ಇಶಾನಿ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ಕುಳಿತ ಮೈಕಲ್: ಬಿಗ್ಬಾಸ್ನಲ್ಲಿ ಹೊಸ ಪ್ರೇಮ್ ಕಹಾನಿ.!
Bigg Boss 10 : ದಿನದಿಂದ ದಿನಕ್ಕೆ ಬಿಗ್ಹೌಸ್ನಲ್ಲಿ ಸ್ಪರ್ಧಿಗಳಿಗೆ ಟಾಸ್ಕ್‌ಗಳ ಬಿಸಿ ತಟ್ಟುತ್ತಿದೆ. ಇನ್ನು ಇದೇ ವೇಳೆ (Bigg Boss 10) ಬಿಗ್‌ಬಾಸ್ ಮನೆ ಹಲವು ಭಿನ್ನ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದೆ. ಸ್ಪರ್ಧಿಗಳ ನಡುವೆ ಹೊಸ ಸ್ನೇಹ, ವೈರತ್ವ, ಹೊಸ ಸಂಬಂಧ ರೂಪುಗೊಳ್ಳುತ್ತಿವೆ.
Bigg Boss Michael Ishani love : ಬಿಗ್‌ಬಾಸ್ ಮನೆಯಲ್ಲಿ ಒಂದೆಡೆ ಟಫ್ ಟಾಸ್ಕ್‌ಗಳ ಬಿಸಿ ಏರುತ್ತಿದ್ದರೆ, ಇನ್ನೊಂದೆಡೆ ಹೊಸ ಹೊಸ ಸಂಬಂಧಗಳು ಚಿಗುರೊಡೆಯುತ್ತಿವೆ. ಇಶಾನಿ ಕಣ್ಣ ನೋಟಕ್ಕೆ ಮೈಕಲ್ ಕ್ಲೀನ್ ಬೋಲ್ಡ್ ಆಗಿದ್ದಾರಾ? ಹೀಗೊಂದು ಅನುಮಾನವನ್ನು ಹುಟ್ಟುಹಾಕುತ್ತಿದೆ ಇಬ್ಬರ ನಡುವೆ ನಡೆದ ಸಂಭಾಷಣೆ.
ಇದನ್ನೂ ಓದಿ : ಸರಳ ಜೀವನ ನಡೆಸುವ ತಮಿಳು ನಟ ದಳಪತಿ ವಿಜಯ್ ಆಸ್ತಿ ಎಷ್ಟಿದೆ ಅಂತ ಗೊತ್ತಾ..! ಶಾಕ್ ಆಗ್ತೀರಾ..
ಹೌದು.. ಮನೆಯೊಳಗೆ ಒಂದೆಡೆ ತುಕಾಲಿ ಸಂತೋಷ್, ಗೌರೀಶ ಅಕ್ಕಿ, ಸ್ನೇಹಿತ್ ಮತ್ತು ನಮ್ರತಾ ಮಾತುಕತೆಯಲ್ಲಿ ತೊಡಗಿದ್ದರೆ, ಅಲ್ಲೇ ಪಕ್ಕದಲ್ಲಿದ್ದ ಮೈಕಲ್ ಮತ್ತು ಇಶಾನಿ ಬೇರೆಯದೇ ಲೋಕದಲ್ಲಿ ಕಳೆದುಹೋದಂತಿದ್ದರು. ಇಬ್ಬರು ಗಂಭೀರವಾಗಿ ಗುಪ್‌ಚುಪ್ ಮಾತುಕತೆ ನಡೆಸಿದ್ದರು.
ಮೈಕಲ್: ನಿಂಗೆ ನನ್ ಮೇಲೇ ನಂಬ್ಕೆನೇ ಇಲ್ಲ ಅಲ್ವಾ? ಯಾಕೆ?
ಇಶಾನಿ: ಅದ್ಕೆ ಟೈಮ್ ತಗೊಳತ್ತೆ. ನಾವು ಯಾವಾಗ ಅಷ್ಟೆಲ್ಲ ಮಾತಾಡಿದ್ವಿ?
ಮೈಕಲ್: ಹಮ್. ನಿಜ. ಮಾತಾಡಿಲ್ಲ. ಟೈಮೇ ಸಿಗ್ಲಿಲ್ವಲ್ಲಾ…. ಟೈಮ್ ಇದೆ… ಮಾತಾಡೋಣ… ನಿಂಗೆ ಇಷ್ಟವಾದ ವಿಷಯದ ಬಗ್ಗೆನೇ ಮಾತಾಡೋಣ… ನಿಂಗೆ ಯಾವ ವಿಷಯ ಇಷ್ಟ?
ಇಶಾನಿ: ನಂಗೆ ಅಧ್ಯಾತ್ಮ ಇಷ್ಟ…ನಿನ್ ಫೀಲಿಂಗ್ಸ್ ಏನಂತ ಗೊತ್ತಾಗ್ಬೇಕು… ನನ್ ಬಗ್ಗೆ ಅಲ್ಲ… ನಿನ್ ಬದುಕಿನ ಅನುಭವ ಏನು… ನಿಂಗೆ ಏನು ಅನಿಸುತ್ತೆ… ನಿನ್ ಮೈಂಡ್‌ಸೆಟ್ ಏನು…
ಮೈಕಲ್: ಹೇಳಿದೀನಲ್ಲಾ… ನನ್ ಲೈಫ್ ಸ್ಟೋರಿನೇ ಹೇಳಿದೀನಿ…
ಇಶಾನಿ: ಹೌದು… ನಂಗೆ ಸ್ವಲ್ಪ ಅನಿಸ್ತಿದೆ… ನಾನೂನೂ ಹಾಗೆ… ಒಂದು ಗೋಡೆ ಇದೆ ಅನ್ಸತ್ತೆ.
ಮೈಕಲ್: ನಂಗೆ ಗೋಡೆ ಇದೆ ಅನ್ಸತ್ತಾ? ನಂಗೆ ಇಲ್ಲ… ನಂಗೆ ನೀನೊಂದು ಗೋಡೆ ಕಟ್ಕೊಂಡಿದೀಯಾ ಅನ್ಸತ್ತೆ…
ಇಶಾನಿ: ಅದು ಹೌದು… ನಾನು ಹಾಗಿದೀನಿ….
ಈ ಮಾತುಕತೆ ನಡೆಯುತ್ತಿರುವ ಹಾಗೆಯೇ ಸ್ನೇಹಿತ್ ಮತ್ತು ನಮ್ರತಾ ಇವರನ್ನು ಗಮನಿಸಿ ಕಾಲೆಳೆಯಲು ಶುರುಮಾಡಿದರು.
ಸ್ನೇಹಿತ್: ಬಿಗ್‌ಬಾಸ್ ಇವರದೊಂದು ಸ್ಲೋಮೋಷನ್ ಶಾಟ್ ತಗೊಳ್ಳಿ…. ಯಾವ್ದಾದ್ರೂ ಒಳ್ಳೆಯ ಹಾಡು ಹಾಕಿ….
ನಮ್ರತಾ: ನಾವು ಹಿಂದುಗಡೆ ಬ್ಯಾಗ್ರೌಂಡ್ ಮ್ಯೂಸಿಕ್ ಹಾಕ್ತೀವಿ…
ಸ್ನೇಹಿತ್ ಮತ್ತು ನಮ್ರತಾ ಹಿಂದೆ ಹೋಗಿ ತಮಾಷೆ ಮಾಡತೊಡಗಿದ ಹಾಗೆ ಇಶಾನಿ, ‘ಇದು ಅತಿಯಾಯ್ತು’ ಎಂದು ನಾಚಿಕೊಂಡರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.