Bigg Boss Kannada 10 : ‘ಬಿಗ್‌ಬಾಸ್ ಮನೆಯಲ್ಲಿ ಮಹಿಳೆಯರಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲವಂತೆ. ಈ ರೀತಿಯ ಪ್ರಶ್ನೆಯೊಂದು ದೊಡ್ಮನೆಯಲ್ಲಿ ಕೇಳಿ ಬಂದಿದೆ. ಇಂದು ಬಿಡುಗಡೆಯಾದ ಪ್ರೋಮೊ ನೋಡಿದವರ ಮನಸಲ್ಲಿ ಈ ಪ್ರಶ್ನೆ ಉದ್ಭವಿಸಿದೆ. ಹಾಗಾದ್ರೆ ಈ ಸಂಶಯ ಉಂಟಾಗಳು ಕಾರಣವೇನು..? ಬನ್ನಿ ನೋಡೋಣ..


COMMERCIAL BREAK
SCROLL TO CONTINUE READING

ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಒಂದು ಟಾಸ್ಕ್‌ ನೀಡಿದೆ. ಆ ಟಾಸ್ಕ್ ಆಡಲು ನೀರಲ್ಲಿ ಮುಳುಗುವ, ಉತ್ತಮ ಗುರಿ ಹೊಂದಿರುವ ನಾಲ್ಕು ಸದಸ್ಯರ ಅಗತ್ಯ ಇದೆ ಎಂದು ಬಿಗ್‌ಬಾಸ್ ಹೇಳಿದ್ದಾರೆ. ಟಾಸ್ಕ್‌ಗೆ ಆಯ್ಕೆ ಮಾಡುವಾಗ ವಿನಯ್‌, ‘ನಾನು, ಕಾರ್ತಿಕ್, ಮೈಕಲ್ ಮತ್ತು ತುಕಾಲಿ’ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಆಮಿರ್ ಖಾನ್​ ಮನೆಯಲ್ಲಿ ಮದುವೆ ಸಂಭ್ರಮ : ಇರಾ ಖಾನ್​ ಮದುವೆ ಶಾಸ್ತ್ರಗಳ ಫೋಟೋ ವೈರಲ್​


ಇದಕ್ಕೆ ಅಸಮಧಾನ ವ್ಯಕ್ತಪಡಿಸಿರುವ ಸಂಗೀತಾ, ‘ನಾನು ಯಾಕೆ ಬೇಡ ಅಂತ ಹೇಳಿಲ್ಲ ನೀವು. ಮಹಿಳೆಯರು ಹೀಗೆಯೇ ಗೆಲ್ಲಲು ಸಾಧ್ಯವಾಗ್ತಿಲ್ಲ’ ಎಂದು ತಕರಾರು ತೆಗೆದಿದ್ದಾರೆ. ಇದಕ್ಕೆ ವಿನಯ್, ‘ಮನ್ ವುಮನ್ ಎಂದು ಬೇರೆ ಮಾಡಿ ನೋಡುವುದು ಸರಿಯಲ್ಲ. ಈ ಮನೆಯಲ್ಲಿ ನಿನ್ನ ಬಾಯಲ್ಲಿ ಮಾತ್ರ ಯಾಕೆ ಮನ್ ವುಮನ್ ಅನ್ನೋ ತರತಮದ ಮಾತು ಬರೀ ನಿನ್ನ ಬಾಯಲ್ಲಿ ಕೇಳಿಸುತ್ತದೆ?’ ಎಂದು ವಿನಯ್ ಗರಂ ಆಗಿದ್ದಾರೆ. 


ಇದಕ್ಕೆ ಸಂಗೀತಾ ಕೂಡ ‘ಅವಕಾಶ ಸಿಕ್ತಿದೆ ಅಂತ ಬೇರೆ ವಿಷಯನೆಲ್ಲ ಇಲ್ಲಿಗೆ ಎಳೆದು ತರಬೇಡಿ’ ಎಂದು ಸಂಗೀತಾ ಕೂಡ ಅಷ್ಟೇ ಗಟ್ಟಿಯಾಗಿ ಮಾತಾಡಿದ್ದಾರೆ. ತನಿಷಾ ಕೂಡ ಸಂಗೀತಾ ವಿರುದ್ಧ, ‘ನೀವು ಆಡಿದ ಎಲ್ಲ ಟಾಸ್ಕ್‌ಗಳಲ್ಲಿಯೂ ಫರ್ಪೆಕ್ಟ್ ಆಗಿ ಆಡಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ ಮತ್ತೊಮ್ಮೆ ಬಿಗ್‌ಬಾಸ್ ಮನೆಯಲ್ಲಿ ಮಹಿಳೆ-ಪುರುಷರ ನಡುವಿನ ತರತಮದ ಬಗ್ಗೆ ಚರ್ಚೆ ಶುರುವಾಗಿದೆ. ಅದು ಜೋರಾಗಿಯೂ ಮುಂದುವರಿಯುತ್ತಿದೆ. ಇದರ ಪರಿಣಾಮ ಏನಾಗುತ್ತದೆ? ಕಾಲವೇ ಉತ್ತರಿಸಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.