Chitral Rangaswamy Shares About Bigg Boss Contestants: ಬಿಗ್‌ಬಾಸ್‌ ಮನೆಯಲ್ಲಿ ವಿನಯ್‌ ವರ್ತನೆ ಅತಿರೇಕಕ್ಕೆ ಏರಿದ್ದು, ಇತರೆ ಸ್ಪರ್ಧಿಗಳನ್ನು ಟೀಕಿಸುವುದು, ಅವಾಚ್ಯ ಶಬ್ಧಗಳಿಂದ ನಿಂದಿಸುವುದು, ಹೀಯಾಳಿಸಿ ಮಾತನಾಡುವುದನ್ನು ಮಾಡುತ್ತಿದ್ದಾರೆ.ಅದರಲ್ಲೂ ಸಂಗೀತಾಗೆ ಅವಾಚ್ಯ ಪದಗಳ ಬಳಕೆ ಮಾಡಿ ಬೀಪ್ ಹಾಕಿಸಿಕೊಂಡಿದ್ದರು. ಹಳ್ಳಿ ಮನೆಯಲ್ಲಿ ಟಾಸ್ಕ್‌ನಲ್ಲಿ ಇವರಿಬ್ಬರ ಜಗಳದಲ್ಲಿ ಗೌರವವಿಲ್ಲದೆ ಮಾತನಾಡಿದರು. ಈ ಬಗ್ಗೆ ಸೋಷಿಯಲ್‌ ಮಿಡಿಯಾದಲ್ಲಿ ಹಲವಾರು ಜನ ತಮ್ಮ ಆಕ್ರೋಶ ಹೊರಹಾಕುತ್ತಾ ಸುದೀಪ್‌ಗೆ ವಿನಯನ್ನು ಪ್ರಶ್ನಿಸಿಯೆಂದು ಮನವಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದೀಗೆ ಬಿಗ್‌ಬಾಸ್‌ನ ಗ್ರ್ಯಾಂಡ್ ಪ್ರೀಮಿಯರ್ ದಿನ ಕೊನೆ ಕ್ಷಣದಲ್ಲಿ ಬಿಗ್‌ಬಾಸ್ ಮನೆ ಪ್ರವೇಶಿಸುವ ಅವಕಾಶ ವಂಚಿತರಾದ ನಟಿ ಹಾಗೂ ಬಾಡಿ ಬಿಲ್ಡರ್ ಚಿತ್ರಾಲ್ ರಂಗಸ್ವಾಮಿ, ವಿನಯ್‌ ವರ್ತನೆ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಗ್ರ್ಯಾಂಡ್ ಪ್ರೀಮಿಯರ್ ದಿನ ಚಿತ್ರಾಲ್ ರಂಗಸ್ವಾಮಿ ಸುದೀಪ್ ವೇದಿಕೆಗೆ ಕರೆದಿದ್ದು, ಲೈವ್ ಆಡಿಯನ್ಸ್ ವೋಟಿಂಗ್‌ನಲ್ಲಿ 38% ಪಡೆದು ಹೊರ ಬರುವಂತಾಗಿತ್ತು. ಆದರೂ ಬಿಗ್‌ಬಾಸ್ ಶೋ ಫಾಲೋಅಪ್‌ನಲ್ಲಿರುವ ಚಿತ್ರಾಲ್ ಶೋ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಶೋ ಬಿಸಿ ಏರಿರುವಾಗ ತಮ್ಮ ಪ್ರಕಾರ ಯಾರು ಕಳಪೆ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.


ಇದನ್ನು ಓದಿ: Bigg Boss : ಶುರುವಾಗುತ್ತಲೇ ಮುರಿದುಬಿದ್ದ ಈಶಾನಿ - ಮೈಕೆಲ್‌ ಲವ್‌ ಸ್ಟೋರಿ! ‌


ಚಿತ್ರಾಲ್‌ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ "ನನ್ನ ಪ್ರಕಾರ 4 ಕಳಪೆಗಳು" ಎಂದು ಬರೆದು, ಅದಕ್ಕೆ ವಿನಯ್ ಕಳಪೆ ಎನ್ನುವುದಕ್ಕೆ ಕಾರಣ, "ಬಳೆ ತೊಡುವವರು ಎಂದು ಕೀಳಾಗಿ ಮಾತನಾಡಿದ್ದಕ್ಕೆ. ಇವನೊಬ್ಬನೇ ಗಂಡ್ಸು ಅನ್ನೋ ಹಂಗೆ ಆಡುವುದಕ್ಕೆ" ಮತ್ತೆ ನಮ್ರತಾ ಕಳಪೆ ಯಾಕಂದ್ರೆ ನಮ್ರತಾಗೆ ಇಂಡ್ಯೂಷಾಲಿಟಿ ಇಲ್ಲ. ಗಂಡಸಾಗಿ ಹೀಗೆ ಕಿರುಚುತ್ತಾರಾ? ಅಂದ್ರೆ ಏನು ಅರ್ಥ. ಕಿರುಚೋದು ಎಲ್ಲರೂ ಒಂದೇ. ಹಾಗೆ ತಾವೊಬ್ಬರೇ ನೀಟ್ ಆಗಿ ಬೆಳೆದಿರೋದು ಅನ್ನೋ ಹಾಗೆ ಆಡ್ತಾರೇ. ಬಳೆ ಬಗ್ಗೆ ವಿನಯ್ ಮಾತನಾಡಿದಾಗ ನಮ್ರತಾ ವಾಯ್ಸ್ ರೈಸ್ ಮಾಡಲಿಲ್ಲ." 


ಇನ್ನು ಮಿಕ್ಕ ಕಳಪೆಗಳು ಯಾರೆಂದು ಹೇಳಿದ್ದಾರೆಂದರೇ  ಸ್ನೇಹಿತ್‌. ಯಾಕಂದರೇ ಸ್ನೇಹಿತ್‌ಗೆ ಕಾರ್ತಿಕ್ ಬಗ್ಗೆ ಏನು ಅನ್ನಿಸುತ್ತದೆ ಅದನ್ನು ಅವನಿಗೆ ಹೇಳುವ ಧೈರ್ಯ ಇಲ್ಲದೇ ಎಲ್ಲದನ್ನೂ ವಿನಯ್‌ಗೆ ಒಪ್ಪಿಸೋದು. ಹಾಗೆ ಈತನಿಗೂ  ಇಂಡ್ಯಯವಿಷಾಲಿಟಿ ಇಲ್ಲ. ಮತ್ತು ಕೊನೆಯದಾಗಿ ಇಶಾನಿ ಕಳಪೆ . ಇದಕ್ಕೆ ಕಾರಣ ಆಕೆ ಈವರೆಗೆ ಒಂದೇ ಒಂದು ರ್ಯಾಪ್ ಸಾಂಗ್ ಹಾಡಿಲ್ಲ. ಇನ್ನು ಹೇಳುಕೊಳ್ಳುವಂತಹ ಕಾಂಟ್ರಿಬ್ಯೂಷನ್ ಇಲ್ಲ. ಬಳೆ ಬಗ್ಗೆ ವಿನಯ್ ಮಾತನಾಡಿದಾಗ ಇಶಾನಿ ಕೂಡ ವಾಯ್ಸ್ ರೈಸ್ ಮಾಡಲಿಲ್ಲ. ಇನ್ನು ರಕ್ಷಕ್ ಕೂಡ ಕಳಪೆ. ಆಟಕ್ಕುಂಟು ಲೆಕ್ಕಕ್ಕಿಲ್ಲ" ಎಂದು ಚಿತ್ರಾಲ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.