Drone Prathap hospitalized : ಡ್ರೋನ್‌ ಪ್ರತಾಪ್‌ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಾಗಿದೆ ಎಂದು ಹೇಳಲಾಗಿದೆ. ಬಿಗ್‌ ಬಾಸ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಯೊಬ್ಬರು ಎರಡು ಬಾರಿ ಆಸ್ಪತ್ರೆ ಮೆಟ್ಟಿಲು ಹತ್ತಿದ್ದು. ಸಧ್ಯ ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅಸಲಿಗೆ ಪ್ರತಾಪ್‌ಗೆ ಏನಾಯ್ತು..? 


COMMERCIAL BREAK
SCROLL TO CONTINUE READING

 ಹೌದು.. ಇತ್ತೀಚಿಗಷ್ಟೇ ಪ್ರತಾಪ್‌ ಟಾಸ್ಕ್‌ ವೇಳೆ ಕಣ್ಣಿಗೆ ಸೋಪಿನ ನೀರು ಬಿದ್ದು ಆಸ್ಪತ್ರೆ ಸೇರಿದ್ದರು, ಇದೀಗ ಮತ್ತೆ ಆರೋಗ್ಯ ಸಮಸ್ಯೆಗೆ ಗುರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಆಹಾರದಲ್ಲಿ ವ್ಯತ್ಯಾಸವಾದ ಹಿನ್ನೆಲೆ ಪ್ರತಾಪ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಫುಡ್‌ ಪಾಯಿಸನ್‌ ಆಗಿದೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ಶೂಟಿಂಗ್‌ ವೇಳೆ ಕರೆಂಟ್‌ ಹೋದಾಗ.. ರಜನಿಕಾಂತ್‌ ನನ್ನ ಹಿಂದೆ ಬಂದು...! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ರಂಭಾ


ಇನ್ನು ಪ್ರತಾಪ್‌ ಆಸ್ಪತ್ರೆಗೆ ದಾಖಲಾದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ, ಕೋವಿಡ್ ಸೋಂಕು ತಗಲಿರಬಹುದಾ..? ಏನಾದರೂ ಗಂಭೀರ ಆರೋಗ್ಯ ಸಮಸ್ಯೆ ಇರಬಹುದಾ..? ಅಂತ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಅವರ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.


ಸಧ್ಯ ಪ್ರತಾಪ್‌ ಅವರ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ, ʼಊಟದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ, ಚಿಕಿತ್ಸೆ ಪಡೆದಿದ್ದಾರೆ, ಮತ್ತೆ ಪ್ರತಾಪ್‌ ಬಿಗ್‌ಬಾಸ್‌ ಮನೆ ಸೇರಿದ್ದಾರೆʼ ಎಂದು ಅವರ ತಂಡದ ಸದಸ್ಯರು ಮಾಹಿತಿ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.