ತಪ್ಪು ಅಂತ ಏನೂ ಮಾಡಿಲ್ಲ ನಾನು. ಸಣ್ಣಪುಟ್ಟ ತಪ್ಪುಗಳನ್ನು ಮಾಡ್ತೀವಿ. ಅದು ಎಲ್ಲರಿಂದಲೂ ನಡೆಯುತ್ತದೆ. ಅದು ತಪ್ಪು ಎಂದು ಗೊತ್ತೂ ಆಗಿರಲ್ಲ. ಬಹುಶಃ ಜನರು ನಿರೀಕ್ಷೆ ಮಾಡುತ್ತಿರುವ ಯಾವುದನ್ನೋ ಹೊಸದಾಗಿ ಕೊಡಲಿಲ್ವೇನೋ ನಾನು ಅಂತ ಅನಿಸ್ತು. ನಾವು ಅಲ್ಲದೇ ಇರುವುದನ್ನು ಮಾಡಿದ್ರೆ ಖಂಡಿತವಾಗಿ ಫೇಕ್ ಆಗಿ ಕಾಣಿಸ್ತೀವಿ. ನಾನು ಫೇಕ್ ಆಗಿ ಏನನ್ನೂ ಮಾಡಲಿಲ್ಲ. ಜನರು ನನ್ನಿಂದ ಇನ್ನೂ ಏನನ್ನೋ ನಿರೀಕ್ಷೆ ಮಾಡ್ತಿದ್ರು ಅನಿಸುತ್ತದೆ. ಅನ್ನು ನಾನು ಕೊಡಲಿಲ್ವೇನೋ.
ಮತ್ತೆ ಮನೆಯೊಳಗೆ ಹೋಗಲು ಅವಕಾಶ ಸಿಕ್ಕರೆ ನಿಮ್ಮಲ್ಲಿ ನೀವು ಏನನ್ನು ಬದಲಿಸಿಕೊಳ್ಳುತ್ತೀರಿ?
ನನ್ನಲ್ಲಿ ನಾನು ಏನೂ ಬದಲಾವಣೆ ಮಾಡಿಕೊಳ್ಳಲ್ಲ. ಬಹುಶಃ ಇನ್ನಷ್ಟು ಮೆಲೊಡ್ರಾಮಾ ಆಡ್ ಮಾಡ್ಕೊಳ್ತಿದ್ದೆ ಅನಿಸುತ್ತದೆ. ಯಾಕಂದ್ರೆ ಎಷ್ಟೋ ಜನರನ್ನು ಮನೆಯೊಳಗಿದ್ದಾಗ ಅಯ್ಯೋ ಪಾಪ ಎಂದು ನೋಡುತ್ತಿದ್ದೆ. ಆದರೆ ಹೊರಗೆ ಬಂದು ನೋಡಿದಾಗ, ಅವರು ಕೊಡುವ ರಿಯಾಕ್ಷನ್ಗಳನ್ನು ನೋಡಿ, ಇವರನ್ನು ಅಯ್ಯೋ ಪಾಪ ಎಂದು ಕ್ಷಮಿಸಿದ್ದು ತಪ್ಪು ಅಂತ ನನಗನಿಸಿತು. ಸಾಮಾನ್ಯವಾಗಿ ನಾನು ಏನಾದ್ರೂ ಅನಿಸಿದ್ರೆ ನೇರವಾಗಿ ಹೇಳಿ ಅಷ್ಟಕ್ಕೆ ಬಿಟ್ಟುಬಿಡ್ತಿದ್ದೆ. ಆದರೆ ಹಾಗೆ ಬಿಡೋದನ್ನು ಕಡಿಮೆ ಮಾಡ್ತಿದ್ನೇನೋ. ಅಂದ್ರೆ ಇನ್ನೊಂಚೂರು ಡ್ರಾಮಾ ಮಾಡ್ತಿದ್ನೇನೋ.
ಮನೆಯೊಳಗೆ ನಿಮ್ಮ ಧ್ವನಿಯ ಬಗ್ಗೆ ಸಾಕಷ್ಟು ಚರ್ಚೆ ಬಂತು…
ಮೊದಲಿಂದಲೂ ನಾನು ನನ್ನ ಬೆಸ್ಟ್ ಅನ್ನು ಕೊಡುತ್ತ ಬಂದಿದೀನಿ. ಯಾರು ಏನೇ ಅಂದುಕೊಂಡರೂ, ಎಲ್ಲರೂ ಟಾರ್ಗೆಟ್ ಮಾಡಿದಾಗಲೂ ಮನಸ್ಸಿಗೆ ತೆಗೆದುಕೊಳ್ಳದೆ ಆಡಿದ್ದೇನೆ. ಯಾಕೆಂದರೆ ಅದು ಗೇಮ್. ಆದ್ರೆ ಪ್ರತಿ ಸಲ ನನ್ನ ಧ್ವನಿಯನ್ನು ಎತ್ತಿಕೊಂಡು ಮಾತಾಡಿದಾಗಲೂ, -ಅದನ್ನು ಹೆಚ್ಚು ನಮ್ರತಾ, ವಿನಯ್ ಮಾತಾಡಿದ್ದಾರೆ- ಪ್ರತಿ ನಾಮಿನೇಷನ್‌ನಲ್ಲಿಯೂ ಈ ಕಾರಣ ಕೊಟ್ಟಿದ್ದಾರೆ, ಅವರೇನೋ ಕಡಿಮೆ ಧ್ವನಿಯಲ್ಲಿ ಮಾತಾಡುತ್ತಾರೆ ಎನ್ನುವ ರೀತಿಯಲ್ಲಿ. ನಾನು ಯಾವ ಜಾಗದಲ್ಲಿ ಮಾತಾಡಬೇಕೋ ಆ ಜಾಗದಲ್ಲಿ ಮಾತಾಡಿದ್ದೇನೆ. ನಾರ್ಮಲ್ ಆಗಿ ಮಾತಾಡುವಾಗ ನನ್ನ ಧ್ವನಿಯಲ್ಲಿ ಮಾತಾಡುವಾಗ ಎದುರಿಗಿರುವವರಿಗೆ ಕಂಪರ್ಟಬಲ್ ಇರುವ ಧ್ವನಿಯಲ್ಲಿಯೇ ಮಾತಾಡುತ್ತಿರುತ್ತೇನೆ.
ಕಾಲು ನೋವಾಗಿದ್ದು ನಿಮಗೆ ಹಿನ್ನೆಡೆ ತಂದಿದೆ?
ಕಾಲುನೋವಾಗಿದ್ದ ದಿನ ನನಗೆ, ಶಾಕ್ ಆಗಿತ್ತು. ನನಗೆ ಯಾರೋ ಚಾಕು ಚುಚ್ಚಿಬಿಟ್ರೆನೋ ಅನ್ನುವಷ್ಟು ನೊಂದುಕೊಂಡದ್ದೆ. ಇಷ್ಟು ಚೆನ್ನಾಗಿ ಆಡ್ತಿದ್ನಲ್ವಾ? ಯಾಕೆ ಹೀಗೆ ಕಷ್ಟಕೊಟ್ಟೆ ಎಂದು ದೇವರನ್ನೆಲ್ಲ ಬೈದುಕೊಂಡಿದ್ದೇನೆ. ಕಾಲು ನೋವು ಮಾಡಿ ಮನೆಯೊಳಗೆ ಹೋಗದೇ ಇರುವ ಹಾಗೆ ಮಾಡಿಬಿಟ್ಯಲ್ಲಾ ಎಂದು ದೂರಿದ್ದೇನೆ. ಆ ವಿಷಯದಲ್ಲಿ ನಾನು ಬಿಗ್‌ಬಾಸ್ ಟೀಮ್‌ಗೆ ಥ್ಯಾಂಕ್‌ಫುಲ್ ಆಗಿದ್ದೇನೆ. ಬಹಳಷ್ಟು ಟಾಸ್ಕ್‌ಗಳು ಕಾಲುನೋವು ಆಗಿದ್ದರೂ ಆಡಬಹುದು ಎನ್ನುವ ರೀತಿಯಲ್ಲಿಯೇ ಇರುತ್ತಿದ್ದವು. ಕಾಲು ನೋವು ನನ್ನನ್ನು ಯಾವುದೋ ನಾಲ್ಕು ಫಿಜಿಕಲ್ ಟಾಸ್ಕ್‌ನಿಂದ ಹೊರಗಿಟ್ಟಿರಬಹುದು ಬಿಟ್ರೆ, ಉಳಿದನ್ನು ನಾನು ಆಡಲು ಸಮರ್ಥಳಾಗಿದ್ದೆ. ಚಾನ್ಸ್ ಸಿಗಬೇಕಿತ್ತಷ್ಟೆ.
ಅಲ್ಲದೇ ಟಾಸ್ಕ್ ಅಂತ ಬಂದಾಗ ಅದು ಬರೀ ಮೂವತ್ ಪರ್ಸಂಟ್ ಅಷ್ಟೇ ಇರುತ್ತದೆ. ಅದಕ್ಕಿಂತ ಪರ್ಸನಾಲಿಟಿ ಮುಖ್ಯ ಎಂದು ಸುದೀಪ್ ಅವರು ಮೊದಲೇ ಕ್ಲಿಯರ್ ಆಗಿ ಹೇಳಿದ್ದರು.
ಇದನ್ನೂ ಓದಿ: Namratha Eliminated: ಬಿಗ್ ಬಾಸ್ ಮನೆಯಿಂದ ನಮ್ರತಾ ಗೌಡ ಔಟ್..!
ನೀವು, ಸಂಗೀತಾ, ಕಾರ್ತಿಕ್ ಟ್ರಯೋ ಫ್ರೆಂಡ್‌ಷಿಪ್ ಬಗ್ಗೆ…?
ಮೊದಲಿನಿಂದ ನನಗೆ ಒಟ್ಟಿಗೆ ಇದ್ದಿದ್ದರಿಂದ ಸಂಗೀತಾ, ಕಾರ್ತಿಕ್, ನನ್ನ ನಡುವೆ ಟ್ರಯೊ ಫ್ರೆಂಡ್‌ಷಿಪ್ ಬೆಳೀತು. ಆದರೆ ಅವರಿಬ್ಬರೂ ಸ್ವಲ್ಪ ಜಾಸ್ತಿ ಕ್ಲೋಸ್ ಆಗಿರುವುದು ನನಗೆ ಖಂಡಿತವಾಗಲೂ ಗೊತ್ತಿತ್ತು. ಆ ಕಾರಣಕ್ಕೇ ನಾನು ಇದು ಗುಂಪಲ್ಲ. ನನಗೆ ಇವರ ಜೊತೆಗೆ ಹೆಚ್ಚು ಮಾತಾಡಬೇಕು ಅನಿಸುತ್ತದಷ್ಟೆ ಎಂದು ಹೇಳಿಕೊಂಡು ಎಲ್ಲರ ಜೊತೆ ಮಾತಾಡಿಕೊಂಡು ಓಡಾಡಿಕೊಂಡೇ ಇದ್ದೆ. ತನಿಷಾ ಅವರ ದುಃಖಕ್ಕೆ ಸ್ಪಂದಿಸುವುದಕ್ಕೆ ಪ್ರತಿ ಸಲ ಇರುತ್ತಿದ್ದಳು. ಆದರೆ ತನಿಷಾಗೆ, ತನಿಷಾ ಥರ ಯಾರೂ ಇರಲಿಲ್ಲ. ನನ್ನ ದುಃಖಕ್ಕಾಗಲಿ, ಖುಷಿಗಾಗಲಿ, ನನ್ನ ಕೋಪಕ್ಕಾಗಲಿ ಸ್ಪಂದಿಸುವವರು ಯಾರೂ ಇರಲಿಲ್ಲ. ಸಂಗೀತಾಗೆ ಏನು ಸಮಸ್ಯೆ ಎಂದರೆ, ಫ್ರೆಂಡ್ಸ್ ಅಂದ್ರೆ ಅವರನ್ನು ಸ್ವಲ್ಪ ತಲೆಮೇಲೆ ಇಟ್ಕೋಬೇಕು.ಆಗ ಅವರಿಗೆ ಸಮಾಧಾನ ಆಗುತ್ತದೆ. ಇಲ್ಲಾ ಅಂದ್ರೆ ಸಮಾಧಾನ ಆಗುವುದಿಲ್ಲ. ನಾನು ಜಗಳ ಆಯ್ತು ಅಂದ್ರೆ ಅಲ್ಲಲ್ಲೇ ಬಿಟ್ಟು ಹೋಗ್ತಾ ಇರ್ತೀನಿ. ಅವ್ರು ಜನರನ್ನೇ ಬಿಟ್ಟು ಹೋಗ್ತಿರ್ತಾರೆ. ಹಾಗಾಗಿ ಅವರು ತಪ್ಪು ಮಾಡಿದ್ರೂ ತುಂಬ ಬೇಗ ಕ್ಷಮಿಸಿ ನಾರ್ಮಲ್ ಆಗಿಬಿಡ್ತಿದ್ದೆ.
ಕಾರ್ತಿಕ್ ವಿಚಾರಕ್ಕೆ ಬಂದ್ರೆ, ಕಾರ್ತಿಕ್ ಸ್ವಲ್ಪ ತಡವಾಗಿ ಅರ್ಥ ಮಾಡಿಕೊಳ್ಳುವುದು. ತುಂಬ ಚೆನ್ನಾಗಿದ್ರು, ಕೊನೆ ಕ್ಷಣದಲ್ಲಿ ಬೇರೆ ಯಾರದೋ ಮಾತು ಕೇಳಿಕೊಂಡು ಎಡವಿದ್ರು ಅಂತ ಅನಿಸ್ತು. ಪ್ರತಿ ಸಲ ಹೇಳಬೇಕಾದ್ರೆ ನಾನು ಇರ್ತಿದ್ದೆ. ಆದ್ರೆ ಅವರು ಇರ್ತಿರ್ಲಿಲ್ಲ. ಹಾಗಾಗಿ ಒಬ್ರು ಸ್ವಲ್ಪ ಬೇಗ ದೂರವಾದ್ರು. ಇನ್ನೊಬ್ರು ತುಸು ತಡವಾಗಿ ದೂರವಾದ್ರು. ಆಚೆ ಬಹುಶಃ ನಾನು ಕಾರ್ತೀಕ್ ಜೊತೆಗೆ ಸ್ನೇಹ ಮುಂದುವರಿಸ್ತೀನಿ.
ಮನೆಯೊಳಗೆ ಯಾರು ಇಷ್ಟ? ಯಾರು ಫೇಕ್? ಯಾರು ಗೆಲ್ಲಬಹುದು?
ನನಗೆ ವರ್ತೂರು ಅವರ ಮುಗ್ಧತೆ ಇಷ್ಟ. ಯಾರದೋ ಮಾತಿಗೆ ಕೇಳಿಸಿಕೊಂಡು, ಬಲಿಯಾಗಿ ಯಾರ ಬಗ್ಗೆಯೋ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡುವುದಿಲ್ಲ ಅವರು. ಹಾಗಾಗಿ ಅವರ ಜೊತೆಗೆ ಮಾತಾಡುವುದು ನನಗೆ ಮೊದಲಿನಿಂದಲೂ ಇಷ್ಟ. ನನ್ನ ಪ್ರಕಾರ ಬಿಗ್‌ಬಾಸ್ ಮನೆಯಲ್ಲಿ ಫೇಕ್ ಅಂದ್ರೆ, ಸಂಗೀತಾ. ಜೆನ್ಯೂನ್ ಅನಿಸುವುದು ವರ್ತೂರು ಸಂತೋಷ್. ನನ್ನ ಪ್ರಕಾರ ಗೆಲ್ಲಬಹುದು ಅನಿಸುವುದು ಸಂಗೀತಾ. ಆದರೆ ನನಗೆ ವಿನ್ ಆಗಬೇಕು ಎಂದುನನಗೆ ಇರುವುದು ಕಾರ್ತಿಕ್.
ಜಿಯೊ ಸಿನಿಮಾ ಫನ್‌ಟಾಸ್ಕ್‌ಗಳ ಬಗ್ಗೆ ಹೇಳಿ?
ಜಿಯೊ ಸಿನಿಮಾ ಫನ್ ಫ್ರೈಡೆ ಟಾಸ್ಕ್‌ಗಳು ಯಾವಾಗ ಬಂದಿದ್ಯೋ ಅವುಗಳನ್ನು ಸಾಕಷ್ಟು ಎಂಜಾಯ್ ಮಾಡಿದೀನಿ ನಾನು. ಮ್ಯೂಸಿಕಲ್ ಪಾಟ್ ಅಂತೊಂದು ಗೇಮ್ ಮಾಡಿದ್ರು. ಅದರಲ್ಲಿ ನಾನು ಗೆದ್ದೆ ಕೂಡ. ಆ ಟಾಸ್ಕ್ ನಂಗೆ ತುಂಬ ಇಷ್ಟವಾಯ್ತು. ಯಾಕಂದ್ರೆ ಅಸಮರ್ಥರು ಎಂದು ನಾವು ಮನೆಯೊಳಗೆ ಎಂಟರ್ ಆಗಿದ್ವಿ. ಇಡೀ ವಾರ ಕೆಲಸ ಮಾಡು ಕೆಲಸ ಮಾಡು ಅಂದ್ಕೊಂಡು ಇದ್ವಿ. ಅವರಾದ್ಮೇಲೆ ತಿನ್ನು, ಅವರಾದ್ಮೇಲೆ ಮಲಗು. ಲೈಟ್ ಆಫ್ ಆಗೋವರೆಗೂ ಕಾಯಬೇಕು ಹೀಗೆಯೇ ಕಳೆದಿದ್ವಿ. ಸಾಕಾಗಿಬಿಟ್ಟಿತ್ತು. ಆ ವಾರ ಬಂದ ಮ್ಯೂಸಿಕಲ್ ಪಾಟ್ ಬಂದಾಗ ಎಂಜಾಯ್ ಮಾಡಿದೀನಿ.
ಬಿಗ್‌ಬಾಸ್ ಮನೆಯಿಂದ ಆಚೆಬಂದು ಏನು ಮಿಸ್ ಮಾಡ್ಕೋತಿದೀರಿ
ಮೈಕ್. ಮೈಕ್ ಅನ್ನೋದು ನನ್ನ ದೇಹದ ಒಂದು ಭಾಗವೇ ಆಗಿಬಿಟ್ಟಿದೆ. ಎರಡನೇದಾಗಿ ಬಿಗ್‌ಬಾಸ್ ಧ್ವನಿ. ನೀವು ತುಂಬ ತಿದ್ದಿದೀರಾ, ಪ್ರೀತಿ ಕೊಟ್ಟಿದೀರಾ…. ನಾವು ಮುಂದೆ ನಡೆಯುವುದಕ್ಕೆ ದಾರಿಯೇ ಇಲ್ಲ ಅಂದಾಗ ಹೆಜ್ಜೆ ಎಲ್ಲಿ ಇಡಬಹುದು ಎಂದು ತೋರಿಸಿಕೊಟ್ಟಿದೀರಾ? ನಾನು ಲೋ ಆಗಿದ್ದಾಗ ನನಗೆ ಸಾಂತ್ವನ ಹೇಳಿದ್ದೀರಾ… ನಿಮ್ಮ ಕಡೆಯಿಂದ ಸಮಾನವಾದ ಪ್ರೀತಿ ಕಾಣಿಸ್ತಾ ಇತ್ತು. ನಮ್ಮ ಮನೆಯವರೂ ಇಷ್ಟು ಕೇರ್ ಮಾಡಿರ್ಲಿಲ್ವೇನೋ… ಅಷ್ಟು ಪ್ರೀತಿ ಕೊಟ್ಟಿದೀರಾ… ನಾನು ಇದನ್ನು ಯಾವತ್ತಿಗೂ ಮರೆಯಲಾರೆ….
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.