Bigg Boss Kannada Season 10: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ನಿನ್ನೆಯಿಂದ ಆರಂಭವಾಗಿದೆ. ಈ ಬಾರಿ ಹತ್ತನೇ ವರ್ಷದ ಸಂಭ್ರಮದಲ್ಲಿರುವ ಬಿಗ್‌ ಬಾಸ್‌ ತಂಡ ಆಟದ ರೀತಿಯಲ್ಲಿ ಕೊಂಚ ಬದಲಾವಣೆ ಮಾಡಿದೆ. 100 ದಿನಗಳ ಕಿರುತೆರೆ ಹಬ್ಬ ಶುರುವಾಗಿದೆ. ಈ ಬಾರಿ 11 ಜನ ಸ್ಪರ್ಧಿಗಳೂ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್‌ ಇದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಬಿಗ್‌ಬಾಸ್‌ ಮನೆಗೆ ಡ್ರೋನ್‌ ಪ್ರತಾಪ್‌ ಎಂಟ್ರಿ..! ಗೆದ್ದು ಬಾ ಎನ್ನುತ್ತಿದ್ದಾರೆ ಫ್ಯಾನ್ಸ್‌ 


ಪ್ರತಿಸಲ ವಾರದ ಕೊನೆಯಲ್ಲಿ ಪ್ರೇಕ್ಷಕರ ವೋಟಿಂಗ್‌ ಕೇಳುತ್ತಿದ್ದ ಸ್ಪರ್ಧಿಗಳು. ಈ ಸಲ ಬಿಗ್ ಬಾಸ್ ವೇದಿಕೆಯಲ್ಲಿಯೇ ವೋಟಿಂಗ್​ ಅಪೀಲ್‌ ಮಾಡಬೇಕಿತ್ತು. ಕಡಿಮೆ ಮತಗಳನ್ನು ಪಡೆದವರು ವೇಟಿಂಗ್‌ ರೂಮ್‌ನಲ್ಲಿ ಇರಬೇಕು. ಪ್ರೇಕ್ಷಕ ಒಪ್ಪಿಕೊಂಡವರು ಮಾತ್ರ ಬಿಗ್‌ ಬಾಸ್‌ ಮನೆಗೆ ಪ್ರವೇಶ ಪಡೆಯೋದು. 


ನಟಿ ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ನಟಿ ತನಿಷಾ ಕುಪ್ಪಂಡ, ರೈತ ವರ್ತೂರ್ ಸಂತೋಷ್​, ನಟ ಕಾರ್ತಿಕ್ ಮಹೇಶ್ ಮತ್ತು ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್‌ ಕಡಿಮೆ ಮತ ಪಡೆದು ವೇಟಿಂಗ್ ರೂಮ್‌ನಲ್ಲಿದ್ದರು. ಆದ್ರೂ ಇವರಿಗೆಲ್ಲಾ ಬಿಗ್​ ಬಾಸ್​ ಮನೆಗೆ ಎಂಟ್ರಿ ಸಿಕ್ಕಿದೆ.


11 ಮಂದಿ ಸ್ಪರ್ಧಿಗಳಲ್ಲಿ 6 ಮಂದಿಗೆ ಬಿಗ್​ ಬಾಸ್​  ಸ್ಪೆಷಲ್​ ಟಾಸ್ಕ್​ ಕೊಟ್ಟು ಆಯ್ಕೆ ಮಾಡಲಿದ್ದಾರೆ. ಸ್ಪೆಷಲ್ ಟಾಸ್ಕ್​ ಮೂಲಕ ಇವರ ಆಯ್ಕೆ ನಡೆಯುತ್ತೆ. 1 ವಾರದ ಬಳಿಕ ಮನೆಯಲ್ಲಿ ಯಾರು ಉಳಿದುಕೊಳ್ತಾರೆ, ಯಾರು ಹೊರಗೆ ಬರ್ತಾರೆ ಎಂಬುದು ನಿರ್ಧಾರವಾಗಲಿದೆ.   ​ 


ಇದನ್ನೂ ಓದಿ : ಇಂದಿನಿಂದ ಶುರುವಾಗ್ತಿದೆ ಬಿಗ್‌ ಬಾಸ್‌ ಕನ್ನಡ 10: JioCinema ದಲ್ಲಿವೆ ಹತ್ತು ಹಲವು ವಿಶೇಷಗಳು!  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.