ಪ್ರತಿ ಬಾರಿ ಟಾಸ್ಕ್‌ನಲ್ಲೂ ಹೈಡ್ರಾಮಾ! ವಾರವಿಡಿ ಭೇಷ್ ಅನಿಸಿಕೊಂಡು ಕೊನೆಯಲ್ಲಿ ಎಡವಿದ್ರಾ ಕಾರ್ತಿಕ್?
Bigg Boss 10: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಈ ಬಾರಿ ಪ್ರತಿ ಟಾಸ್ಕ್‌ನಲ್ಲೂ ಹೈಡ್ರಾಮಾ ನಡೆಯುತ್ತಿದೆ. ಈ ವಾರವೂ ಟಾಸ್ಕ್‌ನಲ್ಲಿ ಎರಡು ಗುಂಪುಗಳಾಗಿ ಬಿಗ್ ಬಾಸ್ ಮಾಡಿದ್ದರು.
Bigg Boss 10: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಈ ಬಾರಿ ಪ್ರತಿ ಟಾಸ್ಕ್‌ನಲ್ಲೂ ಹೈಡ್ರಾಮಾ ನಡೆಯುತ್ತಿದೆ. ಈ ವಾರವೂ ಟಾಸ್ಕ್‌ನಲ್ಲಿ ಎರಡು ಗುಂಪುಗಳಾಗಿ ಬಿಗ್ ಬಾಸ್ ಮಾಡಿದ್ದರು. ಬಿಗ್ ಬಾಸ್‌ನಲ್ಲಿ ಟಾಸ್ಕ್ ಕೊಟ್ಟರೆ ಸಾಕು ಸ್ಪರ್ಧಿಗಳ ಮಧ್ಯೆ ಕಿತ್ತಾಟ ಶುರುವಾಗುತ್ತದೆ. ನವೆಂಬರ್ 23ರ ಎಪಿಸೋಡ್‌ನಲ್ಲಿ ಮೈಕೆಲ್ ನೇತೃತ್ವದ ಸಂಪತ್ತಿಗೆ ಸವಾಲ್ ತಂಡ ಹಾಗೂ ಸಂಗೀತಾ ನೇತೃತ್ವದ ಗಜಕೇಸರಿ ತಂಡದ ಮಧ್ಯೆ ಬಿಗ್ ಫೈಟ್ ನಡೆದಿದೆ.
ಇದನ್ನೂ ಓದಿ : Bigg Boss 10: ವಿನಯ್ ಗುಂಪು ಸೇರಿ ಫಾಲೋವರ್ಸ್ ಕಳೆದುಕೊಂಡ ಸಂಗೀತ! ಈ ವಾರ ಹೊರ ಬರೋದು ಪಕ್ಕಾ?
ಕೃತಕ ಹೂವುಗಳನ್ನು ನೆಟ್ಟು ಅದನ್ನು ಕಾಪಾಡಿಕೊಳ್ಳುವ ಟಾಸ್ಕ್ ನೀಡಲಾಗಿತ್ತು. ಈ ಹೂವನ್ನು ತಂಡದ ಸದಸ್ಯರು ಎದುರಾಳಿ ತಂಡದವರಿಂದ ರಕ್ಷಿಸಬೇಕಿತ್ತು. ಕೊನೆಯಲ್ಲಿ ಯಾರು ಹೆಚ್ಚು ಹೂವುಗಳನ್ನು ನೆಟ್ಟಿರುತ್ತಾರೋ ಆ ತಂಡ ಗೆದ್ದಂತೆ. ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ಆದರೆ ಸ್ನೇಹಿತ್ ತುಕಾಲಿ ಅವರ ಮೈಮೇಲೆ ಬಿದ್ದು ಅವರ ಕೈಗೆ ಪೆಟ್ಟಾಯಿತು. ಈ ವೇಳೆ ಸಂಗೀತಾ ತುಕಾಲಿ ತಂಡದ ಹೂವುಗಳನ್ನು ಎತ್ತಿಕೊಂಡರು. ಇದನ್ನು ಮೈಕೆಲ್ ಸಮಯಸಾಧಕಿ ಎಂದು ಕರೆದರು.
ಆಮೇಲೆ ಮೈಕೆಲ್ ಹೋಗಿ ಎದುರಾಳಿ ತಂಡದ ಹೂವುಗಳನ್ನು ಕಿತ್ತುಕೊಂಡರು. ಆ ಬಳಿಕ ವಿನಯ್ ಮತ್ತು ಕಾರ್ತಿಕ್ ಅವರಿಂದ ಹೂವನ್ನು ಕಸಿದುಕೊಳ್ಳಲು ಓಡಾಡುತ್ತಿದ್ದರು. ಈ ವೇಳೆ ಎರಡೂ ತಂಡಗಳ ಮಧ್ಯೆ ಕಿತ್ತಾಟ ಶುರುವಾಯಿತು. ಅಲ್ಲದೇ ಸಂಗೀತಾ ಮೇಲೆ ತುಕಾಲಿ ಸಹ ಬೇಸರಗೊಂಡರು. ಸಂಪತ್ತಿಗೆ ಸವಾಲ್ ತಂಡ ವಾರದ ಟಾಸ್ಕ್‌ನ್ನು ಗೆದ್ದಿತು. ಆಗ ಕ್ಯಾಪ್ಟನ್ಸಿ ಟಾಸ್ಕ್‌ಗೆ ಇಬ್ಬರನ್ನು ಆಯ್ಕೆ ಮಾಡಲು ಬಿಗ್ ಬಾಸ್ ಹೇಳಿದರು. ಈ ವೇಳೆಯೂ ಮತ್ತೆ ಜಗಳ ನಡೆಯಿತು. ಪ್ರತಿ ಬಾರಿ ಟಾಸ್ಕ್ ನಡೆದಾಗಲೂ ಈ ರೀತಿ ಜಗಳವಾಗುತ್ತಿರುವುದು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ನನ್ನ ಮರ್ಯಾದೆಗೆ ಭಂಗ ಬಂದಿದೆ.. ಅದಕ್ಕೆ..! ಮಹತ್ವದ ನಿರ್ಧಾರ ತೆಗೆದುಕೊಂಡ ʼಪುಷ್ಪಾʼ ನಟಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.