ಇಂದಿನಿಂದ ಶುರುವಾಗ್ತಿದೆ ಬಿಗ್ ಬಾಸ್ ಕನ್ನಡ 10: JioCinema ದಲ್ಲಿವೆ ಹತ್ತು ಹಲವು ವಿಶೇಷಗಳು!
Bigg Boss Kannada Season 10: ಕನ್ನಡ ಬಿಗ್ ಬಾಸ್‌ನ ಹೊಸ ಸೀಸನ್ ಅಕ್ಟೋಬರ್ 8 ರಿಂದ ಆರಂಭಗೊಳ್ಳಲಿದೆ. ಅಕ್ಟೋಬರ್ 8ನೇ ತಾರೀಖಿನ ಸಂಜೆ 6 ಗಂಟೆಗೆ ಬಿಗ್ ಬಾಸ್ ಅದ್ದೂರಿಯಾಗಿ ಆರಂಭಗೊಳ್ಳಲಿದೆ.
ಬೆಂಗಳೂರು : ಕಾಯುವಿಕೆ ಕೊನೆಗೊಳ್ಳುತ್ತಿದೆ. ಬಿಗ್ ಬಾಸ್ ಕನ್ನಡ 10ನೇ ವರ್ಷಾಚರಣೆಯ ಸೀಸನ್‌ಗೆ ಕ್ಷಣಗಣನೆ ಆರಂಭವಾಗಿದೆ. ಕುತೂಹಲ ರೋಮಾಂಚನ ಮುಗಿಲು ಮುಟ್ಟುತ್ತಿದೆ. ಕನ್ನಡ ಬಿಗ್ ಬಾಸ್‌ನ ಹೊಸ ಸೀಸನ್ ಅಕ್ಟೋಬರ್ 8 ರಿಂದ ಆರಂಭಗೊಳ್ಳಲಿದೆ. ಅಕ್ಟೋಬರ್ 8ನೇ ತಾರೀಖಿನ ಸಂಜೆ 6 ಗಂಟೆಗೆ ಬಿಗ್ ಬಾಸ್ ಅದ್ದೂರಿಯಾಗಿ ಆರಂಭಗೊಳ್ಳಲಿದೆ. ದೈನಂದಿನ ಸಂಚಿಕೆಗಳು ಪ್ರತಿದಿನ ರಾತ್ರಿ ಒಂಬತ್ತೂವರೆಗೆ ಪ್ರಸಾರವಾಗುತ್ತವೆ. ಆದರೆ ಬಿಗ್‌ಬಾಸ್ ಕನ್ನಡದ ಹತ್ತನೇ ವರ್ಷಾಚರಣೆಯ ಈ ಸೀಸನ್ ಅನ್ನು, ವಯಕಾಮ್18ನ ಒಟಿಟಿ ಫ್ಲ್ಯಾಟ್‌ಫಾರಂ ಆದ JioCinemaದಲ್ಲಿ, 24 ಗಂಟೆ ಲೈವ್ ಚಾನಲ್‌ನಲ್ಲಿ ಉಚಿತವಾಗಿ ವೀಕ್ಷಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ.
ನೂರು ದಿನಗಳ ಈ ರಂಜನೀಯ ಹಬ್ಬದ ಪ್ರತಿ ಕ್ಷಣಗಳನ್ನು ಆಸ್ವಾದಿಸಲು JioCinema 24 ಗಂಟೆ ಲೈವ್ ಚಾನಲ್ ಅವಕಾಶ ಮಾಡಿಕೊಡುತ್ತಿದೆ. ವಿಶಿಷ್ಟವೂ ವಿನೂತನವೂ ಆದ ಸಂವಾದ ಚಟುವಟಿಕೆಗಳ ಮೂಲಕ ಅಭಿಮಾನಿಗಳನ್ನು ರಂಜಿಸಲು JioCinema ಸಜ್ಜುಗೊಂಡಿದೆ. ಬಿಗ್‌ಬಾಸ್ ಮನೆಯೊಳಗೆ ನಡೆದ ಘಟನಾವಳಿಗಳು, ಟಾಸ್ಕ್‌ಗಳ ವಿವರಗಳನ್ನು ‘ಬಿಗ್ ನ್ಯೂಸ್’ ನ್ಯೂಸ್ ಬುಲೆಟಿನ್ ರೂಪದಲ್ಲಿ ಪ್ರೇಕ್ಷಕರಿಗೆ ತಲುಪಿಸುತ್ತದೆ. ದೊಡ್ಡಮನೆಯೊಳಗಿನ ರೋಚಕ ಘಟನೆಗಳ ವರದಿಯನ್ನು ಇಲ್ಲಿ ಆಸ್ವಾದಿಸಬಹುದು.
ಇದನ್ನೂ ಓದಿ : ಆ ಒಂದು ಡೈಲಾಗ್ ನಿಂದಾಗಿ ʼಲಿಯೋʼ ಗೆ ಹೊಸ ಸಮಸ್ಯೆ...! ಚಿತ್ರತಂಡದ ವಿರುದ್ಧ ದೂರು ದಾಖಲು
ಬಿಗ್‌ಬಾಸ್ ಮನೆಯೆಂದರೇ ಹಲವು ಕಥೆಗಳ ಗುಚ್ಛ. ಪ್ರತಿದಿನವೂ ಹತ್ತು ಹಲವು ರೋಚಕ ಕಥೆಗಳು ಇಲ್ಲಿ ಹುಟ್ಟಿಕೊಳ್ಳುತ್ತವೆ. ಅವುಗಳಲ್ಲಿ ಕೆಲವಷ್ಟನ್ನೇ ದೈನಂದಿನ ಎಪಿಸೋಡ್‌ಗಳಲ್ಲಿ ನೋಡಲು ಸಾಧ್ಯ. ಎಪಿಸೋಡ್‌ಗಳಲ್ಲಿ ಇಲ್ಲದ, ತೆರೆಯ ಹಿಂದಿನ ಕಥೆಗಳನ್ನು ನೀವು JioCinemaದ 24 ಗಂಟೆ ಲೈವ್‌ನಲ್ಲಿಉಚಿತವಾಗಿ ನೋಡಬಹುದು. ಇಂಥ ರೋಚಕ ಕಥೆಗಳನ್ನು ‘ಅನ್‌ಸೀನ್ ಕಥೆಗಳು’ ನಿಮಗೆ ಕಟ್ಟಿಕೊಡುತ್ತದೆ.
ಬಿಗ್‌ಬಾಸ್ ಮನೆಯೊಳಗೆ ಅವತ್ತು ನಡೆದ ಮುಖ್ಯ ಘಟನಾವಳಿಗಳನ್ನು ಸಂಕ್ಷಿಪ್ತವಾಗಿ ರಿಕ್ಯಾಪ್ ಮಾಡಿ ತೋರಿಸುವ ಪ್ರಯತ್ನವೇ ‘ಲೈವ್ ಶಾರ್ಟ್ಸ್’. ಲೈವ್‌ನಲ್ಲಿ ಮಿಸ್ ಮಾಡಿಕೊಂಡ ಮುಖ್ಯ ಘಟನೆಗಳನ್ನು ಲೈವ್ ಶಾರ್ಟ್ಸ್ ಮೂಲಕ ಆಸ್ವಾದಿಸಬಹುದು.
ಇದು ಬಿಗ್‌ಬಾಸ್ ಮನೆಯೊಳಗಿನ ಘಟನಾವಳಿಗೆ JioCinemaದಲ್ಲಿ ಪ್ರೇಕ್ಷಕರಿಗೆ ಪ್ರತಿಕ್ರಿಯಿಸಲು, ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡುವ ವೇದಿಕೆ. ಇಲ್ಲಿ ಪ್ರೇಕ್ಷಕರು ಚಾಟ್ ಮೂಲಕ ತಮ್ಮ ಅಭಿಪ್ರಾಯಗಳನ್ನು ದಾಖಲಿಸಬಹುದು.
ಇದು ಬಿಗ್‌ಬಾಸ್ ಷೋನ ಭಾಗವಾಗಲು ಪ್ರೇಕ್ಷಕರಿಗೆ ಇರುವ ಇನ್ನೊಂದು ವಿನೂತನ ಅವಕಾಶ. JioCinemaದ ‘ವಿಡಿಯೊ ವಿಚಾರ’ದ ಮೂಲಕ ಪ್ರೇಕ್ಷಕರು ಮನೆಯೊಳಗಿನ ಅಭ್ಯರ್ಥಿಗಳ ಬಗ್ಗೆ, ಟಾಸ್ಕ್‌ಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವಿಡಿಯೊ ಮಾಡಿ ಹಾಕಬಹುದು.
ಇದನ್ನೂ ಓದಿ : Bigg Boss: ಗಾಸಿಪ್ ಬೇಡ.. ನಾವು ಬಿಗ್‌ಬಾಸ್‌ಗೆ ಹೋಗ್ತಿಲ್ಲ: ಕ್ಲಾರಿಟಿ ಕೊಟ್ಟ ತಾರೆಯರಿವರು
ಬಿಗ್‌ಬಾಸ್ ಮನೆಯೊಳಗೆ ರಸವತ್ತಾದ ಕ್ಷಣಗಳಿಗೇನೂ ಕೊರತೆಯಿರುವುದಿಲ್ಲ. ಅದಕ್ಕೆ ನೀವೇ ಮೀಮ್ಸ್ ಕ್ರಿಯೇಟ್ ಮಾಡುವುದರ ಮೂಲಕ ಸ್ಪಂದಿಸಬಹುದು. JioCinemaದಲ್ಲಿನ ‘ಮೀಮ್ ದ ಮೊಮೆಂಟ್’ ಪ್ರೇಕ್ಷಕರಿಗೆ ಮನೆಯೊಳಗಿನ ಸ್ಪರ್ಧಿಗಳ ನಡವಳಿಕೆಯ ಮೇಲೆ ಮೀಮ್ಸ್ ಕ್ರಿಯೇಟ್ ಮಾಡುವ ಅವಕಾಶವನ್ನೂ ಕಲ್ಪಿಸುತ್ತಿದೆ.
JioCinemaದಲ್ಲಿ ಬಿಗ್‌ಬಾಸ್ ಕನ್ನಡವನ್ನು ಉಚಿತವಾಗಿ ನೋಡುವುದರ ಜೊತೆಗೆ ಬಹುಮಾನವನ್ನೂ ಗೆಲ್ಲುವ ಅವಕಾಶವಿದೆ. ಕಲರ್ಸ್ ಕನ್ನಡದಲ್ಲಿ ಪ್ರತಿದಿನದ ಎಪಿಸೋಡ್ ನೋಡಿ, ಅಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರವನ್ನು JioCinemaದಲ್ಲಿ ಕೊಡಬೇಕು. ಪ್ರತಿದಿನವೂ ಸರಿಯುತ್ತರ ನೀಡಿದ ಒಬ್ಬರಿಗೆ ಬಹುಮಾನ ಗೆಲ್ಲುವ ಸುವರ್ಣಾವಕಾಶ ಸಿಗುತ್ತದೆ.
ಇವಿಷ್ಟೇ ಅಲ್ಲದೇ ಇನ್ನೂ ಹಲವು ವಿಶೇಷಗಳನ್ನು JioCinema ವೇದಿಕೆ ಬಿಗ್‌ಬಾಸ್ ಕನ್ನಡದ ಅಭಿಮಾನಿಗಳಿಗೆ ಒದಗಿಸಿಕೊಡುತ್ತಿದೆ. ನೂರು ದಿನಗಳ ಹಬ್ಬವನ್ನು ಪ್ರತಿಕ್ಷಣವೂ ಆಚರಿಸಲು JioCinemaಗೆ ಭೇಟಿಕೊಡಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.